ETV Bharat / sports

ಬಾಕಿಂಗ್ಸ್​ ಡೇ ಟೆಸ್ಟ್​: ರಬಾಡಗೆ 5 ವಿಕೆಟ್‌; ಭಾರತಕ್ಕೆ ಆಸರೆಯಾದ ಕೆ.ಎಲ್‌.ರಾಹುಲ್​ ಏಕಾಂಗಿ ಪ್ರದರ್ಶನ - ಬಾಕಿಂಗ್ಸ್​ ಡೇ ಟೆಸ್ಟ್​

IND vs RSA 1st Test: ಭಾರತ-ದಕ್ಷಿಣ ಆಫ್ರಿಕಾ ನಡುವಣ ಬಾಕ್ಸಿಂಗ್‌ ಡೇ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟ ಮುಗಿದಿದೆ.

South Africa vs India 1st Test
South Africa vs India 1st Test
author img

By ETV Bharat Karnataka Team

Published : Dec 26, 2023, 3:27 PM IST

Updated : Dec 26, 2023, 9:32 PM IST

ಸೆಂಚುರಿಯನ್(ದಕ್ಷಿಣ ಆಫ್ರಿಕಾ): ಕಗಿಸೊ ರಬಾಡ ಕರಾರುವಾಕ್ ಬೌಲಿಂಗ್​ ದಾಳಿಯೆದುರು ಭಾರತೀಯರ ಬ್ಯಾಟಿಂಗ್​ ಮಂಕಾಯಿತು. 59 ಓವರ್​​ಗಳ ಪಂದ್ಯ ನಡೆಯುತ್ತಿದ್ದಂತೆ ಮಳೆ ಸುರಿದು ದಿನದಾಟ ಕೊನೆಗೊಂಡಿತು. ಭಾರತ 8 ವಿಕೆಟ್​ ಕಳೆದುಕೊಂಡು 208 ರನ್​ ಗಳಿಸಿದೆ. ರಬಾಡ 5 ವಿಕೆಟ್​ ಉರುಳಿಸಿ ಪ್ರಭಾವಿ ಬೌಲರ್​ ಎನಿಸಿದರು. 70 ರನ್​ ಗಳಿಸಿದ ಕೆ.ಎಲ್.ರಾಹುಲ್​ ಮತ್ತು ಮೊಹಮ್ಮದ್​ ಸಿರಾ​ಜ್​ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಭಾರತ ಹರಿಣಗಳ ಬಿಗು ಬೌಲಿಂಗ್ ದಾಳಿಗೆ ತಕ್ಕ ಪ್ರತಿರೋಧ ತೋರುವಲ್ಲಿ ವಿಫಲವಾಯಿತು. ಆರಂಭದ ಮೂರು ವಿಕೆಟ್​ಗಳನ್ನು ತಂಡ ಕೇವಲ 24 ರನ್​ ಗಳಿಸುವಷ್ಟರಲ್ಲೇ ಕಳೆದುಕೊಂಡಿತು. ರೋಹಿತ್​ ಶರ್ಮಾ (​5 ರನ್), ಯಶಸ್ವಿ ಜೈಸ್ವಾಲ್​ (17) ಮತ್ತು ಶುಭಮನ್​ ಗಿಲ್​ (2) ದೊಡ್ಡ ಕೊಡುಗೆ ನೀಡುವಲ್ಲಿ ವಿಫಲರಾದರು.

ನಾಲ್ಕನೇ ವಿಕೆಟ್​ಗೆ ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್ 67 ರನ್​ಗಳ ಪಾಲುದಾರಿಕೆ ಹಂಚಿಕೊಂಡರು. ಭೋಜನ ವಿರಾಮ ಮುಗಿಸಿ ಕ್ರೀಸ್​ ಮರಳುತ್ತಿದ್ದಂತೆ ಅಯ್ಯರ್​ ವಿಕೆಟ್​ ಪತನವಾಯಿತು. ಅಯ್ಯರ್​ 50 ಎಸೆತಗಳಲ್ಲಿ 31 ರನ್​ ಗಳಿಸಿ ಔಟಾದರು. ಇವರ ಬೆನ್ನಲ್ಲೇ 38 ರನ್​ ಗಳಿಸಿ ವಿರಾಟ್​ ಕೊಹ್ಲಿ ಕೂಡಾ ಪೆವಿಲಿಯನ್​ಗೆ ಮರಳಿದರು.

ರಾಹುಲ್​ ಏಕಾಂಗಿ ಹೋರಾಟ: ತಂಡ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕೆ.ಎಲ್.ರಾಹುಲ್ ಏಕಾಂಗಿಯಾಗಿ ಇನ್ನಿಂಗ್ಸ್​ ಕಟ್ಟಿದರು. 2021ರ ಪ್ರವಾಸದಲ್ಲಿ ಶತಕ ಗಳಿಸಿದ್ದ ರಾಹುಲ್​ ಅದೇ ಅನುಭವವನ್ನು ಮೈದಾನದಲ್ಲಿ ಪ್ರದರ್ಶಿಸಿದರು. ಆದರೆ ಅವರಿಗೆ ಕೆಳ ಕ್ರಮಾಂಕದಲ್ಲಿ ಯಾರೂ ಜೊತೆಯಾಟ ನೀಡಲಿಲ್ಲ. ರವಿಚಂದ್ರನ್​ ಅಶ್ವಿನ್​ 8, ಶಾರ್ದೂಲ್​ ಠಾಕೂರ್ 24 ಮತ್ತು ಉಪನಾಯಕ ಜಸ್ಪ್ರೀತ್​ ಬುಮ್ರಾ 1 ರನ್​ಗೆ ವಿಕೆಟ್​ ಒಪ್ಪಿಸಿದರು.

ಹರಿಣಗಳ ಬೌಲಿಂಗ್​ ವಿರುದ್ಧ ಚಾಣಾಕ್ಷತನದ ಇನ್ನಿಂಗ್ಸ್​ ಕಟ್ಟಿದ ರಾಹುಲ್​ ತಮ್ಮ 14ನೇ ಟೆಸ್ಟ್​ ಅರ್ಧಶತಕವನ್ನು ಪೂರೈಸಿದರು. ಇನ್ನಿಂಗ್ಸ್​​ನಲ್ಲಿ 105 ಬಾಲ್​ ಎದುರಿಸಿರುವ ಅವರು 10 ಬೌಂಡರಿ ಮತ್ತು 2 ಸಿಕ್ಸ್​ ಸಹಾಯದಿಂದ 70 ರನ್​ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದ್ದಾರೆ.

ಮಳೆ ಸಾಧ್ಯತೆ: ಮೈದಾನ ತೇವಾಂಶದಿಂದ ಕೂಡಿದೆ ಎಂಬ ಕಾರಣಕ್ಕೆ ಅರ್ಧ ಗಂಟೆ ತಡವಾಗಿ ಆರಂಭವಾಗಿತ್ತು. ನಾಳೆಯೂ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕವಿದೆ.

ಇದನ್ನೂ ಓದಿ: ದ.ಆಫ್ರಿಕಾ ಪರಿಸ್ಥಿತಿಯಲ್ಲಿ ಸರಣಿ ಗೆಲ್ಲಲು ಸ್ವಲ್ಪ ಅದೃಷ್ಟ ಬಲ ಬೇಕು: ದ್ರಾವಿಡ್

Last Updated : Dec 26, 2023, 9:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.