ಗಾಲೆ(ಶ್ರೀಲಂಕಾ): ಶ್ರೀಲಂಕಾ - ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಲಂಕಾ ಪಡೆ ಹೊಸದೊಂದು ದಾಖಲೆ ಬರೆದಿದೆ. 1992ರ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಕಾಂಗರೂ ತಂಡದ ವಿರುದ್ಧ ಮೊದಲ ಸಲ 500 + ರನ್ಗಳಿಕೆ ಮಾಡಿದೆ.
-
Maiden double hundred for Dinesh Chandimal in Tests 🌟
— ICC (@ICC) July 11, 2022 " class="align-text-top noRightClick twitterSection" data="
Watch #SLvAUS LIVE on https://t.co/MHHfZPyHf9 (in select regions) 📺#WTC23 | 📝: https://t.co/rLt7mhNkl4 pic.twitter.com/qxonWgLJls
">Maiden double hundred for Dinesh Chandimal in Tests 🌟
— ICC (@ICC) July 11, 2022
Watch #SLvAUS LIVE on https://t.co/MHHfZPyHf9 (in select regions) 📺#WTC23 | 📝: https://t.co/rLt7mhNkl4 pic.twitter.com/qxonWgLJlsMaiden double hundred for Dinesh Chandimal in Tests 🌟
— ICC (@ICC) July 11, 2022
Watch #SLvAUS LIVE on https://t.co/MHHfZPyHf9 (in select regions) 📺#WTC23 | 📝: https://t.co/rLt7mhNkl4 pic.twitter.com/qxonWgLJls
ಶ್ರೀಲಂಕಾದ ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ಉಭಯ ತಂಡಗಳ ಮಧ್ಯೆ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 364 ರನ್ಗಳಿಕೆ ಮಾಡಿದೆ. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಶ್ರೀಲಂಕಾ ತಂಡ ಚಂಡಿಮಾಲ್(206ರನ್) ಅಜೇಯ ರನ್ಗಳ ನೆರವಿನಿಂದ 10 ವಿಕೆಟ್ ಕಳೆದುಕೊಂಡು 554ರನ್ಗಳಿಕೆ ಮಾಡಿದೆ.
ಈ ಮೂಲಕ 190ರನ್ಗಳ ಮುನ್ನಡೆ ಕಾಯ್ದುಕೊಂಡಿದೆ. ಈ ಟೆಸ್ಟ್ ಪಂದ್ಯದಲ್ಲಿ ಚಾಂಡಿಮಾನ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಾಧನೆ ಮಾಡಿದ್ದು, ಉಳಿದಂತೆ ಕರುಣರತ್ನೆ(86), ಕುಸಾಲ್ ಮೆಂಡಿಸ್(85), ಮ್ಯಾಥ್ಯೂಸ್(52) ಹಾಗೂ ಮೆಂಡಿಸ್(61)ರನ್ಗಳಿಕೆ ಮಾಡಿದರು.
ಈ ಹಿಂದೆ 1992ರಲ್ಲಿ ಶ್ರೀಲಂಕಾ ತಂಡಕ್ಕೆ ಅರ್ಜುನ್ ರಣತುಂಗಾ ಕ್ಯಾಪ್ಟನ್ ಆಗಿದ್ದ ವೇಳೆ 8 ವಿಕೆಟ್ನಷ್ಟಕ್ಕೆ 547ರನ್ಗಳಿಕೆ ಮಾಡಿ, ಡಿಕ್ಲೇರ್ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಅರ್ಜುನ್ ರಣತುಂಗಾ(127ರನ್), ಅಸಂಕ(137ರನ್) ಹಾಗೂ ರೊಮೇಶ್(132ರನ್)ಗಳಿಸಿದ್ದರು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 164ರನ್ಗಳಿಗೆ ಆಲೌಟ್ ಆಗಿ, 16ರನ್ಗಳ ಅಂತರದ ಸೋಲು ಕಂಡಿತ್ತು.
ಇದನ್ನು ಓದಿ:T-20I ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ದಾಖಲೆ ಬರೆದ ಸೂರ್ಯಕುಮಾರ್ ಯಾದವ್