ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನದಿಂದ ಹೊರಗುಳಿಯುತ್ತಿದ್ದು, ರೋಜರ್ ಬಿನ್ನಿ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಸೌರವ್ ಗಂಗೂಲಿ ಅವರು ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ತಮ್ಮ ಬಿಸಿಸಿಐ ಅಧಿಕಾರಾವಧಿಯ ಬಗ್ಗೆ ಮೌನ ಮುರಿದಿದ್ದಾರೆ.
ಯಾರೂ ಶಾಶ್ವತವಾಗಿ ಆಡಲು ಸಾಧ್ಯವಿಲ್ಲ. ಶಾಶ್ವತವಾಗಿ ಆಡಳಿತದಲ್ಲಿ ಉಳಿಯಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ತಮ್ಮ ನಿರ್ಗಮನವನ್ನು ನಿಗೂಢ ರೀತಿಯಲ್ಲಿ ಹೇಳಿದ್ದಾರೆ. ಅವರ ನಿರ್ಗಮನದ ಬಗ್ಗೆ ಅಧಿಕೃತ ಹೇಳಿಕೆ ಬರಬೇಕಿದೆ. ಆದರೆ, ಗಂಗೂಲಿ ಅವರು ಈ ಸ್ಥಾನಕ್ಕೆ ಬೇರೆ ಯಾವುದನ್ನಾದರೂ ಮುಂದುವರಿಸುತ್ತಾರೆ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ.
-
"One cannot stay in administration forever," says Sourav Ganguly on his future as BCCI president
— ANI Digital (@ani_digital) October 13, 2022 " class="align-text-top noRightClick twitterSection" data="
Read @ANI Story | https://t.co/VQnZ0r6kkq#SouravGanguly #BCCIPresident #BCCI pic.twitter.com/0VvLMRuht0
">"One cannot stay in administration forever," says Sourav Ganguly on his future as BCCI president
— ANI Digital (@ani_digital) October 13, 2022
Read @ANI Story | https://t.co/VQnZ0r6kkq#SouravGanguly #BCCIPresident #BCCI pic.twitter.com/0VvLMRuht0"One cannot stay in administration forever," says Sourav Ganguly on his future as BCCI president
— ANI Digital (@ani_digital) October 13, 2022
Read @ANI Story | https://t.co/VQnZ0r6kkq#SouravGanguly #BCCIPresident #BCCI pic.twitter.com/0VvLMRuht0
ನಾನು ಐದು ವರ್ಷಗಳ ಕಾಲ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷನಾಗಿದ್ದೆ. ಬಹು ದಿನಗಳ ಕಾಲ ಬಿಸಿಸಿಐ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡೆ. ಈಗ ಅನಿವಾರ್ಯ ಕಾರಣಗಳಿಂದ ಬೇರೆ ಪಯಣ ಮಾಡುವ ಸಮಯ ಬಂದಿದೆ ಎಂದು ತಮ್ಮ ಅಧಿಕಾರ ತ್ಯಾಗದ ಬಗ್ಗೆ ಸೂಕ್ಷ್ಮವಾಗಿ ಬಿಡಿಸಿ ಹೇಳಿದ್ದಾರೆ.
ಎಲ್ಲ ಷರತ್ತುಗಳ ನಂತರವೂ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷನಾಗಿ ಹಾಗೂ ಬಿಸಿಸಿಐ ಅಧ್ಯಕ್ಷನಾಗಿ ನನ್ನ ಅಧಿಕಾರವನ್ನು ನಾನು ಸಂಪೂರ್ಣವಾಗಿ ಆನಂದಿಸಿದ್ದೇನೆ. ನಿರ್ವಾಹಕರಾಗಿ ಜೊತೆಗೆ ಓರ್ವ ಅಧಿಕಾರಿಯಾಗಿ ನೀವು ಒಂದು ಸಂಸ್ಥೆಗಾಗಲಿ ಅಥವಾ ಒಂದು ತಂಡಕ್ಕಾಗಲಿ ಸಾಕಷ್ಟು ಕೊಡುಗೆ ನೀಡುವುದು ನಿಮ್ಮ ಕರ್ತವ್ಯವಾಗಿರುತ್ತದೆ. ಆದರೆ, ಯಾರೂ ಶಾಶ್ವತವಾಗಿ ಆಡಲು ಸಾಧ್ಯವಿಲ್ಲ. ಜೊತೆಗೆ ಶಾಶ್ವತವಾಗಿ ಆಡಳಿತದಲ್ಲಿ ಉಳಿಯಲು ಸಹ ಸಾಧ್ಯವಿಲ್ಲ ಎಂದು ಗಂಗೂಲಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಭಾರತದ ಮಾಜಿ ಕ್ರಿಕೆಟಿಗ ಮತ್ತು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಅವರು ಸೌರವ್ ಗಂಗೂಲಿ ಬದಲಿಗೆ ಬಿಸಿಸಿಐ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ ಮತ್ತು ಅರುಣ್ ಧುಮಾಲ್ ಬದಲಿಗೆ ಬಿಜೆಪಿ ಶಾಸಕ ಆಶಿಶ್ ಶೆಲಾರ್ ಖಜಾಂಚಿಯಾಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ. ಭಾರತ. ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. 50 ವರ್ಷದ ಗಂಗೂಲಿ 2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದು ಈ ವಾರದದಲ್ಲಿ ಈ ಸ್ಥಾನಕ್ಕೆ ತೆರೆ ಬೀಳಲಿದೆ.
ಸತತ ಎರಡನೇ ಅವಧಿಗೆ ಮುಂದುವರಿಯುವ ಹಾಗಿಲ್ಲ: ಜಸ್ಟಿಸ್ ಲೋಧಾ ಸಮಿತಿಯ ಶಿಫಾರಸಿನ ಅನುಗುಣವಾಗಿ ಅಧ್ಯಕ್ಷ ಸ್ಥಾನದಲ್ಲಿ ಸತತ ಎರಡನೇ ಅವಧಿಯಲ್ಲಿ ಮುಂದುವರಿಯುವ ಹಾಗಿಲ್ಲ. ಆದರೆ, ಈ ಬಗ್ಗೆ ಸುಪ್ರೀಂ ಮೊರೆ ಹೋಗಿದ್ದ ಬಿಸಿಸಿಐ ನಿಯಮಗಳಲ್ಲಿ ಕೊಂಚ ಬದಲಾವಣೆಗಳನ್ನು ತಂದು ಎರಡನೇ ಅವಧಿಗೆ ಆಯ್ಕೆ ಮಾಡಲು ಗ್ರೀನ್ ಸಿಗ್ನಲ್ ಪಡೆದಿತ್ತು.
ಇದರ ಪರಿಣಾಮ ಕಾರ್ಯದರ್ಶಿ ಸ್ಥಾನದಲ್ಲಿ ಜಯ ಶಾ ಮುಂದುವರಿಯಲಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಬೇಕಾದ ಬೆಂಬಲ ಸಿಗದ ಕಾರಣ ಸೌರವ್ ಕೆಳಗಿಳಿಯುವಂತಾಗಿದೆ. ಅ. 18ರಂದು ಸೌರವ್ ಗಂಗೂಲಿ ಅವರ ಅಧಿಕಾರ ಅವಧಿ ಅಂತ್ಯಗೊಳ್ಳಲಿದ್ದು, ಮಾಜಿ ಆಲ್‌ರೌಂಡರ್ ರೋಜರ್ ಬಿನ್ನಿ ಈ ಹುದ್ದೆ ಅಲಂಕರಿಸುವುದು ಬಹುತೇಕ ಖಾತ್ರಿಯಾಗಿದೆ.
ಮುಂಬೈನ ಟ್ರೈಡೆಂಟ್ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಬಿಸಿಸಿಐ ಸಭೆಯಲ್ಲಿ, ವಿವಿಧ ಮಂಡಳಿ ಹಾಗೂ ದೇಶದ ವಿವಿಧ ಭಾಗಗಳ ಎಲ್ಲಾ ಪದಾಧಿಕಾರಿಗಳು ಮಂಡಳಿಯ ವಿವಿಧ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು. ಅಕ್ಟೋಬರ್ 18 ರಂದು ನಡೆಯಲಿರುವ ಚುನಾವಣೆಯ ಪೂರ್ವಭಾವಿಯಾಗಿ ಬಿಸಿಸಿಐ ಆಂತರಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳನ್ನು ಸಹ ನಡೆಸಲಾಯಿತು.
ರಾಜೀವ ಶುಕ್ಲಾ ಉಪಾಧ್ಯಕ್ಷರಾಗಿ ಮುಂದುವರಿಕೆ: ಹಿರಿಯ ಬಿಸಿಸಿಐ ಆಡಳಿತಾಧಿಕಾರಿ ರಾಜೀವ್ ಶುಕ್ಲಾ ಮಂಡಳಿಯ ಉಪಾಧ್ಯಕ್ಷರಾಗಿ ಉಳಿಯಲಿದ್ದು, ಅರುಣ್ ಧುಮಾಲ್ ಬದಲಿಗೆ ಆಶಿಶ್ ಶೆಲಾರ್ ಹೊಸ ಖಜಾಂಚಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ BCCI ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಬಿನ್ನಿ 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಗಂಗೂಲಿ ಅವರ ಬದಲಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಮಾಜಿ ವೇಗಿ ರೋಜರ್ ಬಿನ್ನಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. 67 ವರ್ಷದ ಬಿನ್ನಿ ಪ್ರಸ್ತುತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.
ಅಕ್ಟೋಬರ್ 11 ಮತ್ತು 12 ರಂದು ನಾಮಪತ್ರಗಳನ್ನು ಸಲ್ಲಿಕೆ ಅವಕಾಶ ಮಾಡಿಕೊಡಲಾಗಿದೆ. ಅಕ್ಟೋಬರ್ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 14 ರೊಳಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆಯಬಹುದು. ಬಿಸಿಸಿಐನ ಪ್ರಸ್ತುತ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರು 16 ಸದಸ್ಯರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಭಾರತದ ಪ್ರತಿನಿಧಿಯಾಗಲಿದ್ದಾರೆ. ಈ ಚುನಾವಣೆಯು ಈ ನವೆಂಬರ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ: ನಾನು ಕಬಡ್ಡಿ ಆಡುತ್ತಿದ್ದ ಟೈಮಲ್ಲಿ ಕೈ ಕಾಲಿಗೆ ಗಾಯ ಮಾಡಿಕೊಂಡಿದ್ದೆ.. ಬಾಲ್ಯದ ಆಟ ನೆನೆದ ಸುದೀಪ್