ETV Bharat / sports

ಪಾಕ್​ನಿಂದ ಹೊರಗೆ ಏಷ್ಯಾಕಪ್​: ಬಿಸಿಸಿಐಗೆ ಬೆಂಬಲ ಸೂಚಿಸಿದ ಲಂಕಾ, ಬಾಂಗ್ಲಾ ಕ್ರಿಕೆಟ್​ ಮಂಡಳಿ - ETV Bharath Kannada news

ಲಂಕಾ, ಬಾಂಗ್ಲಾ ಕ್ರಿಕೆಟ್​ ಮಂಡಳಿ ಏಷ್ಯಾಕಪ್​ ಆಯೋಜನೆಗೆ ಉತ್ಸಾಹ ತೋರಿದ್ದು, ಭಾರತದ ಪಾಕ್​ ಹೊರಗೆ ಟೂರ್ನಿ ಆಟದ ಅಭಿಪ್ರಾಯಕ್ಕೆ ಉಭಯ ಮಂಡಳಿಗಳು ಒತ್ತು ನೀಡಿವೆ.

Sri Lanka, Bangladesh cricket boards back BCCI on moving Asia Cup 2023 out of Pakistan
ಪಾಕ್​ನಿಂದ ಹೊರಗೆ ಏಷ್ಯಾಕಪ್​: ಬಿಸಿಸಿಐಗೆ ಬೆಂಬಲ ಸೂಚಿಸಿದ ಲಂಕಾ, ಬಾಂಗ್ಲಾ ಕ್ರಿಕೆಟ್​ ಮಂಡಳಿ
author img

By

Published : May 8, 2023, 8:15 PM IST

ನವದೆಹಲಿ: ಈ ವರ್ಷದ ಏಷ್ಯಾಕಪ್ ಟೂರ್ನಿಯನ್ನು ಪಾಕಿಸ್ತಾನದಿಂದ ಹೊರಗೆ ಆಯೋಜಿಸುವ ವಿಚಾರದಲ್ಲಿ ಶ್ರೀಲಂಕಾ ಕ್ರಿಕೆಟ್ (SLC) ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗೆ ಬೆಂಬಲ ನೀಡಿದೆ. ಮಾಧ್ಯಮ ಒಂದರ ವರದಿ ಪ್ರಕಾರ, ಕಾಂಟಿನೆಂಟಲ್ ಕ್ರಿಕೆಟ್ ಸಂಬಂಧವನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಿದರೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆಯೋಜಿಸಲು ಸಿದ್ಧವಾಗಿದೆ ಎನ್ನಲಾಗಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಶಾ ಕಳೆದ ವರ್ಷ 2023ರ ಆವೃತ್ತಿಯ ಪಂದ್ಯಾವಳಿಯನ್ನು ಪಾಕಿಸ್ತಾನದ ಬದಲಿಗೆ ತಟಸ್ಥ ಸ್ಥಳದಲ್ಲಿ ನಡೆಸಲಾಗುವುದು ಎಂದು ಘೋಷಿಸಿದರು. ಹೊರಗೆ ಆಯೋಜಿಸಲಿರುವ ಕಾರಣ, ಏಷ್ಯಾ ಕಪ್‌ನಲ್ಲಿ ಭಾಗವಹಿಸದಿರಲು ಪಾಕಿಸ್ತಾನ ನಿರ್ಧರಿಸಿದರೆ, ಪಾಕಿಸ್ತಾನ ತಂಡದ ಸ್ಥಾನದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ್ನು ಆಡಿಸಲಾಗುವುದು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಭಿಪ್ರಾಯ ಮಂಡಿಸಿದೆ.

ನಷ್ಟ ಭರಿಸಲಿರುವ ಬಿಸಿಸಿಐ: 2023ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ಅನುಪಸ್ಥಿತಿಯಿಂದ ಪ್ರಸಾರಕರು ಅನುಭವಿಸುವ ನಷ್ಟವನ್ನು ಭವಿಷ್ಯದಲ್ಲಿ ಭಾರತವನ್ನು ಒಳಗೊಂಡ ಸರಣಿಯ ಸಮಯದಲ್ಲಿ ಭರಿಸಲಾಗುವುದು ಎಂದು ಪ್ರಸ್ತುತ ಎಸಿಸಿ ಅಧ್ಯಕ್ಷ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಸಾರಕರಿಗೆ ಭರವಸೆ ನೀಡಿದ್ದಾರೆ.

ಮುಂದಿನ ಎಸಿಸಿ ಸಭೆಯಲ್ಲಿ ಈ ವಿಷಯದ ಬಗ್ಗೆ ಕಟ್ಟುನಿಟ್ಟಿನ ನಿಲುವು ತೆಗೆದುಕೊಳ್ಳುವಂತೆ ಬಿಸಿಸಿಐಗೆ ಕೇಂದ್ರವು ಕೇಳಿಕೊಂಡಿದೆ. ಏಷ್ಯಾ ಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಸ್ತಾಪಿಸಿದ ಹೈಬ್ರೀಡ್​ ಮಾದರಿಯಂತೆ ಭಾರತವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಬೇಕು ಎಂಬ ನಿರ್ಧಾರವನ್ನು ಭಾರತ ಕ್ರಿಕೆಟ್ ಆಡಳಿತ ಮಂಡಳಿ ಒಪ್ಪಿಕೊಂಡಿಲ್ಲ.

ಇದಕ್ಕೂ ಮೊದಲು, ಪಿಸಿಬಿ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ನಜಮ್ ಸೇಥಿ ಅವರು ಏಷ್ಯಾ ಕಪ್‌ನ ಆತಿಥ್ಯ ಮತ್ತು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ತಲೆದೋರಿರುವ ಬಿಕ್ಕಟ್ಟನ್ನು ಪರಿಹರಿಸಲು ಕರೆ ನೀಡಿದರು. ಅಂತರ-ಪ್ರಾಂತೀಯ ಸಮನ್ವಯದ ರಾಷ್ಟ್ರೀಯ ಅಸೆಂಬ್ಲಿ ಸ್ಥಾಯಿ ಸಮಿತಿ (National Assembly Standing Committee on Inter-Provincial Coordination - IPC) ಸಭೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೇಥಿ, 50 ಓವರ್‌ಗಳ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸುವ ಪಾಕಿಸ್ತಾನದ ಅವಕಾಶಗಳು ಕಡಿಮೆ ಎಂದು ಹೇಳಿದರು.

"ಏಷ್ಯಾ ಕಪ್‌ನಲ್ಲಿ ಸ್ಪರ್ಧಿಸಲು ಭಾರತವು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದರೆ, ಪಾಕಿಸ್ತಾನ ಸರ್ಕಾರವು ನಮ್ಮ ತಂಡವನ್ನು ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗಾಗಿ ಪ್ರವಾಸಕ್ಕೆ ನಿರಾಕರಿಸಲಿದೆ. ಆದರೆ ಕ್ರಿಕೆಟ್ ಎಂಬುದು ಅಂತಿಮವಾದಾಗ ಬದಲಾಗುವ ಸಾಧ್ಯತೆಯೂ ಇದೆ. ಐಸಿಸಿ ಮತ್ತು ಎಸಿಸಿ ಪಂದ್ಯಗಳ ಸುಗಮ ಆತಿಥ್ಯಕ್ಕೆ ಬೆದರಿಕೆ ಹಾಕುವ ಸಮಸ್ಯೆಗಳನ್ನು ಪರಿಹರಿಸಲು ಮಧ್ಯಮ ಮಾರ್ಗವಿರಬೇಕು. ಏಷ್ಯಾಕಪ್‌ಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರೆ, ಭಾರತಕ್ಕೆ ಪ್ರಯಾಣಿಸಲು ಸರ್ಕಾರವು ನಮಗೆ ಅವಕಾಶ ನೀಡುವುದಿಲ್ಲ" ಎಂದು ಸೇಥಿ ಹೇಳಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿಗೆ ಬರುವುದಾಗಿ ಬರೆದುಕೊಟ್ಟರೆ ವಿಶ್ವಕಪ್​ಗೆ ಪಾಕ್​ ಭಾರತಕ್ಕೆ: ಪಿಸಿಬಿ ಚೌಕಾಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.