ಕೊಲಂಬೊ: ಶ್ರೀಲಂಕಾ ಬೌಲಿಂಗ್ ದಾಳಿಯ ಮುಂದೆ ಸಂಪೂರ್ಣ ವೈಫಲ್ಯ ಅನುಭವಿಸಿದ ಭಾರತ ತಂಡ ಮೂರನೇ ಟಿ20 ಪಂದ್ಯದಲ್ಲಿ 7 ವಿಕೆಟ್ಗಳ ಸೋಲು ಕಂಡಿದೆ. ಈ ಗೆಲುವಿನ ಮೂಲಕ ಶ್ರೀಲಂಕಾ ತಂಡ 13 ವರ್ಷಗಳ ಬಳಿಕ ಭಾರತದ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಗೆಲುವು ಸಾಧಿಸಿದೆ.
ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 81 ರನ್ಗಳಿಸಿತ್ತು. 23 ರನ್ಗಳಿಸಿದ ಕುಲ್ದೀಪ್ ಯಾದವ್, 16 ರನ್ ಗಳಿಸಿದ ಭುವನೇಶ್ವರ್ ಕುಮಾರ್ ಭಾರತದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
-
Sri Lanka win 👏
— ICC (@ICC) July 29, 2021 " class="align-text-top noRightClick twitterSection" data="
They register a 7-wicket victory against India in Colombo and take the series 2-1! #SLvIND | https://t.co/mYciWl62Z7 pic.twitter.com/ZeFPkhK7Jm
">Sri Lanka win 👏
— ICC (@ICC) July 29, 2021
They register a 7-wicket victory against India in Colombo and take the series 2-1! #SLvIND | https://t.co/mYciWl62Z7 pic.twitter.com/ZeFPkhK7JmSri Lanka win 👏
— ICC (@ICC) July 29, 2021
They register a 7-wicket victory against India in Colombo and take the series 2-1! #SLvIND | https://t.co/mYciWl62Z7 pic.twitter.com/ZeFPkhK7Jm
ನಾಯಕ ಶಿಖರ್ ಧವನ್, ಸಂಜು ಸಾಮ್ಸನ್ ಸೊನ್ನೆ ಸುತ್ತಿದರೆ, ಯುವ ಬ್ಯಾಟ್ಸ್ಮನ್ಗಳಾದ ಗಾಯಕ್ವಾಡ್ 14, ಪಡಿಕ್ಕಲ್ 9, ನಿತೀಶ್ ರಾಣಾ 6 ರನ್ಗಳಿಗೆ ವಿಕೆಟ್ ಒಪ್ಪಿಸಿ ವೈಫಲ್ಯ ಅನುಭವಿಸಿದರು.
ಶ್ರೀಲಂಕಾ ಪರ ಜನ್ಮದಿನ್ನವನ್ನಾಚರಿಸಿಕೊಂಡಿದ್ದ ವಿನಿಂಡು ಹಸರಂಗ 9 ರನ್ಗಳಿಗೆ 4 ವಿಕೆಟ್, ಪಡೆದರೆ, ನಾಯಕ ಶನಕ 20ಕ್ಕೆ 2, ರಮೇಶ್ ಮೆಂಡಿಸ್ 13ಕ್ಕೆ1 ಮತ್ತು ಚಮೀರ 16ಕ್ಕೆ 1 ವಿಕೆಟ್ ಪಡೆದು ಭಾರತವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.
ಇನ್ನು 82 ರನ್ಗಳ ಅಲ್ಪಮೊತ್ತದ ಗುರಿ ಬೆನ್ನತ್ತಿದ ಶ್ರೀಲಂಕಾ 14.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆವಿಷ್ಕಾ ಫರ್ನಾಂಡೊ 12, ಮಿನೋದ್ ಭನುಕ 18, ಧನಂಜಯ ಡಿ ಸಿಲ್ವಾ ಅಜೇಯ 23 ಮತ್ತು ಹಸರಂಗ ಅಜೇಯ 14 ರನ್ಗಳಿಸಿ 2-1ರಲ್ಲಿ ಸರಣಿ ಗೆಲುವಿಗೆ ಕಾರಣರಾದರು.
ಶ್ರೀಲಂಕಾ ತಂಡ 2008ರಲ್ಲಿ ಕೊನೆಯ ಬಾರಿ ದ್ವಿಪಕ್ಷೀಯ ಸರಣಿ ಗೆದ್ದಿತ್ತು. ಈ ಅವದಿಯಲ್ಲಿ 21 ಸರಣಿಗಳ ಬಳಿಕ ಭಾರತದ ವಿರುದ್ಧ ದ್ವಿಪಕ್ಷೀಯ ಸರಣಿ ದಾಖಲಿಸಿದೆ. 2008ರಲ್ಲಿ ಶ್ರೀಲಂಕಾ 2-1ರಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು.
ಇದನ್ನು ಓದಿ: Devdutt Padikkal: 21ನೇ ಶತಮಾನದಲ್ಲಿ ಪದಾರ್ಪಣೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ