ETV Bharat / sports

ಬಿಸಿಸಿಐ ಬಾಸ್​ ಸೌರವ್​ ಬರ್ತ್ ಡೇ​​ ಸೆಲೆಬ್ರೆಷನ್​ ವಿಡಿಯೋ ವೈರಲ್​ - ಸೌರವ್ ಗಂಗೂಲಿ ವಿಡಿಯೋ ವೈರಲ್​

ಲಂಡನ್​ನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಜನ್ಮ ದಿನ ಆಚರಿಸಿಕೊಂಡು ಪತ್ನಿ ಡೋನಾ, ಪುತ್ರಿ ಸನಾ ಹಾಗೂ ಫಾನ್ಸ್​ ಜೊತೆಗೆ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ.

Sourav Ganguly spends his 50th birthday at London
ಬಿಸಿಸಿಐ ಬಾಸ್​ ಸೌರವ್​ ಬರ್ತ್ ಡೇ​​ ಸೆಲೆಬ್ರೆಷನ್​ ವಿಡಿಯೋ ವೈರಲ್​
author img

By

Published : Jul 8, 2022, 5:32 PM IST

Updated : Jul 8, 2022, 5:40 PM IST

ಲಂಡನ್​: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು 50ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ತಮ್ಮ ಬದುಕಿನ ಅರ್ಧ ಶತಕ ಬಾರಿಸಿರುವ ದಾದಾ, ಕುಟುಂಬದೊಂದಿಗೆ ಲಂಡನ್​ನಲ್ಲಿ ಬರ್ತ್ ಡೇ​​ ಸೆಲೆಬ್ರೆಷನ್​ ಮಾಡಿದ್ದಾರೆ.

ಈ ಹಿಂದೆ ಟೀಂ ಇಂಡಿಯಾದ ನಾಯಕರೂ ಆಗಿದ್ದ ಗಂಗೂಲಿ ಪತ್ನಿ ಡೋನಾ ಮತ್ತು ಪುತ್ರಿ ಸನಾ ಅವರೊಂದಿಗೆ ಮಧ್ಯರಾತ್ರಿಯೇ ಕೇಕ್​ ಕತ್ತರಿಸುವ ಮೂಲಕ 50ನೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಇದೇ ವೇಳೆ, ಡೋನಾ, ಸನಾ ಹಾಗೂ ಫಾನ್ಸ್​ ಜೊತೆಗೆ 'ಲಂಡನ್ ತುಮಕ್ಡಾ' ಹಾಡಿಗೆ ಸ್ಟೆಪ್ಸ್​ ಹಾಕಿದ್ದಾರೆ. ಇದರ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಗುರುವಾರಷ್ಟೇ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ವಿಡಿಯೋವೊಂದು ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಬಾಸ್​ ಆಗಿ ಸೌರವ್​ ಬರ್ತ್ ಡೇ​​ ಸೆಲೆಬ್ರೆಷನ್​ ವಿಡಿಯೋ ಸದ್ದು ಮಾಡುತ್ತಿದೆ.

ಇದನ್ನೂ ಓದಿ: 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಗಂಗೂಲಿ.. ದಾದಾ ಜೊತೆಗಿನ ಬಾಂಧವ್ಯ ನೆನೆದ ಸಚಿನ್​!

Last Updated : Jul 8, 2022, 5:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.