ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಾಲಿಕ ಸಂಸ್ಥೆಯಾಗಿರುವ ಸನ್ ನೆಟ್ವರ್ಕ್ ಭಾರತದಲ್ಲಿ ಕೋವಿಡ್ 19 ಹೋರಾಟಕ್ಕೆ ಬರೋಬ್ಬರಿ 30 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದೆ.
ಭಾರತದಾದ್ಯಂತ ಕೋವಿಡ್ ಎರಡನೇ ಅಲೆಗೆ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ನಿತ್ಯ ಲಕ್ಷಾಂತರ ಮಂದಿಗೆ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಆಕ್ಸಿಜನ್ ಕೊರತೆ, ಬೆಡ್ ಕೊರತೆಯಿಂದ ದೇಶದ ಜನತ ತತ್ತರಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಹಲವಾರು ಕ್ರಿಕೆಟಿಗರು, ಎನ್ಜಿಒಗಳು, ಸೆಲೆಬ್ರೆಟಿಗಳು ಕೋವಿಡ್ ತೊಲಗಿಸಲು ಕೈ ಜೋಡಿಸುತ್ತಿದ್ದಾರೆ. ಈ ಹೋರಾಟಕ್ಕೆ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲಿಕ ಸಂಸ್ಥೆಯಾದ ಸನ್ ನೆಟ್ವರ್ಕ್ ಬರೋಬ್ಬರಿ 30 ಕೋಟಿ ರೂಗಳನ್ನು ವ್ಯಯಿಸಲು ನಿರ್ಧರಿಸಿದೆ.
-
Sun TV (SunRisers Hyderabad) is donating Rs.30 crores to provide relief to those affected by the second wave of the Covid-19 pandemic. pic.twitter.com/P6Fez9DuLo
— SunRisers Hyderabad (@SunRisers) May 10, 2021 " class="align-text-top noRightClick twitterSection" data="
">Sun TV (SunRisers Hyderabad) is donating Rs.30 crores to provide relief to those affected by the second wave of the Covid-19 pandemic. pic.twitter.com/P6Fez9DuLo
— SunRisers Hyderabad (@SunRisers) May 10, 2021Sun TV (SunRisers Hyderabad) is donating Rs.30 crores to provide relief to those affected by the second wave of the Covid-19 pandemic. pic.twitter.com/P6Fez9DuLo
— SunRisers Hyderabad (@SunRisers) May 10, 2021
ಈ ಮೊತ್ತವನ್ನು ದೇಶದ ವಿವಿಧ ರಾಜ್ಯ ಸರ್ಕಾರಗಳ ಗೊತ್ತುಪಡಿಸಿರುವ ಕಾರ್ಯಕ್ರಮಗಳಿಗೆ ಮತ್ತು ಎನ್ಜಿಒಗಳ ಜೊತೆಗೆ ಪಾಲುದಾರರಾಗಿ ಆಕ್ಸಿಜನ್ ಸಿಲಿಂಡರ್ಸ್, ಔಷಧಗಳು ಮತ್ತು ಇತರ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ಸಂದರ್ಭದಲ್ಲಿ ತಮ್ಮ ಮಾಧ್ಯಮ ಸೇರಿದಂತೆ ತಮ್ಮ ಬೃಹತ್ ನೆಟ್ವರ್ಕ್ನಲ್ಲಿ ವಿಶ್ವದಾದ್ಯಂತ ಕೊರೊನಾ ಕುರಿತು ಜಾಗೃತಿ ನೀಡುವುದಾಗಿ ತಿಳಿಸಿದೆ.
ಇದನ್ನು ಓದಿ: ಕೋವಿಡ್ 19 ಲಸಿಕೆ ಮೊದಲ ಡೋಸ್ ಪಡೆದ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ