ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): ಮಂಗಳವಾರ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ (ODI) ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿ ಸಮಬಲ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-1 ಅಂತರದಲ್ಲಿ ಸಮಬಲ ಸಾಧಿಸಿದೆ.
ಜಿಕ್ಬೇರಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಮೊದಲಿಗೆ ಬೌಲಿಂಗ್ ಆಯ್ದುಕೊಂಡ ಭಾರತಕ್ಕೆ ಬ್ಯಾಟಿಂಗ್ಗೆ ಆಹ್ವಾನಿಸಿದರು. ಈ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತ 46.2 ಓವರ್‌ಗಳಲ್ಲಿ 211 ರನ್‌ಗಳಿಗೆ ಸರ್ವಪತನ ಕಂಡಿತ್ತು. ಭಾರತದ ಪರ ಸಾಯಿ ಸುದರ್ಶನ್ (62) ಮತ್ತು ಕೆ.ಎಲ್ ರಾಹುಲ್ (56) ಅರ್ಧಶತಕ ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟರ್ಗಳು ಹರಿಣಗಳ ಬೌಲಿಂಗ್ ದಾಳಿಗೆ ಕ್ರೀಸ್ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ.
ಮೊದಲ ಏಕದಿನ ಪಂದ್ಯದ ರೀತಿಯಲ್ಲೇ ರುತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ಮತ್ತೊಮ್ಮ ವೈಫಲ್ಯ ಅನುಭವಿಸಿದರು. ವರ್ಮಾ ಕೇವಲ (10) ರನ್ಗೆ ವಿಕೆಟ್ ಒಪ್ಪಿಸಿದರು. ಸಾಧಾರಣ ಗುರಿ ಬೆನ್ನಟ್ಟಿದ ಆಫ್ರಿಕಾ ಟೋನಿ ಡಿಜಾರ್ಜ್ ಅವರ ಶತಕದ ನೆರವಿನಿಂದ ಎರಡು ವಿಕೆಟ್ ಕಳೆದುಕೊಂಡು 212 ರನ್‌ಗಳ ಗುರಿ ತಲಪುವ ಮೂಲಕ ಸರಣಿ ಸಮಬಲಗೊಳಿಸಿತು. ಆಫ್ರಿಕಾ ಪರ ಡಿಜಾರ್ಜ್(119 ಅಜೇಯ), ಹೆಂಡ್ರಿಕ್ಸ್ (52), ವಾಂಡರ್ ಡಸ್ಸೆನ (36) ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು.
ಮೊದಲ ಏಕದಿನ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ಹರಿಣಗಳನ್ನು ಬಗ್ಗು ಬಡೆದಿದ್ದ ಭಾರತ, ಎರಡನೇ ಪಂದ್ಯದಲ್ಲಿ ಬೌಲಿಂಗ್ ಸ್ನೇಹಿ ಪಿಚ್ ಆಗಿದ್ದರೂ ಹೆಚ್ಚಿನ ಸಾಹಸ ಪ್ರದರ್ಶಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ.
ಸ್ಕೋರ್ ಕಾರ್ಡ್, ಭಾರತ: ರುತುರಾಜ್ (4), ಸಾಯಿ ಸುದರ್ಶನ್ (62), ತಿಲಕ್ ವರ್ಮ (10), ರಾಹುಲ್ (56), ಸಂಜು ಸ್ಯಾಮ್ಸನ್ (12), ರಿಂಕು (17), ಅಕ್ಷರ್ (7), ಕುಲದೀಪ್ (1), ಅರ್ಶ್ದೀಪ್ (18) ಅವೇಶ್ ಖಾನ್ (9), ಮುಖೇಶ್(ಅಜೇಯ 4)
ಬೌಲಿಂಗ್: ನಂದ್ರಿ ಬರ್ಗರ್ ಮೂರು ವಿಕೆಟ್, ಹೆಂಡ್ರಿಕ್ಸ್ 2, ಕೇಶವ್ 2, ಹಲ್ಲಿ ವಿಲಿಯಮ್ಸ್, ಮಾರ್ಕ್ರಾಮ್ ತಲಾ ಒಂದು ವಿಕೆಟ್
ದಕ್ಷಿಣ ಆಫ್ರಿಕಾ: ಹೆಂಡ್ರಿಕ್ಸ್ (52), ಟೋನಿ ಡಿ ಜಾರ್ಜಿ (ಅಜೇಯ 119), ವಾಂಡರ್ ಡಸ್ಸೆನ್ (36) ಮಾರ್ಕ್ರಾಮ್ (2)
ಬೌಲಿಂಗ್: ಅರ್ಷದೀಪ್, ರಿಂಕ್ ತಲಾ ಒಂದು ವಿಕೆಟ್
ಇದನ್ನೂ ಓದಿ: 2024ರ ಐಪಿಎಲ್ ಹರಾಜು: ಆಸ್ಟ್ರೇಲಿಯಾದ ಆಟಗಾರರಿಗೆ ಬಂಪರ್.. ಯಾರೆಲ್ಲಾ ಯಾವ ತಂಡಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ