ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): ಶೂನ್ಯಕ್ಕೆ ಆರಂಭಿಕ ಆಟಗಾರರಿಬ್ಬರು ವಿಕೆಟ್ ಒಪ್ಪಿಸಿದ ನಂತರ ರಿಂಕು ಸಿಂಗ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಅಬ್ಬರ ಇನ್ನಿಂಗ್ಸ್ ಬಲದಿಂದ ಟೀಮ್ ಇಂಡಿಯಾ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ಮಳೆ ಆರಂಭಕ್ಕೂ ಮುನ್ನ 19.3 ಓವರ್ಗೆ 7 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿದೆ. ಟಾಸ್ಗೂ ಮುನ್ನ ಮಳೆಯ ಮುನ್ಸೂಚನೆ ಇತ್ತಾದರೂ ನಂತರ ವರುಣ ಆಟಕ್ಕೆ ಅವಕಾಶ ಮಾಡಿಕೊಟ್ಟದ್ದ. ಆದರೆ, 19.3ನೇ ಓವರ್ ವೇಳೆಗೆ ದಿಢೀರನೇ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಗಿದೆ.
-
UPDATE - Rain stops play in the 2nd T20I at St George's Park.#TeamIndia 180/7 after 19.3 overs.https://t.co/0sPVek9NdO #SAvIND pic.twitter.com/8KbhFaOOxA
— BCCI (@BCCI) December 12, 2023 " class="align-text-top noRightClick twitterSection" data="
">UPDATE - Rain stops play in the 2nd T20I at St George's Park.#TeamIndia 180/7 after 19.3 overs.https://t.co/0sPVek9NdO #SAvIND pic.twitter.com/8KbhFaOOxA
— BCCI (@BCCI) December 12, 2023UPDATE - Rain stops play in the 2nd T20I at St George's Park.#TeamIndia 180/7 after 19.3 overs.https://t.co/0sPVek9NdO #SAvIND pic.twitter.com/8KbhFaOOxA
— BCCI (@BCCI) December 12, 2023
2024ರ ಟಿ20 ವಿಶ್ವಕಪ್ಗೆ ತಯಾರಿ ಎಂಬುದು ಆಟಗಾರರ ಮನಸ್ಸಿನಲ್ಲಿ ಅಚ್ಛಾಗಿದೆ ಎಂದರೆ ತಪ್ಪಾಗದು. ಏಕೆಂದರೆ ಆಟಗಾರರಿಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕಿದೆ. ಹೀಗಿರುವಾಗ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಇರುವ ಸೀಮಿತ ಅವಕಾಶದಲ್ಲಿ ಬಳಸಿಕೊಳ್ಳಬೇಕಿದೆ.
ಮೊದಲ ಪಂದ್ಯ ಮಳೆಗೆ ಆಹುತಿ ಆದ ನಂತರ ಎರಡನೇ ಪಂದ್ಯವೂ ವರುಣನ ಪಾಲಾಗುತ್ತದೆ ಎಂಬಂತೆ ಪಂದ್ಯಾರಂಭಕ್ಕೆ 40 ನಿಮಿಷ ಮುಂಚೆ ಮಳೆ ಬಂದಿತ್ತು. ಆದರೆ, ಮಳೆ ಬಿಡುವು ಕೊಟ್ಟ ಕಾರಣ ಪಂದ್ಯ ಆರಂಭವಾಯಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
-
First of many more to come!
— BCCI (@BCCI) December 12, 2023 " class="align-text-top noRightClick twitterSection" data="
Maiden T20I half-century for Rinku Singh 👏👏
Live - https://t.co/4DtSrebAgI #SAvIND pic.twitter.com/R7nYPCgSY0
">First of many more to come!
— BCCI (@BCCI) December 12, 2023
Maiden T20I half-century for Rinku Singh 👏👏
Live - https://t.co/4DtSrebAgI #SAvIND pic.twitter.com/R7nYPCgSY0First of many more to come!
— BCCI (@BCCI) December 12, 2023
Maiden T20I half-century for Rinku Singh 👏👏
Live - https://t.co/4DtSrebAgI #SAvIND pic.twitter.com/R7nYPCgSY0
ಭಾರತದ ಆರಂಭಿಕ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಡಕ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಆದರೆ ಮೂರನೇ ವಿಕೆಟ್ಗೆ ಒಂದಾದ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಜೋಡಿ 49 ರನ್ಗಳ ಪಾಲುದಾರಿಕೆ ಮಾಡಿ ತಂಡಕ್ಕೆ ಆಸರೆ ಆದರು. ತಿಲಕ್ ವರ್ಮಾ ತಮ್ಮ ಟಿ-20ಯ ಅಬ್ಬರದ ಬ್ಯಾಟಿಂಗ್ ಶೈಲಿಯನ್ನು ದಕ್ಷಿಣ ಆಫ್ರಿಕಾದಲ್ಲೂ ಮುಂದುವರೆಸಿದ್ದಲ್ಲದೇ ನಾಯಕ ಸೂರ್ಯಗೆ ಸಾಥ್ ನೀಡಿದರು. 20 ಬಾಲ್ ಆಡಿದ ತಿಲಕ್ 4 ಬೌಂಡರಿ, 1 ಸಿಕ್ಸ್ನಿಂದ 29 ರನ್ ಸೇರಿಸಿ ಔಟ್ ಆದರು.
-
5⃣0⃣ up for @surya_14kumar! 👏 👏
— BCCI (@BCCI) December 12, 2023 " class="align-text-top noRightClick twitterSection" data="
Talk about leading from the front! 👍 👍#TeamIndia inching closer to 100.
Follow the Match 👉 https://t.co/4DtSrebAgI #SAvIND pic.twitter.com/qYfS0cWOu1
">5⃣0⃣ up for @surya_14kumar! 👏 👏
— BCCI (@BCCI) December 12, 2023
Talk about leading from the front! 👍 👍#TeamIndia inching closer to 100.
Follow the Match 👉 https://t.co/4DtSrebAgI #SAvIND pic.twitter.com/qYfS0cWOu15⃣0⃣ up for @surya_14kumar! 👏 👏
— BCCI (@BCCI) December 12, 2023
Talk about leading from the front! 👍 👍#TeamIndia inching closer to 100.
Follow the Match 👉 https://t.co/4DtSrebAgI #SAvIND pic.twitter.com/qYfS0cWOu1
ಅಬ್ಬರಿಸಿದ ರಿಂಕು - ಸೂರ್ಯ: ತಿಲಕ್ ನಂತರ ಸೂರ್ಯ ಒಡಗೂಡಿದ ರಿಂಕು ಸಿಂಗ್ ಆಸ್ಟ್ರೇಲಿಯಾ ಸರಣಿಯಲ್ಲಿನ ಫಾರ್ಮ್ನ್ನು ಮುಂದುವರೆಸಿದರು. ಸೂರ್ಯ ಮತ್ತು ರಿಂಕು ಜೋಡಿ 4ನೇ ವಿಕೆಟ್ಗೆ 70 ರನ್ಗಳ ಪಾಲುದಾರಿಕೆ ಹಂಚಿಕೊಂಡರು. ಇದರಿಂದ ತಂಡ ಇನ್ನಷ್ಟೂ ಬಲಿಷ್ಟವಾಗುತ್ತಾ ಸಾಗಿತು. 36 ಬಾಲ್ ಎದುರಿಸಿದ ಸ್ಕೈ 5 ಬೌಂಡರಿ, 3ಸಿಕ್ಸ್ನ ಸಹಾಯದಿಂದ 56ರನ್ ಗಳಿಸಿ ಟಿ20 ನಂ.1 ಬ್ಯಾಟರ್ ಸ್ಥಾನವನ್ನು ಸಮರ್ಥಿಸಿಕೊಂಡರು.
ರಿಂಕು ಅರ್ಧಶತಕ: ರಿಂಕು ಸಿಂಗ್ ಭಾರತ ತಂಡ ಫಿನಿಶರ್ ಆಗಿ ಬೆಳೆಯುತ್ತಿದ್ದಾರೆ. ಅಗತ್ಯ ಸಮಯದಲ್ಲಿ ಇನ್ನಿಂಗ್ಸ್ ಕಟ್ಟುವ ಅವರು ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. 39 ಬಾಲ್ ಎದುರಿಸಿರುವ ರಿಂಕು 9 ಬೌಂಡರಿ, 2 ಸಿಕ್ಸ್ನ ಸಹಾಯದಿಂದ 68 ರನ್ ಗಳಿಸಿ ಅಜೇಯವಾಗಿದ್ದಾರೆ.
ಪಂದ್ಯಕ್ಕೆ ಮಳೆ ಅಡ್ಡಿ: ಮೊದಲ ಇನ್ನಿಂಗ್ಸ್ನ ಕೊನೆಯ ಮೂರು ಬಾಲ್ ಬಾಕಿ ಇರುವಂತೆ ಮಳೆ ಆಟಕ್ಕೆ ಅಡ್ಡಿ ಪಡಿಸಿತು. 19.3 ಓವರ್ ವೇಳೆಗೆ ಭಾರತ 180 ರನ್ಗೆ 7 ವಿಕೆಟ್ಗಳನ್ನು ಕಳೆದುಕೊಂಡಿದೆ. ರಿಂಕು ಸಿಂಗ್ 68 ರನ್ಗಳಿಸಿ ಕ್ರೀಸ್ನಲ್ಲೇ ಇದ್ದರೆ, ಸಿರಾಜ್ ಇನ್ನೊಂದು ಸ್ಟ್ರೈಕ್ನಲ್ಲಿದ್ದಾರೆ.
ಇದನ್ನೂ ಓದಿ: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ: ಗಾಯಕ್ವಾಡ್ ಬದಲಿಗೆ ಗಿಲ್ ಕಣಕ್ಕೆ