ಸೇಂಟ್ ಜಾರ್ಜ್ (ಗ್ರೆನೆಡಾ): ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟಿ-20 ಸರಣಿಯ 3ನೇ ಪಂದ್ಯದಲ್ಲಿ ದ.ಆಫ್ರಿಕಾಗೆ ರೋಚಕ ಗೆಲುವು ದಾಖಲಿಸಿದೆ. ಈ ಗೆಲುವಿನ ಮೂಲಕ ಸರಣಿಯಲ್ಲಿ ಸೌತ್ ಆಫ್ರಿಕಾ 2-1 ಪಾಯಿಂಟುಗಳ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ವಿಂಡೀಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬಳಿಕ ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ಮೊದಲ ವಿಕೆಟ್‌ಗೆ ರೀಜಾ ಹೆಂಡ್ರಿಕ್ಸ್ (17) ಮತ್ತು ಕ್ವಿಂಟನ್ ಡಿ ಕಾಕ್ (72) 42 ರನ್ ಗಳಿಸಿದರು. ಮಿಂಚಿನ ಆಟವಾಡಿದ ಡಿ ಕಾಕ್ ಅರ್ಧಶತಕ ಸಿಡಿಸಿದರು. 51 ಎಸೆತಗಳಲ್ಲಿ 5 ಬೌಂಡರಿ ಎರಡು ಭರ್ಜರಿ ಸಿಕ್ಸರ್ ನೆರವಿನಿಂದ 72 ರನ್ ಗಳಿಸಿದರು. ವ್ಯಾನ್ ಡೆರ್ ಡುಸೆನ್ 24 ಎಸೆತಗಳಲ್ಲಿ 36 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ನೆರವಾದರು. ಅಂತಿಮವಾಗಿ ಸೌತ್ ಆಫ್ರಿಕಾ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 167 ರನ್ಗಳಿಸಿತು.
-
.@OfficialCSA take a 2-1 series lead, winning the third T20I match vs West Indies by just one run.
— ICC (@ICC) June 29, 2021 " class="align-text-top noRightClick twitterSection" data="
World no.1 T20I bowler Tabraiz Shamsi was the pick of the bowlers with figures of 2/13.#WIvSA pic.twitter.com/cJhMqMwUkg
">.@OfficialCSA take a 2-1 series lead, winning the third T20I match vs West Indies by just one run.
— ICC (@ICC) June 29, 2021
World no.1 T20I bowler Tabraiz Shamsi was the pick of the bowlers with figures of 2/13.#WIvSA pic.twitter.com/cJhMqMwUkg.@OfficialCSA take a 2-1 series lead, winning the third T20I match vs West Indies by just one run.
— ICC (@ICC) June 29, 2021
World no.1 T20I bowler Tabraiz Shamsi was the pick of the bowlers with figures of 2/13.#WIvSA pic.twitter.com/cJhMqMwUkg
ಈ ಗುರಿ ಬೆನ್ನತ್ತಿದ ಆತಿಥೇಯ ತಂಡದ ಎವಿನ್ ಲೂಯಿಸ್ (27) ಮತ್ತು ಸಿಮೋನ್ಸ್ (22) ಮೊದಲ ವಿಕೆಟ್‌ಗೆ 55 ರನ್ಗಳ ಜೊತೆಯಾಟವಾಡಿದರು. ನಂತರ ಕ್ರೀಸಿಗೆ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು. ಕೊನೆಯಲ್ಲಿ ಆ್ಯಂಡ್ರೆ ರಸೆಲ್ (25) ನಿಕೋಲಸ್ ಪೂರನ್ (27) ರನ್ಗಳಿಸಿ ಕೊನೆಯಲ್ಲಿ ಹೋರಾಡಿದರೂ ತಂಡಕ್ಕೆ ಜಯ ತಂದುಕೊಡಲಾಗಲಿಲ್ಲ.
ಅಂತಿಮಘಟ್ಟದವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೇಯ ಓವರ್ನಲ್ಲಿ ವಿಂಡೀಸ್ ಗೆಲುವಿಗೆ 14 ರನ್ಗಳ ಅವಶ್ಯವಿತ್ತು. ಈ ವೇಳೆ ಕ್ರೀಸ್ನಲ್ಲಿದ್ದ ಬ್ರಾವೋ ಮತ್ತು ಫ್ಯಾಬಿಯನ್ ಅಲೆನ್ 13 ರನ್ಗಳಿಸಿದರು. ಅಂತಿಮವಾಗಿ ಸೌತ್ ಆಫ್ರಿಕಾ ತಂಡ 1 ರನ್ಗಳ ರೋಚಕ ಜಯ ಸಾಧಿಸಿತು. ರಬಾಡ ಅದ್ಭುತ ಬೌಲಿಂಗ್ಗೆ ವಿಂಡೀಸ್ ಸೋಲೊಪ್ಪಿಕೊಂಡಿತು.
-
🇿🇦 @OfficialCSA end their innings at 167/8.
— ICC (@ICC) June 29, 2021 " class="align-text-top noRightClick twitterSection" data="
Some good bowling at the end for @windiescricket produced five wickets in the final three overs, helping to limit the visitors' final total.#WIvSA | https://t.co/ySEekZSm8h pic.twitter.com/F4PPWk96IS
">🇿🇦 @OfficialCSA end their innings at 167/8.
— ICC (@ICC) June 29, 2021
Some good bowling at the end for @windiescricket produced five wickets in the final three overs, helping to limit the visitors' final total.#WIvSA | https://t.co/ySEekZSm8h pic.twitter.com/F4PPWk96IS🇿🇦 @OfficialCSA end their innings at 167/8.
— ICC (@ICC) June 29, 2021
Some good bowling at the end for @windiescricket produced five wickets in the final three overs, helping to limit the visitors' final total.#WIvSA | https://t.co/ySEekZSm8h pic.twitter.com/F4PPWk96IS
ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 166 ರನ್ಗಳಿಸಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ- 20 ಓವರ್ಗಳಲ್ಲಿ 167/8 ( ಡಿ ಕಾಕ್ 72, ವ್ಯಾನ್ ಡೆರ್ ಡುಸೆನ್ 36, ಬ್ರಾವೋ 25/3, ಒಬೆಡ್ ಮೆಕಾಯ್ 22/4) ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 166/7 (ಲೂಯಿಸ್ 27, ಆ್ಯಂಡ್ರೇ ರಸೆಲ್ 25, ನಿಕೋಲಸ್ ಪೂರನ್ 27, ಅನ್ರಿಕ್ ನಾರ್ಟ್ಜೆ 29/2, ತಬ್ರೈಜ್ ಶಮ್ಸಿ 13/2 )