ತರೌಬಾ(ಟ್ರಿನಿಡಾಡ್): ಐಸಿಸಿ ಅಂಡರ್ 19 ವಿಶ್ವಕಪ್ ರೋಚಕ ಹಂತಕ್ಕೆ ತಲುಪುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೌತ್ ಆಫ್ರಿಕಾ ತಂಡಕ್ಕೆ ಬೃಹತ್ ಮೊತ್ತದ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರಿಣಗಳ ಪಡೆ ಆರಂಭಿಕ ಆಘಾತ ಎದುರಿಸಿತ್ತು. ಕೇವಲ 63 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಡೆವಾಲ್ಡ್ ಬ್ರೆವಿಸ್ ಜೊತೆ ನಾಯಕ ಜಿವಿ ಹೀರ್ಡನ್ ಜವಾಬ್ದಾರಿಯುತ ಆಟವಾಡಿದರು. ಇಬ್ಬರು ಸೇರಿ 122 ರನ್ಗಳ ಜೊತೆಯಾಟವಾಡಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಸಫಲರಾದರು.
ಸೌತ್ ಆಫ್ರಿಕಾ ಪರ ವ್ಯಾಲಿಂಟೈನ್ ಕಿಟೈಮ್ 0, ಎಥಾನ್ ಜಾನ್ ಕನ್ನಿಂಗ್ಹ್ಯಾಮ್ 11 ರನ್, ಡೆವಾಲ್ಡ್ ಬ್ರೆವಿಸ್ 96 ರನ್, ಜಿಜೆ ಮೇರಿ (ವಿ.ಕೀ) 14 ರನ್, ನಾಯಕ ಜಾರ್ಜ್ ವ್ಯಾನ್ ಹೀರ್ಡೆನ್ 111 ರನ್, ಆಂಡಿಲ್ ಸಿಮೆಲೇನ್ 25 ರನ್, ಮಿಕ್ಕಿ ಕೋಪ್ಲ್ಯಾಂಡ್ 43 ರನ್, ಮ್ಯಾಥ್ಯೂ ಬೋಸ್ಟ್ ಅಜೇಯರಾಗಿ 2 ರನ್ಗಳನ್ನು ಗಳಿಸಿದ್ದಾರೆ.
ಒಟ್ಟಿನಲ್ಲಿ ದಕ್ಷಿಣ ಆಫ್ರಿಕ ತಂಡ 47 ಓವರ್ಗಳಿಗೆ 7 ವಿಕೆಟ್ಗಳನ್ನು ಕಳೆದುಕೊಂಡು 315 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಐರ್ಲೆಂಡ್ ಪರ ಲಿಯಾಮ್ ಡೊಹೆರ್ಟಿ ಮತ್ತು ರೂಬೆನ್ ವಿಲ್ಸನ್ ತಲಾ ಎರಡೆರಡು ವಿಕೆಟ್ಗಳನ್ನು ಪಡೆದರೆ, ಮ್ಯಾಥ್ಯೂ ಹಂಫ್ರೀಸ್, ಜೇಮೀ ಫೋರ್ಬ್ಸ್ ಮತ್ತು ಸ್ಕಾಟ್ ಮ್ಯಾಕ್‌ಬೆತ್ ತಲಾ ಒಂದೊಂದು ವಿಕೆಟ್ ಪಡೆದರು.
ಓದಿ: ತಗ್ಗಿದ ಕೊರೊನಾ ಏರಿಕೆ ಪ್ರಮಾಣ: ಕೋವಿಡ್ ಸಾವಿನ ಪ್ರಮಾಣದಲ್ಲೂ ಭಾರಿ ಇಳಿಕೆ
ಪಂದ್ಯದ ನಡುವೆ ಮಳೆ ಆರಂಭವಾಗಿ ಪಂದ್ಯ ತಡವಾಗಿ ಶುರುವಾದ ಕಾರಣ ಡಿಎಲ್ಎಸ್ ಜಾರಿಯಾಯಿತು. ಡಿಎಲ್ಎಸ್ ಪ್ರಕಾರ ಐರ್ಲೆಂಡ್ ತಂಡ 47 ಓವರ್ಗಳಿಗೆ 312 ರನ್ಗಳ ಗುರಿ ಪಡೆಯಿತು.
ಸೌತ್ ಆಫ್ರಿಕಾ ನೀಡಿದ ಬೃಹತ್ ಮೊತ್ತವನ್ನ ಬೆನ್ನಟ್ಟಿದ ಐರ್ಲೆಂಡ್ ತಂಡಕ್ಕೆ ಆರಂಭದಿಂದಲೇ ಆಘಾತ ಎದುರಿಸುತ್ತ ಪಂದ್ಯ ಮುನ್ನಡೆಯಿತು. ಐರ್ಲೆಂಡ್ ಪರ ಲಿಯಾಮ್ ಡೊಹೆರ್ಟಿ 0, ನಾಥನ್ ಮ್ಯಾಕ್‌ಗುಯಿರ್ 42 ರನ್, ಡೇವಿಡ್ ವಿನ್ಸೆಂಟ್ 9 ರನ್, ಜೋಶುವಾ ಕಾಕ್ಸ್ 0, ನಾಯಕ ಟಿಮ್ ಟೆಕ್ಟರ್ 1 ರನ್, ಫಿಲಿಪ್ಪಸ್ ಲೆ ರೂಕ್ಸ್ 33 ರನ್, ಸ್ಕಾಟ್ ಮ್ಯಾಕ್‌ಬೆತ್ 6 ರನ್, ಲ್ಯೂಕ್ ವ್ಹೇಲನ್ (ವಿ.ಕೀ) 14 ರನ್, ಮ್ಯಾಥ್ಯೂ ಹಂಫ್ರೀಸ್ 38 ರನ್, ಜೇಮೀ ಫೋರ್ಬ್ಸ್ 2 ರನ್, ರೂಬೆನ್ ವಿಲ್ಸನ್ ರನ್ ಗಳಿಸದೇ ಅಜೇಯರಾಗಿ ಉಳಿದರು.
ಸೌತ್ ಆಫ್ರಿಕಾ ಪರ ಮ್ಯಾಥ್ಯೂ ಬೋಸ್ಟ್ ಮತ್ತು ಲಿಯಾಮ್ ಆಲ್ಡರ್ ತಲಾ 3 ವಿಕೆಟ್ಗಳನ್ನು ಪಡೆದು ಮಿಂಚಿದ್ರೆ, ಅಸಾಖೆ ತ್ಶಾಕಾ ಹಾಗೂ ಆಂಡಿಲ್ ಸಿಮೆಲೇನ್ ತಲಾ 2 ವಿಕೆಟ್ಗಳನ್ನು ಪಡೆದು ತಂಡದ ಗೆಲುವಿಗೆ ಆಸರೆಯಾದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ