ETV Bharat / sports

ಏಷ್ಯಾ ಕಪ್‌: ಬಾಂಗ್ಲಾ ವಿರುದ್ಧ ಶ್ರೀಲಂಕಾ ತಂಡಕ್ಕೆ 5 ವಿಕೆಟ್​ಗಳ ಜಯ - ಈಟಿವಿ ಭಾರತ ಕನ್ನಡ

ಏಷ್ಯಾಕಪ್ ಟೂರ್ನಿಯ​ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿತು.

Asia cup 2023
Asia cup 2023
author img

By ETV Bharat Karnataka Team

Published : Aug 31, 2023, 10:59 PM IST

ಪಲ್ಲೆಕಲೆ (ಶ್ರೀಲಂಕಾ): ಬಿ ಗ್ರೂಪ್​ ತಂಡಗಳ ನಡುವೆ ನಡೆಯುತ್ತಿರುವ ಏಷ್ಯಾಕಪ್​ ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ 5 ವಿಕೆಟ್​​ಗಳ ಗೆದ್ದು ಬೀಗಿದೆ. ಪಲ್ಲೆಕೆಲೆಯಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾ ಕೇವಲ 164 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಶ್ರೀಲಂಕಾ 39 ಓವರ್​ಗಳಲ್ಲಿ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಈ ಮೂಲಕ ಹಾಲಿ ಚಾಂಪಿಯನ್​ ಶ್ರೀಲಂಕಾ ಏಷ್ಯಾಕಪ್​ನಲ್ಲಿ ಶುಭಾರಂಭ ಮಾಡಿತು.

ಟಾಸ್ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಬಾಂಗ್ಲಾ 36 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಇದರ ಬಳಿಕವೂ ನಜ್ಮುಲ್ ಹುಸೇನ್ ಶಾಂಟೊ (89) ಹೊರತುಪಡಿಸಿ ಯಾವೊಬ್ಬ ಬ್ಯಾಟರ್‌ ಕೂಡಾ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲು ಸಾಧ್ಯವಾಗಲಿಲ್ಲ. ತೌಹಿದ್ ಹೃದಯ್ (20), ಮೊಹಮ್ಮದ್ ನಯೀಮ್ (16), ಮುಶ್ಫಿಕರ್ ರಹೀಮ್ (13) ರನ್ ಗಳಿಸಿದರು. ತಂಜಿದ್ ಹಸನ್ ಶೂನ್ಯ, ನಾಯಕ ಶಕೀಬ್ ಅಲ್ ಹಸನ್ (5), ಮೆಹದಿ ಹಸನ್ ಮಿರಾಜ್ (5), ಮೆಹದಿ ಹಸನ್(6), ತಸ್ಕಿನ್ ಅಹ್ಮದ್ ಮತ್ತು ಮುಸ್ತಾಫಿಜುರ್ ಶೂನ್ಯಕ್ಕೆ ಔಟಾದರು. ಶ್ರೀಲಂಕಾ ಪರ ಮತಿಶಾ ಪತಿರಾನ 4 ವಿಕೆಟ್ ಪಡೆದರೆ, ಮಹಿಷ್ ತೀಕ್ಷಣ 2 ವಿಕೆಟ್ ಪಡೆದರು. ಧನ್ಯಂಜ್ ಡಿ ಸಿಲ್ವಾ, ದುನಿತ್​, ಶನಕ ತಲಾ ಒಂದು ವಿಕೆಟ್​ ಪಡೆದರು.

164 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಶ್ರೀಲಂಕಾ ಕೂಡ ಕಳಪೆ ಆರಂಭವನ್ನೇ ಪಡೆದುಕೊಂಡಿತು. ತಂಡದ ಸ್ಕೋರ್​ 43 ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಪಾಥುಮ್ ನಿಸ್ಸಾಂಕ (14), ದಿಮುತ್ ಕರುಣಾರತ್ನೆ (1), ಕುಸಾಲ್ ಮೆಂಡಿಸ್ (5) ಬಹುಬೇಗ ಪೆವಿಲಿಯನ್​ ಸೇರಿದರು. ಬಳಿಕ ಕ್ರೀಸ್​ಗಿಳಿದ ಸದೀರ ಸಮರವಿಕ್ರಮ ಮತ್ತು ಚರಿತ್ ಅಸಲಂಕ ನಾಲ್ಕನೇ ವಿಕೆಟ್‌ಗೆ 78 ರನ್‌ಗಳ ಜೊತೆಯಾಟವಾಡಿ ತಂಡದ ಸ್ಕೋರ್​ ಹೆಚ್ಚಿಸತೊಡಗಿದರು. ಸದೀರ 77 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಅರ್ಧಶತಕ ಪೂರೈಸಿ ಮೆಹದಿ ಹಸನ್​ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು. ಮತ್ತೊಂದೆಡೆ, ಚರಿತ್ ಅಸಲಂಕಾ 92 ಎಸೆತಗಳಲ್ಲಿ ಐದು ಬೌಂಡರಿ, ಒಂದು ಸಿಕ್ಸರ್ ಸಮೇತ 62 ರನ್ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ನಾಯಕ ದಸುನ್ ಶನಕ (14) ರನ್ ಗಳಿಸಿ ಅಜೇಯ ಆಟವಾಡಿದರು. ಬಾಂಗ್ಲಾ ಪರ ನಾಯಕ ಶಕೀಬ್ 2, ಟಾಸ್ಕಿನ್​, ಇಸ್ಲಾಮ್​, ಮೆಹದಿ ಹಸನ್​ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ: ICC Cricket World Cup: ಇಂದಿನಿಂದ ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲಿರುವ ಭಾರತದ ಪಂದ್ಯಗಳ ಟಿಕೆಟ್​ ಮಾರಾಟ ಶುರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.