ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಸರಣಿಯಲ್ಲಿ 2-0 ಹಿನ್ನಡೆಯಲ್ಲಿದ್ದ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಏಕದಿನ ಅಂತರರಾಷ್ಟ್ರೀಯ ಏಕದಿನ ಸರಣಿ ಸಮಬಲಗೊಳಿಸಲು ಅದ್ಭುತ ಪ್ರದರ್ಶನ ನೀಡಿದೆ. ಇದೀಗ ಸರಣಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ದಕ್ಷಿಣ ಆಫ್ರಿಕಾ ಸಜ್ಜಾಗಿದೆ. ದಕ್ಷಿಣಾ ಆಫ್ರಿಕಾದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ ಸರಣಿ ಗೆಲ್ಲುವ ತವಕದಲ್ಲಿದೆ ಆಸ್ಟ್ರೇಲಿಯಾ.
ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರುವ ದ.ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ಅದ್ಭುತ ಫಾರ್ಮ್ನಲ್ಲಿರುವ ತಂಡದ ನಾಯಕ ತೆಂಬ ಬವುಮಾ ಅವರನ್ನು ಲ್ಯಾಬುಸ್ಚಾಗ್ನೆ ರನೌಟ್ ಮಾಡಿದ್ದಾರೆ. ಬವುಮಾ ಖಾತೆ ತೆಗೆಯದೇ ಪೆವಿಲಿಯನ್ ಹಾದಿಹಿಡಿದರು. ದ.ಆಫ್ರಿಕಾ ತಂಡ ಆರು ಓವರ್ಗಳಿಗೆ 1 ವಿಕೆಟ್ ಕಳೆದುಕೊಂಡು 22 ರನ್ಗಳನ್ನು ಕಲೆ ಹಾಕಿ ಆಟ ಮುಂದುವರಿಸಿದೆ.
-
🎟 SOLD OUT 🎟 @WanderersZA has confirmed that tomorrow's series decider between the Proteas & Australia is SOLD OUT 🇿🇦🇳🇿
— Proteas Men (@ProteasMenCSA) September 16, 2023 " class="align-text-top noRightClick twitterSection" data="
The BULLRING will be BUZZING 🏟 🐂#BePartOfIt #SAvAUS pic.twitter.com/IKmagzj1Hq
">🎟 SOLD OUT 🎟 @WanderersZA has confirmed that tomorrow's series decider between the Proteas & Australia is SOLD OUT 🇿🇦🇳🇿
— Proteas Men (@ProteasMenCSA) September 16, 2023
The BULLRING will be BUZZING 🏟 🐂#BePartOfIt #SAvAUS pic.twitter.com/IKmagzj1Hq🎟 SOLD OUT 🎟 @WanderersZA has confirmed that tomorrow's series decider between the Proteas & Australia is SOLD OUT 🇿🇦🇳🇿
— Proteas Men (@ProteasMenCSA) September 16, 2023
The BULLRING will be BUZZING 🏟 🐂#BePartOfIt #SAvAUS pic.twitter.com/IKmagzj1Hq
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಎರಡು ಸತತ ಗೆಲುವು ದಾಖಲಿಸಿದೆ. ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿ ಮಾರ್ಪಟ್ಟಿದೆ. ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ, ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿದ್ದು, ಎರಡೂ ಸಂದರ್ಭಗಳಲ್ಲಿ ಬೃಹತ್ ಸ್ಕೋರ್ ಗಳಿಸಿತು. ಸರಣಿಯ ನಾಲ್ಕನೇ ಪಂದ್ಯದಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅದ್ಭುತ ಜೊತೆಯಾಟದಿಂದಾಗಿ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ 416 ರನ್ಗಳನ್ನು ಕಲೆ ಹಾಕಿತ್ತು.
ಕ್ಲಾಸೆನ್ ಕೇವಲ 83 ಎಸೆತಗಳಲ್ಲಿ 174 ರನ್ ಗಳಿಸಿದರೆ, ಮಿಲ್ಲರ್ 45 ಎಸೆತಗಳಲ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದ್ದರು. ಆದ್ರೆ ಇದನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾ ಕೇವಲ 252 ರನ್‌ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಲುಂಗಿ ಎನ್‌ಗಿಡಿ ಮತ್ತು ಕಗಿಸೊ ರಬಾಡ ಏಳು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.
ದಕ್ಷಿಣ ಆಫ್ರಿಕಾ 11ರ ಬಳಗ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ..
ಆಸ್ಟ್ರೇಲಿಯಾ 11ರ ಬಳಗ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಟಿಮ್ ಡೇವಿಡ್, ಮೈಕೆಲ್ ನೆಸರ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಆಡಮ್ ಝಂಪಾ.
ಇದನ್ನೂ ಓದಿ: ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸುವವರೆಗೆ ನಾವು ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಆಡುವುದಿಲ್ಲ: ಸಚಿವ ಠಾಕೂರ್