ETV Bharat / sports

ರಾಜಕೀಯ ಹಸ್ತಕ್ಷೇಪದಿಂದ ಶ್ರೀಲಂಕಾ ಕ್ರಿಕೆಟ್ ಕುಸಿಯುತ್ತಿದೆ: ಅಧ್ಯಕ್ಷ ರನಿಲ್ ವಿಕ್ರಮಸಿಂಘೆ - ​ ETV Bharat Karnataka

Sri Lankan cricket: ಒಂದು ಕಾಲದಲ್ಲಿ ಬಲಿಷ್ಠ ಶ್ರೀಲಂಕಾ ಕ್ರಿಕೆಟ್​ ತಂಡವು ವಿಶ್ವಕಪ್​, ಟಿ20 ವಿಶ್ವಕಪ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದು ಬೀಗಿತ್ತು. ಅಲ್ಲದೇ ವಿಶ್ವಶ್ರೇಷ್ಠ ಆಟಗಾರರನ್ನು ಜಗತ್ತಿಗೆ ಪರಿಚಯಿಸಿದೆ.

ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ
ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ
author img

By PTI

Published : Nov 23, 2023, 11:38 AM IST

ಕೊಲಂಬೊ(ಶ್ರೀಲಂಕಾ): ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಕಚ್ಚಾಟಕ್ಕೆ ಕ್ರಿಕೆಟ್​ ಮಂಡಳಿ ಬಲಿಯಾಗಿರುವುದು ವಿಪರ್ಯಾಸ. ದೇಶದ ಅಂತರಿಕ ರಾಜಕೀಯ ಸಂಘರ್ಷ ಮತ್ತು ಕ್ರಿಕೆಟ್ ವಿಚಾರದಲ್ಲಿ ಸರ್ಕಾರ​ದ ಅತಿಯಾದ ಹಸ್ತಕ್ಷೇಪದಿಂದಾಗಿ ಲಂಕಾ ಕ್ರಿಕೆಟ್​ ಮಂಡಳಿಯನ್ನು ಐಸಿಸಿ ಅಮಾನತು ಮಾಡಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ದೇಶದ ಕ್ರಿಕೆಟ್​ ಮಂಡಳಿಯನ್ನು ರಕ್ಷಿಸುವ ಅವಶ್ಯಕತೆ ಇದೆ ಎಂದಿದ್ದಾರೆ. 2024ರ ಬಜೆಟ್​ ಬಗ್ಗೆ ಚರ್ಚೆ ನಡೆಯುವ ವೇಳೆ ವಿಕ್ರಮಸಿಂಘೆ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದು, ಆಟಗಾರರಲ್ಲಿ ಶಿಸ್ತಿನ ಸಮಸ್ಯೆಗಳು, ಕ್ರಿಕೆಟ್​ ಮಂಡಳಿ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಮತ್ತು ಹಣಕಾಸಿನ ದುರುಪಯೋಗವಾಗಿದೆ. ಮ್ಯಾಚ್ ಫಿಕ್ಸಿಂಗ್ ಆರೋಪಗಳು, ಗುಂಪುಗಾರಿಕೆಯಿಂದಾಗಿ ಮಂಡಳಿಗೆ ಪೆಟ್ಟು ಬಿದ್ದಿದೆ. ಈಗಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಮೂಹಿಕ ಪ್ರಯತ್ನ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.

ಶ್ರೀಲಂಕಾ ಕ್ರೀಡಾ ಸಚಿವ ರೋಷನ್ ರಣಸಿಂಘ್ ಅವರು ಕ್ರಿಕೆಟ್ ಮಂಡಳಿ ನಿರ್ವಹಣೆಯ ವ್ಯವಹಾರಗಳ ಮೇಲಿನ ವ್ಯಾಜ್ಯಗಳನ್ನು ಪರಿಹರಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಈ ವಿವಾದವು ಎರಡು ಗುಂಪುಗಳನ್ನು ಒಳಗೊಂಡಿದೆ. ಅದಕ್ಕಾಗಿಯೇ ನಾವು ಈ ಸಮಸ್ಯೆಯನ್ನು ಹೊಸ ಕಾನೂನಿನೊಂದಿಗೆ ಇತ್ಯರ್ಥಗೊಳಿಸಲು ನಿರ್ಧರಿಸಿದ್ದೇವೆ ಎಂದು ವಿಕ್ರಮಸಿಂಘೆ ತಿಳಿಸಿದ್ದಾರೆ.

2023ರ ಏಕದಿನ ಪುರುಷರ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಲ್ಲಿ ಶ್ರೀಲಂಕಾ ತಾನು ಆಡಿದ 9 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಗೆದ್ದು 7ರಲ್ಲಿ ಸೋಲು ಕಂಡು ಟೂರ್ನಿಯನ್ನು ಮುಕ್ತಾಯಗೊಳಿಸಿತ್ತು. ಐಸಿಸಿ ಸದಸ್ಯತ್ವ ಹೊಂದಿರುವ ಕ್ರಿಕೆಟ್​ ಮಂಡಳಿಗಳು ಅಲ್ಲಿನ ಸರ್ಕಾರದ ಪ್ರಭಾವಕ್ಕೆ ಒಳಗಾಗದೇ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂಬ ನಿಯಮವಿದೆ. ಅದರೆ ಶ್ರೀಲಂಕಾ ಸರ್ಕಾರ ಕ್ರಿಕೆಟ್ ಮಂಡಳಿಯಲ್ಲಿ ರಾಜಕೀಯ ಹಸ್ತಕ್ಷೇಪದ ಮೂಲಕ ಐಸಿಸಿ ನಿಯಮಗಳನ್ನು ಉಲ್ಲಂಘಿಸಿತ್ತು. ಬಳಿಕ ತಕ್ಷಣವೇ ಜಾರಿಗೆ ಬರುವಂತೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಐಸಿಸಿ ರದ್ದುಗೊಳಿಸಿತ್ತು.

ಇದನ್ನೂ ಓದಿ: ಶ್ರೀಲಂಕಾ ಕ್ರಿಕೆಟ್ ತಂಡ ಅಮಾನತುಗೊಳಿಸಿದ ಐಸಿಸಿ: ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿಯಲಿರುವ ಲಂಕಾ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.