ಕೊಲಂಬೊ(ಶ್ರೀಲಂಕಾ): ಮೊದಲ ಏಕದಿನ ಪಂದ್ಯದಲ್ಲಿ 14ರನ್ಗಳ ಗೆಲುವು ದಾಖಲಿಸುವ ಮೂಲಕ ಆತ್ಮವಿಶ್ವಾಸದಲ್ಲಿದ್ದ ಆತಿಥೇಯ ಶ್ರೀಲಂಕಾ ತಂಡಕ್ಕೆ ಹರಿಣಗಳ ತಂಡ ತಿರುಗೇಟು ನೀಡಿದೆ. ಎರಡನೇ ಪಂದ್ಯದಲ್ಲಿ ಭರ್ಜರಿ 67ರನ್ಗಳಿಂದ(ಡಕ್ವರ್ಥ್ ಲೂಯಿಸ್) ಗೆದ್ದು ಬೀಗಿದೆ. ಈ ಮೂಲಕ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ.
ಆರ್.ಪ್ರೇಮದಾಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಟಗಾರ ಮಲನ್ ಭರ್ಜರಿ 121ರನ್ಗಳ ನೆರವಿನಿಂದ 47ಓವರ್ಗಳಲ್ಲಿ 6ವಿಕೆಟ್ ನಷ್ಟಕ್ಕೆ ಸ್ಪರ್ಧಾತ್ಮಕ 283ರನ್ ಗಳಿಸಿತು. ತಂಡಕ್ಕೆ ಹೆಂಡ್ರಿಕ್ಸ್ 51, ಕೆಲ್ಸನ್ 43 ಹಾಗೂ ಮಾರ್ಕ್ರಮ್ 21ರನ್ಗಳ ಕಾಣಿಕೆ ನೀಡಿದರು.
284ರನ್ಗಳ ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಫರ್ನಾಡೋ ಕೇವಲ 8ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಭಾನುಕ್ 7ರನ್ ಗಳಿಸಿದರು. ಉಳಿದಂತೆ ರಾಜಪಕ್ಸೆ ಸೊನ್ನೆ ಸುತ್ತಿದರು.
-
South Africa level the series 1-1!
— ICC (@ICC) September 4, 2021 " class="align-text-top noRightClick twitterSection" data="
Tabraiz Shamsi stars with the ball, as the Proteas beat Sri Lanka by 67 runs (DLS method) in Colombo. #SLvSA | https://t.co/uVE6CBuXTb pic.twitter.com/7QtX2bGdVJ
">South Africa level the series 1-1!
— ICC (@ICC) September 4, 2021
Tabraiz Shamsi stars with the ball, as the Proteas beat Sri Lanka by 67 runs (DLS method) in Colombo. #SLvSA | https://t.co/uVE6CBuXTb pic.twitter.com/7QtX2bGdVJSouth Africa level the series 1-1!
— ICC (@ICC) September 4, 2021
Tabraiz Shamsi stars with the ball, as the Proteas beat Sri Lanka by 67 runs (DLS method) in Colombo. #SLvSA | https://t.co/uVE6CBuXTb pic.twitter.com/7QtX2bGdVJ
ಇದನ್ನೂ ಓದಿರಿ: England Vs India 4th: 270ರನ್ಗಳಿಗೆ 3 ವಿಕೆಟ್; 171ರನ್ ಮುನ್ನಡೆ ಪಡೆದ ಭಾರತ
ಮಧ್ಯಮ ಕ್ರಮಾಂಕದಲ್ಲಿ ಅಲ್ಸಂಕಾ 77ರನ್ ಹಾಗೂ ಕ್ಯಾಪ್ಟನ್ ಶನಕ್ 30ರನ್ ಗಳಿಕೆ ಮಾಡಿ ತಂಡವನ್ನ ಜಯದತ್ತ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ರೂ ಸಾಧ್ಯವಾಗಲಿಲ್ಲ. ಇವರ ವಿಕೆಟ್ ಬೀಳುತ್ತಿದ್ದಂತೆ ಹಸರಂಗ 3, ಕರುಣರತ್ನೆ 36, ಚಮೀರಾ 11 ಹಾಗೂ ಧನಂಜಯ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತಂಡ ಕೊನೆಯದಾಗಿ 36.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 197ರನ್ ಮಾತ್ರ ಗಳಿಸಿತು. ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚೆ ಮಳೆ ಸುರಿದ ಕಾರಣ ಪಂದ್ಯವನ್ನ 47 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು.
ದಕ್ಷಿಣ ಆಫ್ರಿಕಾ ಪರ ಶಮ್ಸಿ 5 ವಿಕೆಟ್ ಪಡೆದು ಮಿಂಚಿದರೆ, ರಬಾಡಾ 2 ವಿಕೆಟ್ ಹಾಗೂ ಮುಲ್ಡರ್, ಕೇಶವ್ ಹಾಗೂ ಜಾರ್ಜ್ ತಲಾ 1 ವಿಕೆಟ್ ಪಡೆದುಕೊಂಡರು.