ದುಬೈ(ಯುಎಇ): ಯಾರೂ ಸಹ ಊಹೆ ಮಾಡದ ರೀತಿಯಲ್ಲಿ ಶ್ರೀಲಂಕಾ ತಂಡ ಏಷ್ಯಾ ಕಪ್ ಪ್ರಶಸ್ತಿಗೆ ಮುತ್ತಿಕ್ಕಿದೆ. ಅಫ್ಘಾನಿಸ್ತಾನದ ವಿರುದ್ಧ ನಡೆದ ಮೊದಲ ಪಂದ್ಯ ಸೋಲುವ ಮೂಲಕ ಅಭಿಯಾನ ಆರಂಭಿಸಿದ್ದ ಶನಕ ನಾಯಕತ್ವದ ಸಿಂಹಳೀಯರ ತಂಡ ಫೈನಲ್ನಲ್ಲಿ ಬಲಿಷ್ಠ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತೀವ್ರ ಆರ್ಥಿಕ ಬಿಕ್ಕಟ್ಟು, ರಾಜಕೀಯ ಪ್ರಕ್ಷುಬ್ದತೆಯ ನಡುವೆ ಏಷ್ಯಾ ಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಶ್ರೀಲಂಕಾ 2014ರ ನಂತರ ಪ್ರತಿಷ್ಟಿತ ಪ್ರಶಸ್ತಿ ತನ್ನದಾಗಿಸಿಕೊಂಡಿತು.
-
Celebrations galore among the DP World #AsiaCup 2022 🏆 champions 💪🏼🤩🥳@OfficialSLC #SLvPAK #ACC #GetReadyForEpic #AsiaCup2022 pic.twitter.com/xeCONN7onF
— AsianCricketCouncil (@ACCMedia1) September 11, 2022 " class="align-text-top noRightClick twitterSection" data="
">Celebrations galore among the DP World #AsiaCup 2022 🏆 champions 💪🏼🤩🥳@OfficialSLC #SLvPAK #ACC #GetReadyForEpic #AsiaCup2022 pic.twitter.com/xeCONN7onF
— AsianCricketCouncil (@ACCMedia1) September 11, 2022Celebrations galore among the DP World #AsiaCup 2022 🏆 champions 💪🏼🤩🥳@OfficialSLC #SLvPAK #ACC #GetReadyForEpic #AsiaCup2022 pic.twitter.com/xeCONN7onF
— AsianCricketCouncil (@ACCMedia1) September 11, 2022
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ಗಳಿಸಿತು. ಮೊದಲ 10 ಓವರ್ಗಳಲ್ಲಿ 58 ರನ್ ಸಂಪಾದಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡದಲ್ಲಿದ್ದ ಲಂಕಾ ತಂಡಕ್ಕೆ ರಾಜಪಕ್ಸ , ಹಸರಂಗ ಆಸರೆಯಾದರು.
ಪಾಕ್ ಬೌಲರ್ಗಳನ್ನು ಸುಲಭವಾಗಿ ದಂಡಿಸಿದ ರಾಜಪಕ್ಸ (71), ಹಸರಂಗ (36) ಜೋಡಿ ತಂಡಕ್ಕೆ ಉತ್ತಮ ರನ್ ಕಾಣಿಕೆ ನೀಡಿತು. ಹೀಗಾಗಿ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಸೇರಿಸಿತು. ಪಾಕ್ ಪರ ಹ್ಯಾರಿಸ್ ರೌಫ್ 3 ವಿಕೆಟ್, ನಸೀಂ, ಶಬ್ದಾದ್ ಖಾನ್ ಹಾಗೂ ಅಹ್ಮದ್ ತಲಾ 1 ವಿಕೆಟ್ ಪಡೆದುಕೊಂಡರು.
171 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಪ್ರಮೋದ್ ಎಸೆದ ಮೂರನೇ ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಪಾಕ್ ನಾಯಕ ಬಾಬರ್ ಅಜಂ (5), ಫಖರ್ ಜಮಾನ್ (0) ವಿಕೆಟ್ ತೆಗೆಯುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು ನೀಡಿದರು. ಇದಾದ ಬಳಿಕ ಕ್ರೀಸ್‌ನಲ್ಲಿ ಒಂದಾದ ರಿಜ್ವಾನ್-ಇಫ್ತಿಕರ್ ಜೋಡಿ ಪಂದ್ಯವನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ತಂಡ 10 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 68 ರನ್ಗಳಿಕೆ ಮಾಡಿತು.
ಉತ್ತಮವಾಗಿ ಆಟವಾಡ್ತಿದ್ದ ಇಫ್ತಿಕರ್ಗೆ ಬಿಗು ಬೌಲಿಂಗ್ ದಾಳಿ ಮೂಲಕ ಪ್ರಮೋದ್ ಕಾಡಿದರು. 32 ರನ್ಗಳಿಕೆ ಮಾಡಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚಿತ್ತರು. ಇದರ ಬೆನ್ನಲ್ಲೇ ರಿಜ್ವಾನ್ (55) ಕೂಡ ಹಸರಂಗ ಓವರ್ನಲ್ಲಿ ಔಟಾದರು. ಈ ಮೂಲಕ ಪಾಕ್ ಒತ್ತಡಕ್ಕೆ ಸಿಲುಕಿತು.
ಇದನ್ನೂ ಓದಿ: ಏಷ್ಯಾ ಕಪ್ ಫೈನಲ್: ಬೌಲಿಂಗ್ ಆಯ್ದುಕೊಂಡ ಪಾಕಿಸ್ತಾನ
ಪೆವಿಲಿಯನ್ ಪರೇಡ್ ನಡೆಸಿದ ಪಾಕ್: ರಿಜ್ವಾನ್-ಇಫ್ತಿಕರ್ ವಿಕೆಟ್ ಬೀಳುತ್ತಿದ್ದಂತೆ ಪಾಕ್ನ ಯಾವೊಬ್ಬ ಆಟಗಾರನೂ ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಶ್ರೀಲಂಕಾ ಬೌಲರ್ಗಳ ದಾಳಿಗೆ ತತ್ತರಿಸಿ ಪೆವಿಲಿಯನ್ ಪರೇಡ್ ನಡೆಸಿದರು. ನವಾಜ್ (6), ಶಾ (2), ಆಸಿಫ್ ಅಲಿ (0), ಶಬ್ದಾದ್ ಖಾನ್ (8), ಹ್ಯಾರಿಸ್ ರೌಫ್ (13) ವಿಕೆಟ್ ಒಪ್ಪಿಸಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 147 ರನ್ ಗಳಿಸಲು ಮಾತ್ರ ಗಳಿಸಲು ಶಕ್ತವಾಯಿತು. ಈ ಮೂಲಕ 23 ರನ್‌ಗಳ ಸೋಲು ಕಂಡಿತು.
ಶ್ರೀಲಂಕಾ ತಂಡದ ಪರ ಮಿಂಚಿದ ಪ್ರಮೋದ್ 4 ವಿಕೆಟ್ ಪಡೆದರೆ, ಹಸರಂಗ 3 ವಿಕೆಟ್, ಕರುಣರತ್ನೆ 2 ಹಾಗೂ ತಿಕ್ಷಣ್ 1 ವಿಕೆಟ್ ಕಿತ್ತರು.
6ನೇ ಸಲ ಏಷ್ಯಾ ಕಪ್ ಚಾಂಪಿಯನ್ ಆದ ಶ್ರೀಲಂಕಾ: ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿರುವ ಶ್ರೀಲಂಕಾ ತಂಡ 6ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 10 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಪಾಕ್ ಬಯಕೆ ಈಡೇರಲಿಲ್ಲ. ಆರ್ಥಿಕ ಪ್ರಕ್ಷುಬ್ದತೆ, ರಾಜಕೀಯ ಬಿಕ್ಕಟ್ಟಿನ ನಡುವೆ ವಿಶ್ವದ ಮುಂದೆ ತಲೆಬಾಗಿದ್ದ ಶ್ರೀಲಂಕಾ ಇದೀಗ ದೇಶ ಸ್ವಲ್ಪ ಸಂಭ್ರಮಪಡುವಂತೆ ಮಾಡಿದೆ. ಸರಣಿ ಉದ್ದಕ್ಕೂ ಅತ್ಯದ್ಭುತ ಪ್ರದರ್ಶನ ನೀಡಿರುವ ಆಲ್ರೌಂಡರ್ ವನಿಂದು ಹಸರಂಗ ಸರಣಿ ಶ್ರೇಷ್ಠ ಪ್ರಶಸ್ತಿಗೆ ಮುತ್ತಿಕ್ಕಿದರು.