ETV Bharat / sports

Ind vs SA 1st ODI: ಮಧ್ಯಮ ಕ್ರಮಾಂಕ ವೈಫಲ್ಯ; ದ.ಆಫ್ರಿಕಾ ವಿರುದ್ಧ ಭಾರತಕ್ಕೆ 31 ರನ್​ಗಳ ಸೋಲು - ಶಿಖರ್ ಧವನ್​

ದಕ್ಷಿಣ ಆಫ್ರಿಕಾ ನೀಡಿದ್ದ 297 ರನ್​ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

South Africa vs India ODI
ದಕ್ಷಿಣ ಆಫ್ರಿಕಾ vs ಭಾರತ ಮೊದಲ ಏಕದಿನ ಪಂದ್ಯ
author img

By

Published : Jan 19, 2022, 10:33 PM IST

Updated : Jan 19, 2022, 10:52 PM IST

ಪಾರ್ಲ್​(ದಕ್ಷಿಣ ಆಫ್ರಿಕಾ): ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ ಮತ್ತು ಬೌಲರ್​ಗಳ ಮೊನಚಿಲ್ಲದ ದಾಳಿಯಿಂದ ಹಿನ್ನಡೆ ಅನುಭವಿಸಿದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ 31 ರನ್​ಗಳ ಸೋಲು ಕಂಡಿದೆ.

ದಕ್ಷಿಣ ಆಫ್ರಿಕಾ ನೀಡಿದ್ದ 297 ರನ್​ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

ಚೇಸ್​ ವೇಳೆ ನಾಯಕ ಕೆಎಲ್ ರಾಹುಲ್(12) ವಿಕೆಟ್ ಕಳೆದುಕೊಂಡರೂ ಶಿಖರ್​ ಧವನ್​(79) ಮತ್ತು ಕೊಹ್ಲಿ(51) 92 ರನ್​ಗಳ ಜೊತೆಯಾಟದಿಂದ ಚೇತರಿಕೆ ಕಂಡಿತ್ತಾದರೂ ಇಬ್ಬರು ಕೇವಲ 14 ರನ್​ಗಳ ಅಂತರದಲ್ಲಿ ವಿಕೆಟ್​ ಒಪ್ಪಿಸಿದ್ದರಿಂದ ಭಾರತಕ್ಕೆ ಮತ್ತೆ ಹಿನ್ನಡೆ ಉಂಟಾಯಿತು.

ನಂತರ ಬಂದ ರಿಷಭ್ ಪಂತ್(16) ಸ್ಟಂಪ್ ಆದರೆ, ಶ್ರೇಯಸ್(17) ಅಯ್ಯರ್​​ ಕೀಪರ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿಕೊಂಡರು. ಇಂದೇ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ವೆಂಕಟೇಶ್​ ಅಯ್ಯರ್​ ಕೇವಲ 2 ರನ್​ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಅವರ ಮೇಲಿಟ್ಟಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದರು.

ಕೊನೆಯಲ್ಲಿ ಶಾರ್ದೂಲ್​ ಠಾಕೂರ್​ 43 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 51 ರನ್​ಗಳಿಸದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಅಶ್ವಿನ್​ 7, ಭುವನೇಶ್ವರ್ ಕುಮಾರ್​ 4 ಬುಮ್ರಾ ಅಜೇಯ 14 ರನ್​ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಪೆಹ್ಲುಕ್ವಾಯೋ 26ಕ್ಕೆ2, ತಬ್ರೈಜ್ ಶಮ್ಸಿ 52ಕ್ಕೆ2, ಲುಂಗಿ ಎಂಗಿಡಿ 64ಕ್ಕೆ2, ಕೇಶವ್ ಮಹಾರಾಜ್​ 42ಕ್ಕೆ1, ಐಡೆನ್ ಮಾರ್ಕ್ರಮ್​ 30ಕ್ಕೆ1 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಗಿತ್ತು. 68 ರನ್​ ಗಳಿಸುವಷ್ಟರಲ್ಲಿ ಜನ್ನೆಮನ್ ಮಲನ್​(6), ಕ್ವಿಂಟನ್ ಡಿ ಕಾಕ್​(27) ಮತ್ತು ಐಡೆನ್ ಮ್ಯಾರ್ಕ್ರಮ್​(4) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು.

ಆದರೆ 4ನೇ ವಿಕೆಟ್​ಗೆ ಜೊತೆಯಾದ ನಾಯಕ ಬವೂಮ ಮತ್ತು ಡಸೆನ್​ 204ರನ್​ಗಳ ಬೃಹತ್​ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರುಮಾಡಿದ್ದಲ್ಲದೆ, 297 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು. ಡಸೆನ್​ 96 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್​ ಸಹಿತ ಅಜೇಯ 129 ರನ್​ಗಳಿಸಿದರೆ, ನಾಯಕ ಬವೂಮ 143 ಎಸೆತಗಳಲ್ಲಿ 8 ಬೌಂಡರಿ ಸಹಿತ 110 ರನ್​ಗಳಿಸಿ 49ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು.

ಭಾರತದ ಪರ ಬುಮ್ರಾ 48ಕ್ಕೆ 2 ವಿಕೆಟ್ ಪಡೆದು ಮಿಂಚಿದರು. ಅಶ್ವಿನ್​ 53ಕ್ಕೆ1 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್​ 72, ಭುವನೇಶ್ವರ್​ 64 ಮತ್ತು ಚಹಲ್​ 53 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು.

ಇದನ್ನೂ ಓದಿ:'ಐಸಿಸಿ ವರ್ಷದ ಟಿ20 ತಂಡ'ಕ್ಕೆ ಬಾಬರ್ ನಾಯಕ ; 11ರ ಬಳಗದಲ್ಲಿ ಭಾರತೀಯರಿಗಿಲ್ಲ ಅವಕಾಶ!

Last Updated : Jan 19, 2022, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.