ಸೆಂಚುರಿಯನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕೇವಲ 66 ರನ್ಗಳಿಸಿದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ ದ್ರಾವಿಡ್ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದ್ದಾರೆ.
ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾದಲ್ಲಿ 11 ಪಂದ್ಯಗಳಲ್ಲಿ 22 ಇನ್ನಿಂಗ್ಸ್ಗಳಿಂದ 624 ರನ್ಗಳಿಸಿದ್ದಾರೆ. ಒಂದು ಶತಕ ಮತ್ತು 2 ಅರ್ಧಶತಕ ಬಾರಿಸಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಹೆಚ್ಚು ರನ್ಗಳಿಸಿದ 2ನೇ ಬ್ಯಾಟರ್ ಆಗಿದ್ದಾರೆ.
ಸಚಿನ್ ತೆಂಡೂಲ್ಕರ್ 28 ಇನ್ನಿಂಗ್ಸ್ಗಳಲ್ಲಿ 1161 ರನ್ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಅವರು 5 ಶತಕ ಮತ್ತು 3 ಅರ್ಧಶತಕ ದಾಖಲಿಸಿದ್ದಾರೆ. ಇಂಗ್ಲೆಂಡ್ ವಾಲ್ಟರ್ ಹಮ್ಮಂಡ್(1447) ಹೊರತುಪಡಿಸಿದರೆ ಸಚಿನ್ ಹರಿಣಗಳ ನಾಡಿನಲ್ಲಿ 1000ಕ್ಕೂ ಹೆಚ್ಚು ರನ್ಗಳಿಸಿದ ಏಕೈಕ ಪ್ರವಾಸಿ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ 5 ಟೆಸ್ಟ್ಪಂದ್ಯಗಳಿಂದ 2 ಶತಕ ಮತ್ತು 2 ಅರ್ಧಶತಕಗಳ ಸಹಿತ 55ರ ಸರಾಸರಿಯಲ್ಲಿ 558 ರನ್ಗಳಿಸಿದ್ದಾರೆ. ಈ ಸರಣಿಯಲ್ಲಿ ಅವರು ದ್ರಾವಿಡ್(624) ಮತ್ತು ಲಕ್ಷ್ಮಣ್(566) ದಾಖಲೆಯನ್ನು ಮುರಿಯಲಿದ್ದಾರೆ.
ಇದನ್ನೂ ಓದಿ:ಹರಿಣಗಳಿಗೆ ಆಘಾತ: ಭಾರತ ಟೆಸ್ಟ್ ಸರಣಿಯಿಂದ ಎನ್ರಿಚ್ ನಾರ್ಕಿಯಾ ಔಟ್