ನವದೆಹಲಿ: ದಕ್ಷಿಣ ಆಫ್ರಿಕಾದ ಶ್ರೇಷ್ಠ ವೇಗಿ ಡೇಲ್ ಸ್ಟೇನ್ ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈಗಾಗಲೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದ ಅವರು ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಕಳೆದ ವ 20 ವರ್ಷಗಳಿಂದ ತರಬೇತಿ, ಪಂದ್ಯಗಳು, ಪ್ರಯಾಣ, ಗೆಲುವು- ಸೋಲು, ಜೆಟ್ ಲ್ಯಾಗ್, ಎಂಜಾಯ್ಮೆಂಟ್ ಹಾಗೂ ಸಹೋಹದರತ್ವ ಹೀಗೆ ಹೇಳಲು ಸಾಕಷ್ಟು ಸುಮದುರ ನೆನಪುಗಳಿವೆ. ಸಾಕಷ್ಟು ಜನರಿಗೆ ಧನ್ಯವಾದ ಹೇಳಬೇಕಿದೆ. ಆದ್ದರಿಂದ ಇದನ್ನು ಪರಿಣಿತರಿಗೆ ಬಿಟ್ಟಿದ್ದೇನೆ ಎಂದಿದ್ದಾರೆ.
ಈ ದಿನ ನಾನು ಪ್ರೀತಿಸಿದ ಆಟಕ್ಕೆ ಅಧಿಕೃತವಾಗಿ ವಿದಾಯ ಘೋಷಿಸುತ್ತಿದ್ದೇನೆ. ಇದು ಕಹಿ ಸತ್ಯವಾಗಿದೆ, ಆದರೆ ಒಪ್ಪಿಕೊಳ್ಳಲೇಬೇಕು. ಈ ನನ್ನ ಕ್ರಿಕೆಟ್ ಪಯಣದಲ್ಲಿ ನನಗೆ ಬೆಂಬಲಿಸಿದ ಕುಟುಂಬ, ತಂಡದ ಸಹ ಆಟಗಾರರು, ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ಧನ್ಯವಾದ ಎಂದು ಭಾವನಾತ್ಮಕ ಬರಹವನ್ನು ಹಂಚಿಕೊಳ್ಳುವ ಮೂಲಕ ಸ್ಟೇನ್ ನಿವೃತ್ತಿ ಘೋಷಿಸಿದ್ದಾರೆ.
-
Announcement. pic.twitter.com/ZvOoeFkp8w
— Dale Steyn (@DaleSteyn62) August 31, 2021 " class="align-text-top noRightClick twitterSection" data="
">Announcement. pic.twitter.com/ZvOoeFkp8w
— Dale Steyn (@DaleSteyn62) August 31, 2021Announcement. pic.twitter.com/ZvOoeFkp8w
— Dale Steyn (@DaleSteyn62) August 31, 2021
ಡೇಲ್ ಸ್ಟೇನ್ ಅವರು 125 ಏಕದಿನ ಪಂದ್ಯವನ್ನಾಡಿದ್ದು, 196 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 93 ಪಂದ್ಯಗಳಲ್ಲಿ 439 ವಿಕೆಟ್ ಕಬಳಿಸಿದ್ದಾರೆ. 47 ಟಿ20 ಪಂದ್ಯಗಳಿಂದ 64 ವಿಕೆಟ್ ಪಡೆದಿದ್ದಾರೆ.