ಮುಂಬೈ: ಸೀಮಿತ ಓವರ್ಗಳ ಸರಣಿಗಾಗಿ ಲಂಕಾ ಪ್ರವಾಸ ಕೈಗೊಳ್ಳಲಿರುವ ಆಟಗಾರರು ಮುಂಬೈನ ಹೋಟೆಲ್ನಲ್ಲಿ 14 ದಿನಗಳ ಕ್ವಾರಂಟೈನ್ ಆರಂಭಿಸಿದೆ. 7 ದಿನಗಳ ರೂಮ್ ಕ್ವಾರಂಟೈನ್ ಮತ್ತು 7 ದಿನಗಳ ಬಯೋಬಬಲ್ ಕ್ವಾರಂಟೈನ್ ನಡೆಸಲಿದೆ. ಈಗಾಗಲೇ ಎಲ್ಲ 20 ಆಟಗಾರರು ಮುಂಬೈಗೆ ಸೇರಿಕೊಂಡಿದ್ದಾರೆ.
ಜೂನ್ 28ರಂದು ಕೊಲಂಬೊಗೆ ತೆರಳುವ ಮುನ್ನ ಎಲ್ಲಾ ಆಟಗಾರರಿಗೂ ನಿರಂತರ ಕೋವಿಡ್ ಪರೀಕ್ಷೆಗಳು ನಡೆಸಲಾಗುತ್ತದೆ. ಈ ತಂಡಕ್ಕೆ ಶಿಖರ್ ಧವನ್ ನಾಯಕನಾಗಿದ್ದರೆ, ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಉಪನಾಯಕನಾಗಿದ್ದಾರೆ. ಒಟ್ಟು 20 ಸದಸ್ಯರ ತಂಡ ಹಾಗೂ 5 ನೆಟ್ ಬೌಲರ್ಗಳು ಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ ಈ ತಂಡಕ್ಕೆ ಕೋಚ್ ಆಗಿ ನೇಮಕವಾಗಿದ್ದಾರೆ.
ಬಿಸಿಸಿಐ ಸೀಮಿತ್ ಓವರ್ಗಳ ತಂಡ ಮುಂಬೈಗೆ ಬಂದಿಳಿದಿರುವ ವಿಚಾರವನ್ನು ಟ್ವಿಟರ್ನಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ತಿಳಿಸಿದೆ. ಈ ಪೋಸ್ಟ್ನಲ್ಲಿ ಧವನ್, ಭುವನೇಶ್ವರ್ , ಪಾಂಡ್ಯ ಬ್ರದರ್ಸ್ ಸೇರಿದಂತೆ ಇತರ ಆಟಗಾರರಿದ್ದಾರೆ.
- — BCCI (@BCCI) June 15, 2021 " class="align-text-top noRightClick twitterSection" data="
— BCCI (@BCCI) June 15, 2021
">— BCCI (@BCCI) June 15, 2021
ಜುಲೈ 13, 16 ಹಾಗೂ 18ರಂದು ಏಕದಿನ ಪಂದ್ಯಗಳು ಹಾಗೂ ಜುಲೈ 21, 23 ಹಾಗೂ 25ರಂದು ಟಿ-20 ಪಂದ್ಯಗಳು ನಡೆಯಲಿದೆ. ಕೊರೊನಾ ಕಾರಣದಿಂದ ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿಯೇ ಎಲ್ಲ ಪಂದ್ಯಗಳು ನಡೆಯಲಿವೆ.
ತಂಡ ಇಂತಿದೆ:
ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಯಜುವೇಂದ್ರ ಚಹಲ್, ರಾಹುಲ್ ಚಹರ್, ಕೃಷ್ಣಪ್ಪ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಿಯಾ
ಇದನ್ನು ಓದಿ:ಲಂಕಾ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಹೆಡ್ ಕೋಚ್: ದಾದಾ ಅಧಿಕೃತ ಘೋಷಣೆ