ETV Bharat / sports

ಭಾರತ ವಿರುದ್ಧದ ಸೀಮಿತ ಓವರ್​ಗಳ ಸರಣಿ ಆಯೋಜಿಸಿ ಶ್ರೀಲಂಕಾ ಬೋರ್ಡ್​ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? - ಶ್ರೀಲಂಕಾ ಕ್ರಿಕೆಟ್​ ಬೋರ್ಡ್​ಗೆ 106 ಕೋಟಿ ರೂ ಆದಾಯ

ಕ್ರಿಕೆಟ್​ ಲೋಕದ ಶ್ರೀಮಂತ ಮಂಡಳಿಯಾಗಿರುವ ಭಾರತದ ವಿರುದ್ಧ ಸರಣಿಯನ್ನಾಡಲೂ ಇಡೀ ವಿಶ್ವದ ಕ್ರಿಕೆಟ್​ ಬೋರ್ಡ್​ಗಳು ಸದಾ ಕಾಯುತ್ತಿರುತ್ತವೆ. ಆರ್ಥಿಕ ಸಂಕಷ್ಟದಲ್ಲಿದ್ದ ಶ್ರೀಲಂಕಾ ಮಂಡಳಿಯ ಕೋರಿಕೆಯ ಮೇರೆಗೆ ಬಿಸಿಸಿಐ ಈ ದಿಗ್ಗಜರಿಲ್ಲದ ದ್ವಿತೀಯ ದರ್ಜೆ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಿತ್ತು.

ಶ್ರೀಲಂಕಾ ಕ್ರಿಕೆಟ್​ ಮಂಡಳಿ
ಶ್ರೀಲಂಕಾ ಕ್ರಿಕೆಟ್​ ಮಂಡಳಿ
author img

By

Published : Aug 12, 2021, 3:12 PM IST

ನವದೆಹಲಿ: ಶಿಖರ್​ ಧವನ್​ ನೇತೃತ್ವದ ಭಾರತ ತಂಡಕ್ಕೆ ಆತಿಥ್ಯವಹಿಸಿದ್ದ ಶ್ರೀಲಂಕಾ ಕ್ರಿಕೆಟ್​ ಮಂಡಳಿ 3 ಟಿ-20 ಮತ್ತು 3 ಏಕದಿನ ಕ್ರಿಕೆಟ್​ ಪಂದ್ಯಗಳಿಂದ 100 ಕೋಟಿ ರೂಗಳಿಗಿಂತಲೂ ಹೆಚ್ಚಿನ ಹಣ ಗಳಿಸಿಕೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕ್ರಿಕೆಟ್​ ಲೋಕದ ಶ್ರೀಮಂತ ಮಂಡಳಿಯಾಗಿರುವ ಭಾರತದ ವಿರುದ್ಧ ಸರಣಿಯನ್ನಾಡಲೂ ಇಡೀ ವಿಶ್ವದ ಕ್ರಿಕೆಟ್​ ಬೋರ್ಡ್​ಗಳು ಸದಾ ಕಾಯುತ್ತಿರುತ್ತವೆ. ಆರ್ಥಿಕ ಸಂಕಷ್ಟದಲ್ಲಿದ್ದ ಶ್ರೀಲಂಕಾ ಮಂಡಳಿಯ ಕೋರಿಕೆಯ ಮೇರೆಗೆ ಬಿಸಿಸಿಐ ಈ ದಿಗ್ಗಜರಿಲ್ಲದ ದ್ವಿತೀಯ ದರ್ಜೆ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಿತ್ತು.

ಯುವಕರು ಹಾಗೂ ಹೊಸ ಮುಖಗಳೇ ಇದ್ದ ಈ ಸರಣಿಯಲ್ಲೂ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಬರೋಬ್ಬರಿ 107 ಕೋಟಿ ರೂ ಆದಾಯ ಸಂಪಾದಿಸಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಮೂಲಕ ಬಿಸಿಸಿಐ ಏಕೆ ಕ್ರಿಕೆಟ್​ ಜಗತ್ತಿನಲ್ಲಿ ಪ್ರಬಲ ಶಕ್ತಿಯುತ ಬೋರ್ಡ್​ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಅಂತಾರಾಷ್ಟ್ರೀಯ ವೇಳಾಪಟ್ಟಿಯಂತೆ ಭಾರತ ಕೇವಲ 3 ಏಕದಿನ ಪಂದ್ಯಗಳನ್ನಷ್ಟೇ ಶ್ರೀಲಂಕಾದಲ್ಲಿ ಆಡಬೇಕಿತ್ತು. ಆದರೆ, ಎಸ್​ಎಲ್​ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಕೋರಿಕೆಯ ಮೇರೆಗೆ ಹೆಚ್ಚುವರಿಯಾಗಿ 3 ಟಿ-20 ಆಡುವುದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಿತ್ತು.

ಇದರಿಂದ ಬ್ರಾಡ್​ಕಾಸ್ಟ್​ ಹಕ್ಕು ಮತ್ತು ಇತರ ಮೂಲಗಳಿಂದ ಕ್ರಿಕೆಟ್​ ಬೋರ್ಡ್​ಗೆ 14.5 ಮಿಲಿಯನ್ ಡಾಲರ್​ ಆದಾಯ ಸಂದಿದೆ ಎಂದು ಸಿಲ್ವಾ ಡೈಲಿ ಏಫ್​ಟಿ ಮಾಧ್ಯಮಕ್ಕೆ ಹೇಳಿದ್ದಾರೆ. ಈ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಭಾರತ 2-1ರಲ್ಲಿ ಗೆದ್ದರೆ, ಟಿ20 ಸರಣಿಯನ್ನು ಶ್ರೀಲಂಕಾ 2-1ರಲ್ಲಿ ಗೆದ್ದುಕೊಂಡಿತ್ತು.

ಇದನ್ನು ಓದಿ:ICC Test Rankings: ಕೊಹ್ಲಿ ಕುಸಿತ, ಬೌಲಿಂಗ್​ ರ‍್ಯಾಂಕಿಂಗ್​ನಲ್ಲಿ ಭಾರಿ ಏರಿಕೆ ಕಂಡ ಜಸ್ಪ್ರೀತ್ ಬುಮ್ರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.