ETV Bharat / sports

ಬಾಕ್ಸಿಂಗ್‌ ಡೇ ಟೆಸ್ಟ್​: ಎಲ್ಗರ್​ ಆಕರ್ಷಕ ಶತಕ, ಹರಿಣಗಳಿಗೆ 11 ರನ್‌ ಮುನ್ನಡೆ

author img

By ETV Bharat Karnataka Team

Published : Dec 27, 2023, 10:39 PM IST

Boxing Day Test: ಸೂಪರ್‌ಸ್ಪೋರ್ಟ್ ಪಾರ್ಕ್​ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದ ಎರಡನೇ ದಿನದ ಮುಕ್ತಾಯಕ್ಕೆ ದಕ್ಷಿಣ ಆಫ್ರಿಕಾ 256 ರನ್​ ಕಲೆಹಾಕಿದ್ದು, 11 ರನ್​ಗಳ ಮುನ್ನಡೆ ಸಾಧಿಸಿದೆ.

South Africa vs India 1st Test Score update

ಸೆಂಚುರಿಯನ್​(ದಕ್ಷಿಣ ಆಫ್ರಿಕಾ): ನಿವೃತ್ತಿಯ ಸರಣಿ ಆಡುತ್ತಿರುವ ಡೀನ್​ ಎಲ್ಗರ್​ ಸಿಡಿಸಿದ ಶತಕ ದಕ್ಷಿಣ ಆಫ್ರಿಕಾಕ್ಕೆ ಬಾಕ್ಸಿಂಗ್​​​ ಡೇ ಟೆಸ್ಟ್​ನಲ್ಲಿ 11 ರನ್​ಗಳ ಮುನ್ನಡೆ ತಂದುಕೊಟ್ಟಿತು. ಎರಡನೇ ದಿನದಾಟದ ಅಂತ್ಯಕ್ಕೆ ಹರಿಣ ಪಡೆ 256ಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಕ್ರೀಸ್​ನಲ್ಲಿ 140 ರನ್​ ಗಳಿಸಿದ ಡೀನ್​ ಎಲ್ಗರ್​ ಮತ್ತು ಮಾರ್ಕೋ ಜಾನ್ಸನ್​ ಇದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ ಕೆ.ಎಲ್​.ರಾಹುಲ್​ ಅವರ ಶತಕದಾಟದ ಬಲದಿಂದ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್​ ಗಳಿಸಿ ಆಲೌಟ್​ ಆಗಿತ್ತು. ಎರಡನೇ ದಿನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಹರಿಣಗಳ ಪಡೆಗೆ ಉತ್ತಮ ಆರಂಭ ದೊರೆಯಲಿಲ್ಲ. ಐಡೆನ್ ಮಾರ್ಕ್ರಾಮ್ ಸಿರಾಜ್​ ದಾಳಿಗೆ ಬಲಿಯಾದರು. ಆದರೆ ಎರಡನೇ ವಿಕೆಟ್​ಗೆ ಒಂದಾದ ಎಲ್ಗರ್ ಮತ್ತು ಟೋನಿ ಡಿ ಝೋರ್ಜಿ 93 ರನ್​ಗಳ ಜತೆಯಾಟ ಹಂಚಿಕೊಂಡಿತು. ಇನ್ನಿಂಗ್ಸ್​ನಲ್ಲಿ ಟೋನಿ 28 ರನ್ ಗಳಿಸಿ ಔಟ್​ ಆದರು. ಬುಮ್ರಾ ಕೀಗನ್ ಪೀಟರ್ಸನ್ (2) ಅವರನ್ನು ಬೇಗ ಪೆವಿಲಿಯನ್​ಗೆ ಕಳುಹಿಸಿದರು.

ಭಾರತವನ್ನು ಕಾಡಿದ ಎಲ್ಗರ್​, ಡೇವಿಡ್: ಬುಮ್ರಾ ಬೆನ್ನು ಬೆನ್ನಿಗೆ ಎರಡು ವಿಕೆಟ್​ ಕಬಳಿಸಿ ದಕ್ಷಿಣ ಆಫ್ರಿಕಾದ ಮೇಲೆ ಒತ್ತಡ ಹೇರಿದರು. ಆದರೆ ಅನುಭವಿ ಆಟಗಾರ ಎಲ್ಗರ್​ ಭಾರತದ ಬೌಲಿಂಗ್​ ದಾಳಿಯನ್ನು ತಾಳ್ಮೆಯಿಂದ ಎದುರಿಸಿ ಸಮಯೋಚಿತ ಶಾಟ್​ಗಳ ಮೂಲಕ ರನ್​ ಕದಿಯುತ್ತಾ ಬಂದರು. ಡೇವಿಡ್ ಬೆಡಿಂಗ್ಹ್ಯಾಮ್ ಮತ್ತು ಡೀನ್​ ಜೋಡಿ 4ನೇ ವಿಕೆಟ್​ಗೆ 131 ರನ್​ಗಳ ಪಾಲುದಾರಿಕೆ ಹಂಚಿಕೊಂಡಿತು.

ಇವರಿಬ್ಬರ ಜೊತೆಯಾಟದಿಂದ ದಕ್ಷಿಣ ಆಫ್ರಿಕಾ ತಂಡ ಇನ್ನಿಂಗ್ಸ್​ ಸಮಬಲ ಸಾಧಿಸಿತು. ಎಲ್ಗರ್​ ತಮ್ಮ ಕೊನೆಯ ಸರಣಿಯಲ್ಲಿ ಶತಕ ಗಳಿಸಿ ಬ್ಯಾಟಿಂಗ್​ ಮುಂದುವರೆಸಿದರೆ, 56 ರನ್​ ಕಲೆಹಾಕಿದ್ದ ಡೇವಿಡ್ ಸಿರಾಜ್​ ಬಾಲ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡದ ಟೆಸ್ಟ್​ ಕ್ಯಾಪ್​ ಪಡೆದ ಪ್ರಸಿದ್ಧ್​ ಕೃಷ್ಣ ಕೈಲ್ ವೆರ್ರೆನ್ನೆ (4) ವಿಕೆಟ್​ ಪಡೆದರು. ಇದು ಅವರ ಟೆಸ್ಟ್​ನ ಚೊಚ್ಚಲ ವಿಕೆಟ್​ ಆಗಿದೆ. ಎರಡನೇ ಅವಧಿಯ ವಿರಾಮದ ವೇಳೆ ಮೋಡ ಕವಿದ ವಾತಾವರಣದಿಂದಾಗಿ ಬೆಳಕಿನ ಕೊರತೆಯ ಕಾರಣಕ್ಕೆ ದಿನವನ್ನು ಕೊನೆಗೊಳಿಸಲಾಯಿತು. ಕ್ರೀಸ್​ನಲ್ಲಿ ಡೀನ್​ ಎಲ್ಗರ್​ 140* ಮತ್ತು ಮಾರ್ಕೊ ಜಾನ್ಸೆನ್ 3* ಇದ್ದಾರೆ.

ಭಾರತದ ಪರ ಮೊಹಮ್ಮದ್​ ಸಿರಾಜ್​ ಮತ್ತು ಜಸ್ಪ್ರೀತ್​ ಬುಮ್ರಾ ಎಲಾ ಎರಡು ವಿಕೆಟ್​ ಕಿತ್ತರೆ, ಪ್ರಸಿದ್ಧ ಕೃಷ್ಣ 1 ವಿಕೆಟ್​ ಪಡೆದುಕೊಂಡರು.

ಇದನ್ನೂ ಓದಿ: ಬಾಕ್ಸಿಂಗ್​ ಡೇ ಟೆಸ್ಟ್​​: ರಾಹುಲ್​ ಶತಕ ವೈಭವ, 245 ರನ್‌ಗಳಿಗೆ ಭಾರತ ಆಲೌಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.