ETV Bharat / sports

ನೂತನ ಲಂಕಾ ಕ್ರೀಡಾ ಸಚಿವರನ್ನು ಭೇಟಿಯಾದ ಐಸಿಸಿ ಸಿಇಒ; ಮತ್ತೆ ಆಟಕ್ಕೆ ಮರಳುವುದೇ ಶ್ರೀಲಂಕಾ ಕ್ರಿಕೆಟ್​ ತಂಡ? - Sri Lanka Cricket

ಐಸಿಸಿಯ ಸಿಇಒ ಜಿಯೋಫ್ ಅಲ್ಲಾರ್ಡಿಸ್ ಅವರು ಶ್ರೀಲಂಕಾದ ನೂತನ ಕ್ರೀಡಾ ಸಚಿವ ಹರಿನ್ ಫೆರ್ನಾಂಡೋ ಅವರನ್ನು ಭೇಟಿಯಾಗಿದ್ದಾರೆ.

ಶ್ರೀಲಂಕಾ ಕ್ರೀಡಾ ಸಚಿವ ಹರಿನ್ ಫೆರ್ನಾಂಡೋ ಮತ್ತು ಐಸಿಸಿಯ ಸಿಇಒ ಜಿಯೋಫ್ ಅಲ್ಲಾರ್ಡಿಸ್

author img

By ETV Bharat Karnataka Team

Published : Jan 12, 2024, 4:48 PM IST

ಕೊಲಂಬೊ (ಶ್ರೀಲಂಕಾ) : ಕಳೆದ ವರ್ಷ ದ್ವೀಪ ರಾಷ್ಟ್ರದಲ್ಲಿ ರಾಜಕೀಯ ಕಚ್ಚಾಟದಿಂದಾಗಿ ಶ್ರೀಲಂಕಾ ಕ್ರಿಕೆಟ್​ ತಂಡದ ಸದಸ್ಯತ್ವವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಮಾನತುಗೊಳಿಸಿತ್ತು. ಇದೀಗ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳುವ ಭರವಸೆಯನ್ನು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಹೊಂದಿದೆ.

  • Had the great pleasure of meeting ICC CEO Geoff Allardice , and had constructive discussion and of a way forward for SLC. pic.twitter.com/JrMSPopgcl

    — Harin Fernando (@fernandoharin) January 10, 2024 " class="align-text-top noRightClick twitterSection" data=" ">

ಹೌದು, ನಿನ್ನೆ (ಗುರುವಾರ) ಐಸಿಸಿಯ ಸಿಇಒ ಜೆಫ್ ಅಲಾರ್ಡಿಸ್ ಅವರು ಶ್ರೀಲಂಕಾಕ್ಕೆ ಭೇಟಿ ನೀಟಿದ್ದು, ಅಲ್ಲಿನ ಕೇಂದ್ರ ಕ್ರೀಡಾ ಸಚಿವ ಹರಿನ್ ಫೆರ್ನಾಂಡೋ ಜೊತೆಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಲಾಗಿದೆ. ಹೀಗಾಗಿ ಶ್ರೀಲಂಕಾ ಕ್ರಿಕೆಟ್​ ಅಮಾನತು ರದ್ದುಗೊಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.​ ಈಗಾಗಲೇ ಅಮಾನತಿನ ಪರಿಣಾಮದಿಂದಾಗಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ 2024ರ ಐಸಿಸಿ ಪುರುಷರ U-19 ವಿಶ್ವಕಪ್ ಟೂರ್ನಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿದೆ.

ಈ ಭೇಟಿಯ ನಂತರ ಹರಿನ್ ಫೆರ್ನಾಂಡೋ ಅವರು ಸಾಮಾಜಿಕ ಜಾಲತಾಣ ಎಕ್ಸ್​ ಆ್ಯಪ್​ನಲ್ಲಿ ಸಿಇಒ ಜೆಫ್ ಅಲಾರ್ಡಿಸ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಪೋಸ್ಟ್​ ಮಾಡಿದ್ದಾರೆ. "ಐಸಿಸಿ ಸಿಇಒ ಜಿಯೋಫ್ ಅಲ್ಲಾರ್ಡಿಸ್ ಅವರನ್ನು ಭೇಟಿ ಮಾಡಿರುವುದು ಬಹಳ ಸಂತೋಷವಾಗಿದ್ದು, ಅವರೊಂದಿಗೆ ರಚನಾತ್ಮಕ ಚರ್ಚೆಯನ್ನು ನಡೆಸಲಾಗಿದೆ. ಶ್ರೀಲಂಕಾ ಕ್ರಿಕೆಟ್​ಗೆ ಮುಂದಿನ ದಾರಿಯಿದೆ ಎಂದು ಬರೆದುಕೊಂಡಿದ್ದಾರೆ.

ಆದರೆ ಸಭೆಯಲ್ಲಿ ಫೆರ್ನಾಂಡೋ ಅವರೊಂದಿಗಿನ ಅಲಾರ್ಡಿಸ್ ಚರ್ಚಿಸಿರುವ ವಿಷಯಗಳ ಕುರಿತು ಮತ್ತು ಅಮಾನತು ರದ್ದುಗೊಳಿಸುವ ನಿರ್ಧಾರವನ್ನು ಮಾರ್ಚ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ. ಈವರೆಗೆ ಶ್ರೀಲಂಕಾಕ್ಕೆ ಐಸಿಸಿ ಅಧಿಕಾರಿಯೊಬ್ಬರು ಭೇಟಿ ನೀಡಿರುವುದು ಇದು ಎರಡನೇ ಭಾರಿಯಾಗಿದೆ. ಇದಕ್ಕೂ ಮೊದಲು ಅಂದರೆ ಕಳೆದ ವರ್ಷ ಜೂನ್‌ನಲ್ಲಿ ಐಸಿಸಿ ಉಪ ಅಧ್ಯಕ್ಷ ಇಮ್ರಾನ್ ಖ್ವಾಜಾ ಅವರು ಇಲ್ಲಿನ ಪ್ರಕ್ಷುಬ್ಧ ಕ್ರಿಕೆಟ್ ಸನ್ನಿವೇಶವನ್ನು ಅಧ್ಯಯನ ಮಾಡಲು ಭೇಟಿ ನೀಡಿದ್ದರು.

ಅಮಾನತಿಗೆ ಕಾರಣ ಏನು? : ಭಾರತದಲ್ಲಿ 2023ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ​ ಶ್ರೀಲಂಕಾ ತಂಡದ ಸಾಲು ಸಾಲು ಹೀನಾಯ ಸೋಲುಗಳನ್ನು ಕಂಡಿತ್ತು. ನಂತರ ಕ್ರಿಕೆಟ್​ ಅಭಿಮಾನಿಗಳು ಲಂಕಾ ಕ್ರಿಕೆಟ್​ ಮಂಡಳಿಯನ್ನು ತೀವ್ರವಾಗಿ ಟೀಕಿಸಿದ್ದರು. ಇದರ ಬೆನ್ನಲ್ಲೇ ಅಲ್ಲಿನ ಸರ್ಕಾರ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿತ್ತು. ಶ್ರೀಲಂಕಾದ ಸಂಸತ್ತು ದೇಶದ ಕ್ರಿಕೆಟ್ ಆಡಳಿತ ಮಂಡಳಿಯನ್ನು ವಜಾಗೊಳಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಇದಕ್ಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಬೆಂಬಲ ಕೂಡ ಸಿಕ್ಕಿತು. ನಂತರ ಕ್ರೀಡಾ ಸಚಿವ ರೋಶನ್ ರಣಸಿಂಗ್ ಅವರು ಶ್ರೀಲಂಕಾ ಕ್ರಿಕೆಟ್ ಆಡಳಿತವನ್ನು ವಜಾಗೊಳಿಸಿ, ಕ್ರಿಕೆಟ್ ಮಂಡಳಿಯನ್ನು ನಿಯಂತ್ರಿಸಲು ಏಳು ಸದಸ್ಯರ ಹೊಸ ಸಮಿತಿಯ ಮುಖ್ಯಸ್ಥರಾಗಿ ಅರ್ಜುನ ರಣತುಂಗ ಅವರನ್ನು ನೇಮಕ ಮಾಡಿ ಆದೇಶಿಸಿತ್ತು.

ಇದರ ವಿರುದ್ಧ ಶ್ರೀಲಂಕಾ ಕ್ರಿಕೆಟ್​ ಮಂಡಳಿ ನ್ಯಾಯಾಲಯದ ಮೊರೆ ಹೋಗಿತ್ತು. ಶ್ರೀಲಂಕಾ ಕ್ರಿಕೆಟ್​ ಮಂಡಳಿ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಸರ್ಕಾರದ ನಿರ್ಧಾರವನ್ನು ತಡೆಹಿಡಿದು, ಶಮ್ಮಿ ಸಿಲ್ವಾ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ಆಡಳಿತವನ್ನು ಮರುಸ್ಥಾಪಿಸಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಐಸಿಸಿ ಶ್ರೀಲಂಕಾ ಸರ್ಕಾರ ಕ್ರಿಕೆಟ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರಿಂದ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ತಕ್ಷಣವೇ ಜಾರಿಗೆ ಬರುವಂತೆ ಲಂಕಾ ಕ್ರಿಕೆಟ್ ಸದಸ್ಯತ್ವವನ್ನು ರದ್ದುಗೊಳಿಸಿತ್ತು.

ಇದನ್ನೂ ಓದಿ : ಅಶಿಸ್ತಿನಿಂದಾಗಿ ತಂಡದಿಂದ ಹೊರಬಿದ್ದರೇ ಕಿಶನ್​, ಅಯ್ಯರ್?:​​ ದ್ರಾವಿಡ್ ಹೇಳಿದ್ದಿಷ್ಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.