ETV Bharat / sports

IND vs SL:ಕೋಚ್​ ದ್ರಾವಿಡ್ ಅಗ್ನಿ ಪರೀಕ್ಷೆ ಆರಂಭ: ಲಂಕಾ ವಿರುದ್ಧ ಕಣಕ್ಕಿಳಿಯಲಿದೆ ಯಂಗ್​​ ಇಂಡಿಯಾ

ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇಂದು ಮೊದಲ ಏಕದಿನ ಪಂದ್ಯದಲ್ಲಿ ಭಾಗಿಯಾಗಲಿದ್ದು, ಮಧ್ಯಾಹ್ನ ಮೂರು ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ.

author img

By

Published : Jul 18, 2021, 5:39 AM IST

Sri Lanka vs India
Sri Lanka vs India

ಕೊಲಂಬೊ: ಪ್ರವಾಸಿ ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್​ಗಳ ಕ್ರಿಕೆಟ್​ ಸರಣಿಗೆ ಇಂದು ಚಾಲನೆ ಸಿಗಲಿದ್ದು, ಯಂಗ್​ ಇಂಡಿಯಾ ಕೊಲಂಬೊದ ಆರ್​.ಪ್ರೇಮದಾಸ್​ ಮೈದಾನದಲ್ಲಿ ಸಿಂಹಳೀಯರ ಸವಾಲು ಎದುರಿಸಲಿದೆ. ವಿಶೇಷವೆಂದರೆ ಚೊಚ್ಚಲ ನಾಯಕತ್ವ ಜವಾಬ್ದಾರಿ ಹೊತ್ತಿರುವ ಶಿಖರ್​ ಧವನ್ ಹಾಗೂ ಕೋಚ್​ ಆಗಿರುವ ರಾಹುಲ್​ ದ್ರಾವಿಡ್​ಗೆ ಇದು ಅಗ್ನಿ ಪರೀಕ್ಷೆಯಾಗಿದೆ.

ಮುಂಬರುವ ಟಿ-20 ವಿಶ್ವಕಪ್​ ದೃಷ್ಟಿಯಿಂದ ಈ ಸರಣಿ ಮಹತ್ವ ಪಡೆದುಕೊಂಡಿದ್ದು, ಶಿಖರ್​ ಧವನ್​ ಸೇರಿದಂತೆ ಕೆಲವ ಪ್ಲೇಯರ್ಸ್​ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಇನ್ನು ಭವಿಷ್ಯದಲ್ಲಿ ರಾಹುಲ್​ ದ್ರಾವಿಡ್ ಟೀಂ ಇಂಡಿಯಾ ಕೋಚ್​ ಆಗುವ ಇರಾದೆಯಿಂದ ಈ ಸರಣಿ ಅವರಿಗೂ ಪ್ರಾಮುಖ್ಯತೆ ಪಡೆದುಕೊಂಡಿದೆ.

Dhawan
ನಿನ್ನೆ ರಾತ್ರಿ ಮೈದಾನದಲ್ಲಿ ಈ ರೀತಿ ಕಾಣಿಸಿಕೊಂಡ ಶಿಖರ್​

ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲು ಆಂಗ್ಲರ ನಾಡಿನಲ್ಲಿರುವ ಕಾರಣ, ಈ ಕ್ರಿಕೆಟ್​ ಸರಣಿಯಲ್ಲಿ ಅನೇಕ ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯ ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಲಿದೆ. ಪ್ರಮುಖವಾಗಿ ಐಪಿಎಲ್​ನಲ್ಲಿ ಮಿಂಚು ಹರಿಸಿರುವ ಕನ್ನಡಿಗ ದೇವದತ್​ ಪಡಿಕ್ಕಲ್​, ಕೃಷ್ಣಪ್ಪ ಗೌತಮ್​ ಹಾಗೂ ಪೃಥ್ವಿ ಶಾ, ಮನೀಷ್ ಪಾಂಡೆ, ಋತುರಾಜ್​ ಗಾಯ್ಕವಾಡ್​,ಚೇತನ್ ಸಕಾರಿಯಾ, ನೀತಿಶ್ ರಾಣಾ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಹೀನಾಯ ಸೋಲು ಕಂಡು ತವರಿಗೆ ವಾಪಸ್​ ಆಗಿರುವ ಶ್ರೀಲಂಕಾ ತಂಡಕ್ಕೆ ಮುಂಬರುವ ಟಿ-20 ವಿಶ್ವಕಪ್ ಟೂರ್ನಿಯಿಂದ ಮಹತ್ವದ್ದಾಗಿದೆ. ಆರ್​ ಪ್ರೇಮದಾಸ್​ ಮೈದಾನ ವೇಗದ ಬೌಲರ್ ಹಾಗೂ ಬ್ಯಾಟ್ಸಮನ್​ಗಳಿಗೆ ಸಹಕಾರಿಯಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ನರ್​ಗಳು ತಮ್ಮ ಸಾಮರ್ಥ್ಯ ತೋರಿಸಲು ನೆರವಾಗಬಹುದು ಎನ್ನಲಾಗಿದೆ. ​

Sri Lanka vs India
ಪ್ರೇಮದಾಸ್ ಮೈದಾನದಲ್ಲಿ ಇಂದಿನ ಪಂದ್ಯ

ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಸ್ಥಾನ?

ಶಿಖರ್​ ಧವನ್​, ಪೃಥ್ವಿ ಶಾ, ಸೂರ್ಯಕುಮಾರ್​ ಯಾದವ್​, ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್​, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ನವದೀಪ್​​ ಸೈನಿ, ಭುವನೇಶ್ವರ್ ಕುಮಾರ್​, ಕುಲ್ದೀಪ್​ ಯಾದವ್, ಯಜುವೇಂದ್ರ ಚಹಲ್​ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ದೇವದತ್​ ಪಡಿಕ್ಕಲ್​,ಋತುರಾಜ್ ಗಾಯಕ್ವಾಡ್​, ಇಶಾನ್​ ಕಿಶನ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಶ್ರೀಲಂಕಾ ತಂಡದಲ್ಲಿ ದಸುನ್​ ಶನಕಾ, ಧಜಂಜಯ ಡಿಸಿಲ್ವಾ, ಅವಿಷ್ಕಾ ಫರ್ನಾಂಡೋ,ಇಸುರ್ ಉಡಾನ, ಚಮಿರಾ ಕರುಣಾರತ್ನೆ, ಹಸರಂಗ,ಲಾಹೀರು ಉದಾರ, ರಮೇಶ್ ಮೆಂಡಿಸ್​,ಸಂದಕನ್​, ನಿಸಾಂಕಾ, ಅಸಲೆಂಕಾ, ಮಿನೋದ್​ ಭಾನುಕಾಗೆ ಮಣೆ ಹಾಕುವ ಸಾಧ್ಯತೆ ಇದೆ. ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.