ಕೊಲಂಬೊ: ಸರಣಿ ಕೈವಶ ಮಾಡಿಕೊಳ್ಳುವ ಉದ್ದೇಶದಿಂದ ಉಭಯ ತಂಡಗಳಿಗೆ ಮಹತ್ವದಾಗಿದ್ದ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 78ರನ್ಗಳ ಗೆಲುವು ದಾಖಲು ಮಾಡಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 2-1 ಅಂತರದಲ್ಲಿ ಜಯ ಸಾಧಿಸಿದೆ.
ಮೊದಲ ಪಂದ್ಯದಲ್ಲಿ ಶ್ರೀಲಂಕಾ 14ರನ್ಗಳ ಗೆಲುವು ದಾಖಲು ಮಾಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ತಿರುಗಿಬಿದ್ದಿದ್ದ ಆಫ್ರಿಕಾ 67ರನ್ಗಳ ಜಯ ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿತ್ತು. ಆರ್.ಪ್ರೇಮದಾಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಶ್ರೀಲಂಕಾ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 203ರನ್ಗಳಿಕೆ ಮಾಡಿತು. ತಂಡದ ಪರ ಅಲ್ಸಂಕ್ 47ರನ್,ಚಮೀರಾ 29 ಹಾಗೂ ಸಿಲ್ವಾ 31ರನ್ಗಳಿಕೆ ಮಾಡಿದರು.
ಆಫ್ರಿಕಾ ಪರ ಉತ್ತಮ ಪ್ರದರ್ಶನ ನೀಡಿದ ಮಹಾರಾಜ 3 ವಿಕೆಟ್, ಜಾರ್ಜ್, ಶಮ್ಸಿ ತಲಾ 2 ವಿಕೆಟ್ ಹಾಗೂ ಮಾರ್ಕ್ರಮ್ ಮತ್ತು ಮುಲ್ದರ್ ತಲಾ 1 ವಿಕೆಟ್ ಪಡೆದುಕೊಂಡರು.
204ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಮಲನ್ 18ರನ್, ಮಾರ್ಕ್ರಮ್ 2 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಹೆಂಡ್ರಿಕ್ಸ್ 1ರನ್ ಹಾಗೂ ದುಸ್ಸೆನ್ 5ರನ್ಗಳಿಗೆ ಚಮೀರಾಗೆ ಬಲಿಯಾದರು.
ಇದನ್ನೂ ಓದಿ: ಕೋಚ್ಗಳು ರಾಜೀನಾಮೆ ನೀಡುತ್ತಿದ್ದಂತೆ, ನಿವೃತ್ತಿ ಹಿಂಪಡೆದುಕೊಂಡ ವೇಗಿ ಅಮೀರ್!
ವಿಕೆಟ್ ಕೀಪರ್ ಕೆಲ್ಸನ್ 17, ಜಾರ್ಜ್ 18 ಹಾಗೂ ಕೇಶವ ಮಹಾರಾಜ್ 15ರನ್ಗಳಿಕೆ ಮಾಡಿದ್ದು ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು.
ಶ್ರೀಲಂಕಾ ಬೌಲಿಂಗ್ ಮುಂದೆ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಆಫ್ರಿಕಾ 30 ಓವರ್ಗಳಲ್ಲಿ 10 ವಿಕೆಟ್ನಷ್ಟಕ್ಕೆ 125ರನ್ಗಳಿಕೆ ಮಾಡಿ, ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಹೀಗಾಗಿ 78ರನ್ಗಳ ಸೋಲಿನೊಂದಿಗೆ ಸರಣಿ ಕೈಚೆಲ್ಲಿತು. ಲಂಕಾ ಪರ ಮಹೀಶ್ ತೀಕ್ಷ್ಣ 4 ವಿಕೆಟ್, ಚಮೀರಾ ಹಾಗೂ ಹಸರಂಗ ತಲಾ 2 ವಿಕೆಟ್ ಪಡೆದುಕೊಂಡರೆ ಪ್ರವೀಣ್ ಹಾಗೂ ಅಲ್ಸಂಕ್ ತಲಾ 1 ವಿಕೆಟ್ ಕಿತ್ತರು.