ETV Bharat / sports

ಟಿ20 ವಿಶ್ವಕಪ್​ಗಾಗಿ 4 ತಂಡಗಳಿಂದ ವಿಶೇಷ ಜರ್ಸಿ ಬಿಡುಗಡೆ - ನಮೀಬಿಯಾ ಜರ್ಸಿ

ಯುಎಇ ಮತ್ತು ಒಮಾನ್​ನಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಮೊದಲು 8 ತಂಡಗಳ ಕ್ವಾಲಿಫೈಯರ್​ ಜುಲೈ 17ರಿಂದ ಆರಂಭವಾಗಲಿದೆ. ನಂತರ ಯುಎಇನಲ್ಲಿ ಸೂಪರ್ 12 ನಡೆಯಲಿದೆ. ನವೆಂಬರ್ 14 ರಂದು ಫೈನಲ್ ನಡೆಯಲಿದೆ..

ಟಿ20 ವಿಶ್ವಕಪ್​ ಜರ್ಸಿ ಬಿಡುಗಡೆ
ಟಿ20 ವಿಶ್ವಕಪ್​ ಜರ್ಸಿ ಬಿಡುಗಡೆ
author img

By

Published : Oct 12, 2021, 7:45 PM IST

ದುಬೈ : ಟಿ20 ವಿಶ್ವಕಪ್​ ಆರಂಭಕ್ಕೆ ಕೇವಲ 5 ದಿನ ಬಾಕಿ ಉಳಿದಿವೆ. ಈಗಾಗಲೇ ಬಹುಪಾಲು ತಂಡಗಳು ಟಿ20 ವಿಶ್ವಕಪ್​ಗೆ ತಂಡವನ್ನು ಖಚಿತಪಡಿಸಿವೆ. ಅಕ್ಟೋಬರ್‌ 17ರಿಂದ ಆರಂಭವಾಗಲಿರುವ ಕ್ರಿಕೆಟ್​ ಹಬ್ಬಕ್ಕೆ ಕೆಲವು ರಾಷ್ಟ್ರಗಳು ತಮ್ಮ ವಿನೂತನ ಜರ್ಸಿಯನ್ನು ಬಿಡುಗಡೆಗೊಳಿಸುತ್ತಿವೆ.

ಸ್ಕಾಟ್ಲೆಂಡ್ : ವಿಶ್ವಕಪ್​ ಕ್ವಾಲಿಫೈಯರ್​ನಲ್ಲಿ ಆಡಲು ಅರ್ಹತೆ ಪಡೆದಿರುವ ಸ್ಕಾಟ್ಲೆಂಡ್​ ಯುಎಇ ಮತ್ತು ಒಮಾನ್​ನಲ್ಲಿ ನಡೆಯಲಿರುವ ಚುಟುಕು ಮಹಾ ಸಮರದಲ್ಲಿ ನೇರಳೆ ಬಣ್ಣದ ಜರ್ಸಿ ಮತ್ತು ಹೆಲ್ಮೆಟ್ ಧರಿಸಲಿದೆ.

ಶ್ರೀಲಂಕಾ : ಸೂಪರ್‌ 12ಗೆ ನೇರ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲರಾಗಿರುವ 2014ರ ವಿಶ್ವ ಚಾಂಪಿಯನ್ ಶ್ರೀಲಂಕಾ ಈ ಬಾರಿ ಎರಡು ಕಿಟ್​ಗಳನ್ನು ಬಿಡುಗಡೆ ಮಾಡಿದೆ. ಬಲ ಭಾಗದಲ್ಲಿ ಸಿಂಹದ ಚಿತ್ರವಿರುವ ಹಳದಿ ಮತ್ತು ನೀಲಿ ಸಂಖ್ಯೆ ಇರುವ ಒಂದು ಜರ್ಸಿ ಮತ್ತು ವಿಭಿನ್ನ ವಿನ್ಯಾಸದ ನೀಲಿ ಬಣ್ಣದ ಮತ್ತೊಂದು ಕಿಟ್​ ಬಿಡುಗಡೆ ಮಾಡಿದೆ.

ಐರ್ಲೆಂಡ್ : ಐರ್ಲೆಂಡ್​ ಮುಂಬರುವ ವಿಶ್ವಕಪ್​ಗೆ ಹಸಿರು ಮತ್ತು ನೀಲಿ ಸಂಯೋಜನೆಯುಳ್ಳ ಜರ್ಸಿಯನ್ನು ತೊಡಲಿದೆ.

ನಮೀಬಿಯಾ : 2003ರಲ್ಲಿ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಆಡಿದ್ದ ನಮೀಬಿಯಾ ಅವರ ಜರ್ಸಿಯ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಮತ್ತೆ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ. ಕಡು ನೀಲಿ, ಭುಜ ಮತ್ತು ಎಡ ತೊಡೆಯ ಮೇಲೆ ತಿಳಿ ನೀಲಿಯಿಂದ ಕೂಡಿದೆ. ಇದರ ಜೊತೆಗೆ ಕೆಂಪು ಬಣ್ಣದ ಜರ್ಸಿಯನ್ನು ಹೊಂದಿದೆ.

ಇದನ್ನು ಓದಿ:ವಿಶ್ವಕಪ್​ನಲ್ಲಿ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಧೋನಿ ಯಾವುದೇ ಗೌರವಧನ ಪಡೆಯುತ್ತಿಲ್ಲ : ಜಯ್ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.