ETV Bharat / sports

ಆಫ್ರಿಕಾ ಮೇಲೆ ಲಂಕಾ ಸವಾರಿ... ಮೊದಲ ಏಕದಿನ ಪಂದ್ಯ ಗೆದ್ದ ಸಿಂಹಳೀಯರ ತಂಡ

author img

By

Published : Sep 3, 2021, 3:52 AM IST

ಆರ್​​.ಪ್ರೇಮದಾಸ್​ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ 14ರನ್​ಗಳ ಗೆಲುವು ದಾಖಲು ಮಾಡಿದೆ.

Sri lanka
Sri lanka

ಕೊಲಂಬೊ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸಿಂಹಳೀಯರ ತಂಡ 14ರನ್​ಗಳ ಗೆಲುವು ದಾಖಲು ಮಾಡಿ, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

ಆರ್​.ಪ್ರೇಮದಾಸ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ನಷ್ಟಕ್ಕೆ ಭರ್ಜರಿ 300ರನ್​ಗಳಿಕೆ ಮಾಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅವಿಷ್ಕಾ ಫರ್ನಾಡೋ 118ರನ್​​ಗಳಿಕೆ ಮಾಡಿದರು. ಇವರಿಗೆ ಸಿಲ್ವಾ(44ರನ್​) ಹಾಗೂ ಅಸ್ಲಂಕಾ(72ರನ್​) ಉತ್ತಮ ಸಾಥ್​ ನೀಡಿದರು. ಉಳಿದಂತೆ ವಿಕೆಟ್​ ಕೀಪರ್ ಭಾನುಕ(27ರನ್​) ಗಳಿಕೆ ಮಾಡಿ ತಂಡದ ಮೊತ್ತ 300 ಆಗಲು ಸಹಾಯ ಮಾಡಿದರು.

Sri lanka
ಶತಕ ಸಿಡಿಸಿ ಮಿಂಚಿದ ಫರ್ನಾಡೋ

ಆಫ್ರಿಕಾ ಪರ ರಬಾಡಾ, ಮಹಾರಾಜ್ ತಲಾ 2ವಿಕೆಟ್​ ಪಡೆದುಕೊಂಡರೆ,ಮಾರ್ಕ್ರಮ್ ಹಾಗೂ ಶಮಿಸಿ ತಲಾ 1ವಿಕೆಟ್ ಕಿತ್ತರು.

301ರನ್​​ಗಳ ಗುರಿ ಬೆನ್ನತ್ತಿದ್ದ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಮಲನ್​ ಹಾಗೂ ಮಾರ್ಕ್ರಮ್ ಮೊದಲ ವಿಕೆಟ್​ನಷ್ಟಕ್ಕೆ 49ರನ್​ಗಳಿಕೆ ಮಾಡಿದರು. ಆದರೆ ಈ ವೇಳೆ ಮಲನ್​ 23ರನ್​​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿರಿ: ಬಸ್​​-ಟ್ರಕ್​ ನಡುವೆ ಭೀಕರ ಅಪಘಾತ... 16 ಸಾವು, 22 ಮಂದಿಗೆ ಗಾಯ

ಇದಾದ ಬಳಿಕ ಮಾರ್ಕ್ರಮ್ 96ರನ್​, ಬುವಂ 38ರನ್​, ದುಸ್ಸೆನ್​​​​ 59ರನ್​, ಕೆಲ್ಸೆನ್​ 36ರನ್​​ ರಬಾಡಾ 13ರನ್​ಗಳಿಕೆ ಮಾಡಿದ್ರೂ ಕೂಡ ತಂಡ 6ವಿಕೆಟ್ ಕಳೆದುಕೊಂಡು 286ರನ್​ ಮಾತ್ರ ಗಳಿಕೆ ಮಾಡಲು ಶಕ್ತವಾಯಿತು. ಹೀಗಾಗಿ 14ರನ್​ಗಳ ಸೋಲು ಕಂಡಿತು.

ಲಂಕಾ ಪರ ಧನಂಜಯ 2ವಿಕೆಟ್​, ಜಯವಿಕ್ರಂ, ಕರುಣ್​ರತ್ನೆ ಹಾಗೂ ಹಸರಂಗ ತಲಾ 1ವಿಕೆಟ್ ಪಡೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.