ಹೋಬರ್ಟ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ ಸೂಪರ್ 12 ಹಂತದ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವಿನ ಪಂದ್ಯವನ್ನು ವರುಣದೇವ ಆಪೋಷನ ಪಡೆದಿದ್ದಾನೆ. ಭಾರಿ ಮಳೆಯಿಂದಾಗಿ ಪಂದ್ಯವನ್ನು ಫಲಿತಾಂಶವಿಲ್ಲದೇ ರದ್ದುಪಡಿಸಲಾಗಿದೆ. ಇತ್ತಂಡಗಳಿಗೂ ಒಂದೊಂದು ಅಂಕಗಳು ದೊರೆತಿವೆ.
ಪಂದ್ಯಾರಂಭಕ್ಕೂ ಮುನ್ನವೇ ಮಳೆ ಆರಂಭವಾದ ಕಾರಣ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. 2 ಗಂಟೆಗೂ ಅಧಿಕ ಕಾಲ ಮಳೆ ಸುರಿದು ಪಿಚ್ ಒದ್ದೆಯಾಗಿತ್ತು. ನಿಂತ ಬಳಿಕ ಪಿಚ್ ಒಣಗಿಸಿ ಆಟಕ್ಕೆ ಮೈದಾನವನ್ನು ಸಿದ್ಧಪಡಿಸಲಾಗಿತ್ತು. ಸಮಯದ ಆಭಾವದ ಕಾರಣ ಪಂದ್ಯವನ್ನು ತಲಾ 9 ಓವರ್ಗಳಿಗೆ ಕಡಿತಗೊಳಿಸಲಾಯಿತು.
-
Points shared with persistent rain in Hobart 🤝#SAvZIM | #T20WorldCup | 📝: https://t.co/D7bhRRb9Qa pic.twitter.com/Ktn0Sd7YRQ
— ICC (@ICC) October 24, 2022 " class="align-text-top noRightClick twitterSection" data="
">Points shared with persistent rain in Hobart 🤝#SAvZIM | #T20WorldCup | 📝: https://t.co/D7bhRRb9Qa pic.twitter.com/Ktn0Sd7YRQ
— ICC (@ICC) October 24, 2022Points shared with persistent rain in Hobart 🤝#SAvZIM | #T20WorldCup | 📝: https://t.co/D7bhRRb9Qa pic.twitter.com/Ktn0Sd7YRQ
— ICC (@ICC) October 24, 2022
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 9 ಓವರ್ಗಳಲ್ಲಿ 5 ವಿಕೆಟ್ಗೆ 79 ರನ್ ಗಳಿಸಿತು. ವೆಸ್ಲೇ ಮಧೆವೆರೆ ಬಿರುಸಿನ ಬ್ಯಾಟ್ ಮಾಡಿ 35 ರನ್ ಬಾರಿಸಿದರು. ಇದರಲ್ಲಿ 4 ಬೌಂಡರಿ 1 ಸಿಕ್ಸರ್ ಸೇರಿದ್ದವು. ಮಿಲ್ಟನ್ ಶುಂಬಾ 18 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರವಾಗಿ ಲುಂಗಿ ಎನ್‌ಗಿಡಿ 2 ಮತ್ತು ವೇಯ್ನ್ ಪಾರ್ನೆಲ್, ಆನ್ರಿಚ್ ನೋಕಿಯಾ ತಲಾ 1 ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ, ಕ್ವಿಂಟನ್ ಡಿ ಕಾಕ್ರ ಆರ್ಭಟದಿಂದ 3 ಓವರ್ಗಳಲ್ಲಿ 51 ರನ್ ಗಳಿಸಿ ಪಂದ್ಯ ಗೆಲ್ಲುವ ಸನಿಹದಲ್ಲಿತ್ತು. ಈ ವೇಳೆ ಮತ್ತೆ ಮಳೆ ಸುರಿದು ಆಟವನ್ನು ರದ್ದು ಮಾಡಲಾಯಿತು. ವರುಣನ ಆಗಮನಕ್ಕೂ ಮೊದಲು ಆರ್ಭಟಿಸಿದ ಡಿ ಕಾಕ್ 18 ಎಸೆತಗಳಲ್ಲಿ 47 ರನ್ ಚಚ್ಚಿದರು. ಇದರಲ್ಲಿ 8 ಬೌಂಡರಿ 1 ಸಿಕ್ಸರ್ ಇತ್ತು. ನಾಯಕ ತೆಂಬಾ ಬವುಮಾ 2 ರನ್ ಗಳಿಸಿದ್ದರು.
ಆಫ್ರಿಕನ್ನರಿಗೆ ಮಳೆ ಕಾಟ ಇದು ಮೊದಲಲ್ಲ: 1992 ಏಕದಿನ ವಿಶ್ವಕಪ್‌ನಲ್ಲೂ ಹೀಗೆಯೇ ಆಗಿತ್ತು. ಸಿಡ್ನಿಯಲ್ಲಿ ದಕ್ಷಿಣ ಆಫ್ರಿಕಾ ಹಾಗು ಇಂಗ್ಲೆಂಡ್ ಮಧ್ಯೆ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ದಕ್ಷಿಣ ಆಫ್ರಿಕಾ ತಂಡ ಪಂದ್ಯ ಗೆಲ್ಲುವ ಉತ್ಸಾಹದಲ್ಲಿತ್ತು. ಆದ್ರೆ ದಿಢೀರ್ ಮಳೆ ಸುರಿದು ಪಂದ್ಯವನ್ನು ಮಳೆರಾಯ ಆಪೋಷನ ಪಡೆದಿದ್ದ. ಇದರಿದಾಗಿ ಕೈಗೆ ಬಂದ ಪಂದ್ಯ ಬಾಯಿಗೆ ಸಿಗದಂತಾಗಿ ಹರಿಣರಿಗೆ ನಿರಾಶೆಯಾಗಿತ್ತು. ಇದೀಗ ಇದೇ ಇತಿಹಾಸ ಟಿ20 ವಿಶ್ವಕಪ್‌ನಲ್ಲಿ ಮರುಕಳಿಸಿತು.
ಇದನ್ನೂ ಓದಿ: ದ್ರಾವಿಡ್ ಹಿಂದಿಕ್ಕಿದ ಕೊಹ್ಲಿ: ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 6ನೇ ಆಟಗಾರ!