ಸೇಂಟ್ ಲೂಸಿಯಾ: ಕೇಶವ್ ಮಹರಾಜ್ ಹ್ಯಾಟ್ರಿಕ್ ಹಾಗೂ ರಬಾಡ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 2-0ಯಲ್ಲಿ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ವಿದೇಶಿ ಟೆಸ್ಟ್ ಸರಣಿಯಾಗಿದೆ.
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ ಡಿಕಾಕ್ (96), ಎಲ್ಗರ್(77) ಅರ್ಧಶತಕದ ನೆರವಿನಿಂದ 298 ರನ್ಗಳಿಸಿತ್ತು. ಇದಕ್ಕುತ್ತರವಾಗಿ ವಿಂಡೀಸ್ ಹರಿಣಗಳ ದಾಳಿಗೆ ಸಿಲುಕಿ ಕೇವಲ 149 ರನ್ಗಳಿಗೆ ಸರ್ವ ಪತನಗೊಂಡಿತು. ಬ್ಲಾಕ್ವುಡ್ 49 ಮತ್ತು ಶಾಯ್ ಹೋಪ್ 43 ರನ್ಗಳಿಸಿದರು.
149 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದು 2ನೇ ಇನ್ನಿಂಗ್ಸ್ನಲ್ಲಿ 174ಕ್ಕೆ ದಕ್ಷಿಣ ಆಫ್ರಿಕ ಕುಸಿದರೂ ಅತಿಥೇಯ ತಂಡಕ್ಕೆ 324 ರನ್ಗಳ ಕಠಿಣ ಗುರಿ ನೀಡುವಲ್ಲಿ ಯಶಸ್ವಿಯಾಯಿತು. ಡಾಸೆನ್ ಅಜೇಯ 75 ರನ್ಗಳಿಸಿದರೆ, ರಬಾಡ 40 ರನ್ಗಳಿಸಿದ್ದರು. ವೆಸ್ಟ್ ಇಂಡೀಸ್ ಪರ ಕೆಮರ್ ರೋಚ್ 4, ಕೈಲ್ ಮೇಯರ್ಸ್ 3 ವಿಕೆಟ್ ಪಡೆದಿದ್ದರು.
ಇನ್ನು 324 ರನ್ಗಳ ಗುರಿ ಬೆನ್ನತ್ತಿದ ವಿಂಡೀಸ್ ಎರಡನೇ ಇನ್ನಿಂಗ್ಸ್ನಲ್ಲಿ 165 ರನ್ಗಳಿಗೆ ಆಲೌಟ್ ಆಗುವ ಮೂಲಕ 158 ರನ್ಗಳ ಜಯ ಸಾಧಿಸಿ 2-0ಯಲ್ಲಿ ಟೆಸ್ಟ್ ಸರಣಿ ವಶಪಡಿಸಿಕೊಂಡಿತು. ಆರಂಭಿಕ ಬ್ಯಾಟ್ಸ್ಮನ್ ಕೀರನ್ ಪೊವೆಲ್ 51 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಸ್ಪಿನ್ನರ್ ಕೇಶವ್ ಮಹಾರಾಜ್ ಹ್ಯಾಟ್ರಿಕ್ ಸೇರಿದಂತೆ 5 ವಿಕೆಟ್ ಪಡೆದರೆ, ರಬಾಡ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
4 ವರ್ಷಗಳ ನಂತರ ವಿದೇಶದಲ್ಲಿ ಸರಣಿ ಜಯ:
ದಕ್ಷಿಣ ಆಫ್ರಿಕಾ ತಂಡ ಈ ಸರಣಿ ಜಯದೊಂದಿಗೆ 4 ವರ್ಷಗಳ ಬಳಿಕ ವಿದೇಶದಲ್ಲಿ ಟೆಸ್ಟ್ ಗೆದ್ದ ಸಾಧನೆ ಮಾಡಿತು. 2017ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ ಬಾರಿ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು.
ಇದನ್ನು ಓದಿ:ಯಾವುದೇ ಪ್ರಮುಖ ಪಂದ್ಯಗಳು ಇಂಗ್ಲೆಂಡ್ನಲ್ಲಿ ನಡೆಯಬಾರದು: ಕೆವಿನ್ ಪೀಟರ್ಸನ್ ಆಕ್ರೋಶ