ETV Bharat / sports

ವೆಸ್ಟ್​ ಇಂಡೀಸ್ ವಿರುದ್ಧ ಶ್ರೀಲಂಕಾಗೆ 187 ರನ್​ಗಳ ಭರ್ಜರಿ ಜಯ

author img

By

Published : Nov 25, 2021, 5:30 PM IST

ಶ್ರೀಲಂಕಾ ನೀಡಿದ್ದ 347 ರನ್​ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 160 ರನ್​ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಟೆಸ್ಟ್​ ಪಂದ್ಯದಲ್ಲಿ 187 ರನ್​ಗಳ ಹೀನಾಯ ಸೋಲು ಕಂಡಿದೆ.

Sri Lanka beat west Indies
ವೆಸ್ಟ್​ ಇಂಡೀಸ್ ವಿರುದ್ಧ ಶ್ರೀಲಂಕಾಗೆ 187ರನ್​ಗಳ ಭರ್ಜರಿ ಜಯ

ಗಾಲೆ: ಆತಿಥೇಯ ಶ್ರೀಲಂಕಾ ತಂಡ ಸ್ಪಿನ್​ ಬೌಲರ್​ಗಳ ಅದ್ಭುತ ದಾಳಿಯ ನೆರವಿನಿಂದ ಪ್ರವಾಸಿ ವೆಸ್ಟ್ ಇಂಡೀಸ್​ ವಿರುದ್ಧ ಮೊದಲ ಟೆಸ್ಟ್​ ಪಂದ್ಯವನ್ನು 187 ರನ್​ಗಳಿಂದ ಗೆದ್ದು ಬೀಗಿದೆ.

ಎರಡನೇ ಇನ್ನಿಂಗ್ಸ್​ನಲ್ಲಿ 191/4 ರನ್​ಗಳಿಗೆ ಡಿಕ್ಲೇರ್ ಘೋಷಿಸಿಕೊಂಡಿದ್ದ ಶ್ರೀಲಂಕಾ, ವಿಂಡೀಸ್​ಗೆ 348 ರನ್​ಗಳ ಟಾರ್ಗೆಟ್​ ನೀಡಿತ್ತು. ಬೃಹತ್​ ಗುರಿ ಬೆನ್ನಟ್ಟಿದ ವೆಸ್ಟ್​ ಇಂಡೀಸ್ 4ನೇ ದಿನ​ ಕೇವಲ 18 ರನ್​ ಗಳಾಗುವಷ್ಟರಲ್ಲಿ 6 ವಿಕೆಟ್​ ಕಳೆದುಕೊಂಡಿತ್ತು. ಈ ಮೂಲಕ ಹೀನಾಯ ಸೋಲು ಕಾಣುವ ಸ್ಥಿತಿಗೆ ತಲುಪಿತ್ತು.

Sri Lanka on 🔝

The ICC #WTC23 points table after the first #SLvWI Test 👇 pic.twitter.com/73U0XUMgsh

— ICC (@ICC) November 25, 2021

ಆದರೆ, ಎಂಕ್ರುಮಾ ಬಾನರ್ (68)​ ಮತ್ತು ಜೋಶುವಾ ಡಿ ಸಿಲ್ವಾ (54) 7ನೇ ವಿಕೆಟ್​ಗೆ 100 ರನ್​ ಸೇರಿಸಿ ಲಂಕಾ ಬೌಲರ್​ಗಳಿಗೆ ಸ್ವಲ್ಪ ಸಮಯ ಪ್ರತಿರೋಧ ತೋರಿದರು. ಆದರೆ ಅಂತಿಮ ದಿನವಾದ ಇಂದು ಸ್ಪಿನ್ನರ್​ ಎಂಬುಲ್ದೇನಿಯಾ, ಸಿಲ್ವಾರ ವಿಕೆಟ್​ ಪಡೆದು ಶ್ರೀಲಂಕಾ ಗೆಲುವನ್ನು ಆರಂಭದ ಸೆಷನ್​ನಲ್ಲೇ ಖಚಿತಪಡಿಸಿದರು. ವಿಂಡೀಸ್​ ತನ್ನ 2ನೇ ಇನ್ನಿಂಗ್ಸ್​ನಲ್ಲಿ 160 ರನ್​ಗಳಿಗೆ ಸರ್ವಪತನ ಕಂಡು 187 ರನ್​ಗಳ ಸೋಲನುಭವಿಸಿತು.

ಶ್ರೀಲಂಕಾ ಪರ ಲಸಿತ್ ಎಂಬುಲ್ದೇನಿಯಾ 43ಕ್ಕೆ4, ರಮೇಶ್ ಮೆಂಡಿಸ್​ 67ಕ್ಕೆ 5 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು.

ಇದಕ್ಕೂ ಮುನ್ನ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕರುಣರತ್ನೆ (147) ಶತಕದ ನೆರವಿನಿಂದ 386 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ವೆಸ್ಟ್​ ಇಂಡೀಸ್​ 230 ರನ್​ಗಳಿಸಿ 156 ರನ್​ಗಳ ಹಿನ್ನಡೆ ಅನುಭವಿಸಿತ್ತು. ನಾಯಕ ಬ್ರಾತ್​ವೇಟ್​ 41, ಕೈಲ್ ಮೇಯರ್ಸ್​ 45 ರನ್​ಗಳಿಸಿದ್ದರು. ಜಯ ವಿಕ್ರಮ 4, ರಮೇಶ್ ಮೆಂಡಿಸ್​ 3 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: ವಿಡಿಯೋ ನೋಡಿ: ಚೆಂಡನ್ನು ತಡೆಯಲು ಹೋಗಿ ಸ್ಟಂಪ್​ಗೆ ಅಪ್ಪಳಿಸಿ ಔಟಾದ ಧನಂಜಯ

ಗಾಲೆ: ಆತಿಥೇಯ ಶ್ರೀಲಂಕಾ ತಂಡ ಸ್ಪಿನ್​ ಬೌಲರ್​ಗಳ ಅದ್ಭುತ ದಾಳಿಯ ನೆರವಿನಿಂದ ಪ್ರವಾಸಿ ವೆಸ್ಟ್ ಇಂಡೀಸ್​ ವಿರುದ್ಧ ಮೊದಲ ಟೆಸ್ಟ್​ ಪಂದ್ಯವನ್ನು 187 ರನ್​ಗಳಿಂದ ಗೆದ್ದು ಬೀಗಿದೆ.

ಎರಡನೇ ಇನ್ನಿಂಗ್ಸ್​ನಲ್ಲಿ 191/4 ರನ್​ಗಳಿಗೆ ಡಿಕ್ಲೇರ್ ಘೋಷಿಸಿಕೊಂಡಿದ್ದ ಶ್ರೀಲಂಕಾ, ವಿಂಡೀಸ್​ಗೆ 348 ರನ್​ಗಳ ಟಾರ್ಗೆಟ್​ ನೀಡಿತ್ತು. ಬೃಹತ್​ ಗುರಿ ಬೆನ್ನಟ್ಟಿದ ವೆಸ್ಟ್​ ಇಂಡೀಸ್ 4ನೇ ದಿನ​ ಕೇವಲ 18 ರನ್​ ಗಳಾಗುವಷ್ಟರಲ್ಲಿ 6 ವಿಕೆಟ್​ ಕಳೆದುಕೊಂಡಿತ್ತು. ಈ ಮೂಲಕ ಹೀನಾಯ ಸೋಲು ಕಾಣುವ ಸ್ಥಿತಿಗೆ ತಲುಪಿತ್ತು.

ಆದರೆ, ಎಂಕ್ರುಮಾ ಬಾನರ್ (68)​ ಮತ್ತು ಜೋಶುವಾ ಡಿ ಸಿಲ್ವಾ (54) 7ನೇ ವಿಕೆಟ್​ಗೆ 100 ರನ್​ ಸೇರಿಸಿ ಲಂಕಾ ಬೌಲರ್​ಗಳಿಗೆ ಸ್ವಲ್ಪ ಸಮಯ ಪ್ರತಿರೋಧ ತೋರಿದರು. ಆದರೆ ಅಂತಿಮ ದಿನವಾದ ಇಂದು ಸ್ಪಿನ್ನರ್​ ಎಂಬುಲ್ದೇನಿಯಾ, ಸಿಲ್ವಾರ ವಿಕೆಟ್​ ಪಡೆದು ಶ್ರೀಲಂಕಾ ಗೆಲುವನ್ನು ಆರಂಭದ ಸೆಷನ್​ನಲ್ಲೇ ಖಚಿತಪಡಿಸಿದರು. ವಿಂಡೀಸ್​ ತನ್ನ 2ನೇ ಇನ್ನಿಂಗ್ಸ್​ನಲ್ಲಿ 160 ರನ್​ಗಳಿಗೆ ಸರ್ವಪತನ ಕಂಡು 187 ರನ್​ಗಳ ಸೋಲನುಭವಿಸಿತು.

ಶ್ರೀಲಂಕಾ ಪರ ಲಸಿತ್ ಎಂಬುಲ್ದೇನಿಯಾ 43ಕ್ಕೆ4, ರಮೇಶ್ ಮೆಂಡಿಸ್​ 67ಕ್ಕೆ 5 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು.

ಇದಕ್ಕೂ ಮುನ್ನ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕರುಣರತ್ನೆ (147) ಶತಕದ ನೆರವಿನಿಂದ 386 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ವೆಸ್ಟ್​ ಇಂಡೀಸ್​ 230 ರನ್​ಗಳಿಸಿ 156 ರನ್​ಗಳ ಹಿನ್ನಡೆ ಅನುಭವಿಸಿತ್ತು. ನಾಯಕ ಬ್ರಾತ್​ವೇಟ್​ 41, ಕೈಲ್ ಮೇಯರ್ಸ್​ 45 ರನ್​ಗಳಿಸಿದ್ದರು. ಜಯ ವಿಕ್ರಮ 4, ರಮೇಶ್ ಮೆಂಡಿಸ್​ 3 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: ವಿಡಿಯೋ ನೋಡಿ: ಚೆಂಡನ್ನು ತಡೆಯಲು ಹೋಗಿ ಸ್ಟಂಪ್​ಗೆ ಅಪ್ಪಳಿಸಿ ಔಟಾದ ಧನಂಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.