ಕೊಲಂಬೊ: ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಆತಿಥೇಯ ಶ್ರೀಲಂಕಾ ತಂಡಗಳ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಹರಿಣಗಳ ತಂಡ 28 ರನ್ಗಳ ಅಂತರದ ಗೆಲುವು ದಾಖಲು ಮಾಡಿದ್ದು, ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಕೊಲಂಬೋದ ಆರ್.ಪ್ರೇಮದಾಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ ಸಂಘಟಿತ ಬ್ಯಾಟಿಂಗ್ ಹೋರಾಟದಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಸ್ಪರ್ಧಾತ್ಮಕ 163 ರನ್ಗಳಿಕೆ ಮಾಡಿತು. ತಂಡದ ಪರ ಡಿಕಾಕ್ 36 ರನ್, ಹೆಂಡ್ರಿಕ್ಸ್ 38, ಮರ್ಕ್ರಾಮ್ 48 ಹಾಗೂ ಮಿಲ್ಲರ್ 26 ರನ್ಗಳಿಕೆ ಮಾಡಿದರು.
164 ರನ್ಗಳ ಗುರಿ ಬೆನ್ನತ್ತಿದ್ದ ಶ್ರೀಲಂಕಾ ಆರಂಭದಲ್ಲೇ ಆಘಾತಕ್ಕೊಳಗಾಯಿತು. 11 ರನ್ ಗಳಿಸಿದ್ದ ವೇಳೆ ಫರ್ನಾಂಡೋ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ರಾಜಪಕ್ಸೆ 0, ಅಲ್ಸಂಕಾ 6, ಹಸರಂಗ ಹಾಗೂ ಸಿಲ್ವಾ 1 ರನ್ಗಳಿಕೆ ಮಾಡಿ ನಿರಾಸೆ ಮೂಡಿಸಿದರು.
ಇದನ್ನೂ ಓದಿ: 3ನೇ ಏಕದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡ ಶ್ರೀಲಂಕಾ ತಂಡ
ತಂಡಕ್ಕೆ ಏಕಾಂಗಿಯಾಗಿ ಹೋರಾಟ ನಡೆಸಿದ ವಿಕೆಟ್ ಕೀಪರ್ ಚಾಂಡಿಮಾಲ್ 66 ರನ್ಗಳಿಕೆ ಮಾಡಿದರೂ ಕೂಡ ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು. ಇವರಿಗೆ 25ರನ್ಗಳಿಕೆ ಮಾಡಿದ ಕರುಣರತ್ನೆ ಕೂಡ ಸಾಥ್ ನೀಡಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಮಾತ್ರ ಗಳಿಸಲು ಶಕ್ತವಾಯಿತು.
ದಕ್ಷಿಣ ಆಫ್ರಿಕಾ ಪರ ಶಮ್ಸಿ, ಮಹಾರಾಜ್, ಪ್ರಿಟ್ರೋಸ್, ನೋರ್ಡ್ಜ್ ಹಾಗೂ ಪೋರ್ಟಿನ್ ತಲಾ 1 ವಿಕೆಟ್ ಪಡೆದುಕೊಂಡರು. ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಫ್ರಿಕಾದ ಮಾರ್ಕ್ರಾಮ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈಗಾಗಲೇ ಮುಕ್ತಾಯವಾಗಿರುವ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡ ಗೆಲುವು ದಾಖಲು ಮಾಡಿ, 2-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.