ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ಮಳೆ ಅಡ್ಡಿಯಾಗಿ ಮೊಟಕುಗೊಂಡರೆ, ಎರಡನೇ ಪಂದ್ಯದಲ್ಲಿ ಬ್ಯಾಟರ್ಗಳು ರನ್ ಮಳೆ ಸುರಿಸಿದ್ದಾರೆ. ಇಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್ ನಡೆದ ಪಂದ್ಯದಲ್ಲಿ ಹಲವು ಹೆಸರುಗಳು ದಾಖಲೆಯ ಪುಟ ಸೇರಿದವು. ಎರಡು ಇನ್ನಿಂಗ್ಸ್ನಿಂದ 517 ರನ್ ಹರಿದು ಬಂದಿದ್ದು ಇದು ಅಂತಾರಾಷ್ಟ್ರೀಯ ಟಿ20 ಮತ್ತು ಲೀಗ್ ಪಂದ್ಯದಲ್ಲೇ ಅತೀ ಹೆಚ್ಚಿನ ರನ್ ಗಳಿಕೆ!.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾದ ನಾಯಕ ಐಡೆನ್ ಮಾರ್ಕ್ರಾಮ್ ವೆಸ್ಟ್ ಇಂಡೀಸ್ಗೆ ಬ್ಯಾಟಿಂಗ್ಗೆ ಆಹ್ವಾನ ಕೊಟ್ಟರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 258 ರನ್ ದಾಖಲೆಯ ಗುರಿ ನೀಡಿತು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನ 5ನೇ ಅತೀ ಹೆಚ್ಚಿನ ಗುರಿಯೂ ಹೌದು. ಅಲ್ಲದೇ ವೆಸ್ಟ್ ಇಂಡೀಸ್ ಟಿ20ಯಲ್ಲಿ ದಾಖಲಿಸಿದ ಅತೀ ಹೆಚ್ಚಿನ ರನ್ ಕೂಡಾ ಇದೇ ಆಗಿದೆ. ದಕ್ಷಿಣ ಆಫ್ರಿಕಾ 259 ರನ್ ಸಾಧಿಸಿ ಅತಿ ಹೆಚ್ಚು ಗುರಿ ಬೆನ್ನತ್ತಿ ಗೆದ್ದ ತಂಡವೆಂಬ ದಾಖಲೆಯನ್ನೂ ಬರೆಯಿತು.
-
🚨 West Indies Record
— Windies Cricket (@windiescricket) March 26, 2023 " class="align-text-top noRightClick twitterSection" data="
Amazing innings by Johnson Charles. Fastest T20I hundred by a West Indian, breaking Chris Gayle’s @henrygayle record that was established in 2016🔥#MaroonMagic #Rainingsixes #CharlesPower #MenInMaroon #SAvWI pic.twitter.com/SxZewRI0eI
">🚨 West Indies Record
— Windies Cricket (@windiescricket) March 26, 2023
Amazing innings by Johnson Charles. Fastest T20I hundred by a West Indian, breaking Chris Gayle’s @henrygayle record that was established in 2016🔥#MaroonMagic #Rainingsixes #CharlesPower #MenInMaroon #SAvWI pic.twitter.com/SxZewRI0eI🚨 West Indies Record
— Windies Cricket (@windiescricket) March 26, 2023
Amazing innings by Johnson Charles. Fastest T20I hundred by a West Indian, breaking Chris Gayle’s @henrygayle record that was established in 2016🔥#MaroonMagic #Rainingsixes #CharlesPower #MenInMaroon #SAvWI pic.twitter.com/SxZewRI0eI
ಕ್ರಿಸ್ ಗೇಲ್ ದಾಖಲೆ ಮುರಿದ ಚಾರ್ಲ್ಸ್: ಈ ಇನ್ನಿಂಗ್ಸ್ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಜಾನ್ಸನ್ ಚಾರ್ಲ್ಸ್ ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿದರು. ಚಾರ್ಲ್ಸ್ ಶತಕದಾಟದಲ್ಲಿ 9 ಸಿಕ್ಸರ್ ಮತ್ತು 9 ಬೌಂಡರಿಗಳಿದ್ದವು. ಈ ಮೂಲಕ ಕ್ರಿಸ್ ಗೇಲ್ ದಾಖಲೆ ಮುರಿದರು. ಜಾನ್ಸನ್ ಚಾರ್ಲ್ಸ್ ಪಂದ್ಯದಲ್ಲಿ 46 ಬಾಲ್ ಎದುರಿಸಿ 10 ಫೋರ್ ಮತ್ತು 11 ಸಿಕ್ಸರ್ನಿಂದ 118 ರನ್ ಗಳಿಸಿ ಔಟಾದರು. ಈ ಹಿಂದೆ ಕ್ರಿಸ್ ಗೇಲ್ 2016ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 47 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಏಳು ವರ್ಷದ ನಂತರ ಈ ದಾಖಲೆಯನ್ನು ಮತ್ತೊಬ್ಬ ವೆಸ್ಟ್ ಇಂಡೀಸ್ ಆಟಗಾರನೇ ಮುರಿದಿದ್ದಾರೆ.
ವಿಂಡೀಸ್ ಪರ ಚಾರ್ಲ್ಸ್ ಅಲ್ಲದೇ ಕೈಲ್ ಮೇಯರ್ಸ್ (51), ರೋವ್‌ಮನ್ ಪೊವೆಲ್ (28) ಮತ್ತು ರೊಮಾರಿಯೋ ಶೆಫರ್ಡ್ (41) ಕೂಡಾ ಅಬ್ಬರಿಸಿದರು. ಇವರ ಆಟದ ರಭಸಕ್ಕೆ ಒಂದೇ ಇನ್ನಿಂಗ್ಸ್ನಲ್ಲಿ 22 ಸಿಕ್ಸ್ಗಳು ದಾಖಲಾದವು. 2019ರಲ್ಲಿ ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಪಂದ್ಯದಲ್ಲಿಯೂ 22 ಸಿಕ್ಸ್ಗಳು ಹರಿದು ಬಂದಿದ್ದವು. ಇವೆರಡು ಪ್ರಸ್ತುತ ಟಿ20 ಅತಿ ಹೆಚ್ಚು ಸಿಕ್ಸ್ ದಾಖಲೆಯ ಇನ್ನಿಂಗ್ಸ್ ಆಗಿದೆ.
-
🚨 RESULT | SOUTH AFRICA WIN BY 6 WICKETS
— Proteas Men (@ProteasMenCSA) March 26, 2023 " class="align-text-top noRightClick twitterSection" data="
Records were broken as Quinton de Kock's maiden T20I century set the #Proteas on their way to chasing down a mammoth 259-run target - with 7 balls remaining - to level the KFC T20I series#SAvWI #BePartOfIt pic.twitter.com/XMJnBL6p5r
">🚨 RESULT | SOUTH AFRICA WIN BY 6 WICKETS
— Proteas Men (@ProteasMenCSA) March 26, 2023
Records were broken as Quinton de Kock's maiden T20I century set the #Proteas on their way to chasing down a mammoth 259-run target - with 7 balls remaining - to level the KFC T20I series#SAvWI #BePartOfIt pic.twitter.com/XMJnBL6p5r🚨 RESULT | SOUTH AFRICA WIN BY 6 WICKETS
— Proteas Men (@ProteasMenCSA) March 26, 2023
Records were broken as Quinton de Kock's maiden T20I century set the #Proteas on their way to chasing down a mammoth 259-run target - with 7 balls remaining - to level the KFC T20I series#SAvWI #BePartOfIt pic.twitter.com/XMJnBL6p5r
ದಾಖಲೆಯ ರನ್ ಚೇಸ್: ವೆಸ್ಟ್ ಇಂಡೀಸ್ ಕೊಟ್ಟ ಬೃಹತ್ ಗುರಿಗೆ ಧೃತಿಗೆಡದ ಹರಿಣಗಳ ಪಡೆ ಈ ಗುರಿಯನ್ನು 7 ಎಸೆತ ಬಾಕಿ ಉಳಿಸಿಕೊಂಡು, 6 ವಿಕೆಟ್‌ಗಳೊಂದಿಗೆ ಜಯ ಸಾಧಿಸಿತು. ಇದರಿಂದ ಈ ಪಿಚ್ನಲ್ಲಿ ಎರಡು ಇನ್ನಿಂಗ್ಸ್ನಿಂದ 517 ಬರೋಬ್ಬರಿ ರನ್ ಹರಿದುಬಂತು. ದ.ಆಫ್ರಿಕಾ ಪರ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅಬ್ಬರದ ಮೊದಲ ಅಂತಾರಾಷ್ಟ್ರೀಯ ಟಿ20 ಶತಕ ದಾಖಲಿಸಿದರು. 43 ಎಸೆತ ಎದುರಿಸಿದ ಅವರ ಆಟದಲ್ಲಿ 9 ಬೌಂಡರಿ, 8 ಸಿಕ್ಸ್ ಸೇರಿತ್ತು.
ಅವರೊಂದಿಗೆ ರೀಜಾ ಹೆಂಡ್ರಿಕ್ಸ್ (68) ಅರ್ಧಶತಕ ದಾಖಲಿಸಿದರು. ಹೆಂಡ್ರಿಕ್ಸ್ ಮತ್ತು ಡಿ ಕಾಕ್ ಜೋಡಿ ಮೊದಲ ವಿಕೆಟ್ಗೆ 152 ರನ್ ಜೊತೆಯಾಟ ನೀಡಿದರು. ಕೊನೆಯಲ್ಲಿ ನಾಯಕ ಐಡೆನ್ ಮಾರ್ಕ್ರಾಮ್ (38) ಮತ್ತು ಹೆನ್ರಿಕ್ ಕ್ಲಾಸೆನ್ (16) ತಂಡವನ್ನು ಗೆಲುವಿನ ದಡ ಸೇರಿಸಿದರು.
-
South Africa created history in the second T20I against the West Indies at Centurion as they produced a record-breaking run chase 😲
— ICC (@ICC) March 27, 2023 " class="align-text-top noRightClick twitterSection" data="
Details 👇https://t.co/FJ05gPd2f9 pic.twitter.com/UcR9qR6hHX
">South Africa created history in the second T20I against the West Indies at Centurion as they produced a record-breaking run chase 😲
— ICC (@ICC) March 27, 2023
Details 👇https://t.co/FJ05gPd2f9 pic.twitter.com/UcR9qR6hHXSouth Africa created history in the second T20I against the West Indies at Centurion as they produced a record-breaking run chase 😲
— ICC (@ICC) March 27, 2023
Details 👇https://t.co/FJ05gPd2f9 pic.twitter.com/UcR9qR6hHX
ಪಿಎಸ್ಎಲ್ ದಾಖಲೆ ಬ್ರೇಕ್: ಇತ್ತೀಚೆಗೆ ಮುಕ್ತಾಯಗೊಂಡ ಪಾಕಿಸ್ತಾನ್ ಸೂಪರ್ ಲೀಗ್ನ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಮುಲ್ತಾನ್ ಸುಲ್ತಾನ್ ನಡುವಿನ ಪಂದ್ಯದ ಎರಡು ಇನ್ನಿಂಗ್ಸ್ನಿಂದ 515 ಹರಿದು ಬಂದು ದಾಖಲೆ ಬರೆದಿತ್ತು. 2016ರಲ್ಲಿ ಲಾಡರ್‌ಹಿಲ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುಣ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ನಿಂದ 489 ರನ್ ಬಂದಿತ್ತು.
ವೇಗದ ಟಿ20 ಅರ್ಧಶತಕ: ಕ್ವಿಂಟನ್ ಡಿ ಕಾಕ್ 15 ಎಸೆತದಲ್ಲಿ ಅರ್ಧಶತಕ ದಾಖಲಿಸಿದರು. ಇದು ಅವರ ನಾಲ್ಕನೇ ವೇಗದ ಅರ್ಧ ಶತಕವಾಗಿದೆ. 12 ಎಸೆತದಲ್ಲಿ ಯುವರಾಜ್ ಸಿಂಗ್ 2007ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಸಿಡಿಸಿದ್ದರು. 13 ಬಾಲ್ನಲ್ಲಿ ಮಿರ್ಜಾ ಅಹ್ಸನ್ ಆಸ್ಟ್ರಿಯಾ ವಿರುದ್ಧ 2019 ರಲ್ಲಿ, 14 ಬಾಲ್ನಲ್ಲಿ ಕಾಲಿನ್ ಮುನ್ರೊ ನ್ಯೂಜಿಲೆಂಡ್ ವಿರುದ್ಧ 2016 ರಲ್ಲಿ, 14 ಎಸೆತ ಎದುರಿಸಿ ರಮೇಶ್ ಸತೀಶನ್, ರೊಮೇನಿಯಾ ವಿರುದ್ಧ 2021 ರಲ್ಲಿ ದಾಖಲಿಸಿರುವುದು ಮೊದಲ ಮೂರು ಪಟ್ಟಿಯಾಗಿದೆ.
ಪವರ್ ಪ್ಲೇಯಲ್ಲಿ ಅತೀ ಹೆಚ್ಚು ರನ್: ಈ ಪಂದ್ಯದಲ್ಲಿ ಹೆಂಡ್ರಿಕ್ಸ್ ಮತ್ತು ಡಿ ಕಾಕ್ ಜೋಡಿ ಪವರ್‌ಪ್ಲೇಯಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ್ದರು. 6 ಓವರ್ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ ದಕ್ಷಿಣ ಆಫ್ರಿಕಾ 102 ರನ್ ಗಳಿಸಿತ್ತು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನ ದಾಖಲೆಯ ರನ್ ಗಳಿಕೆ ಆಗಿದೆ. ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ನಾಲ್ಕು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದ್ದು ದಾಖಲೆಯಾಗಿತ್ತು.
ಟಿ20ಯಲ್ಲಿ ವೇಗದ ಶತಕ: ಒಂದೇ ಪಂದ್ಯದಲ್ಲಿ ಎರಡು ವೇಗದ ಶತಕಗಳು ದಾಖಲಾದವು. ಮೊದಲ ಇನ್ನಿಂಗ್ಸ್ನಲ್ಲಿ ಜಾನ್ಸನ್ ಚಾರ್ಲ್ಸ್ 39 ಎಸೆತದಲ್ಲಿ ಶತಕ ಮಾಡಿ 3ನೇ ಸ್ಥಾನದಲ್ಲಿದ್ದಾರೆ. ಎರಡನೇ ಇನ್ನಿಂಗ್ಸ್ನಲ್ಲಿ ಕ್ವಿಂಟನ್ ಡಿ ಕಾಕ್ 43 ಬಾಲ್ನಲ್ಲಿ ಶತಕ ದಾಖಲಿಸಿ 6ನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ಡೇವಿಡ್ ಮಿಲ್ಲರ್ 35 ಬಾಲ್ನಲ್ಲಿ ಶತಕಗಳಿಸಿದ್ದು ಪ್ರಥಮ ದಾಖಲೆಯಾಗಿದೆ. 2017ರಲ್ಲಿ ಇಂದೋರ್ನಲ್ಲಿ ರೋಹಿತ್ ಶರ್ಮಾ ಕೂಡಾ 35 ಬಾಲ್ನಿಂದ ಶತಕ ಮಾಡಿದ್ದಾರೆ. ಮಿಲ್ಲರ್ ಮತ್ತು ಶರ್ಮಾ ಪ್ರಥಮ ಎರಡು ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: IPL 2023: ನೂತನ ಜೆರ್ಸಿಯಲ್ಲಿ ಮಿಂಚಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು