ETV Bharat / sports

ಹಿರಿಯ ಸ್ಟಾರ್​ ಆಟಗಾರರು ಟಿ20ಯಿಂದ ನಿವೃತ್ತಿ ಸಾಧ್ಯತೆ... ಗವಾಸ್ಕರ್​ ಸ್ಫೋಟಕ ಹೇಳಿಕೆ - batting legend sunil gavaskar

ಟಿ20 ವಿಶ್ವಕಪ್​ನಲ್ಲಿ ಭಾರತ ಸೆಮಿಫೈನಲ್​ನಲ್ಲಿ ಹೀನಾಯ ಸೋಲನ್ನು ಅನುಭವಿಸಿದ, ಬೆನ್ನಲ್ಲೆ ತಂಡದ ಹಿರಿಯ ಆಟಗಾರರಿಂದ ನಿವೃತ್ತಿ ಘೋಷಣೆ ಸಾಧ್ಯ ಎಂದು ನಿರೀಕ್ಷಿಸಲಾಗಿದೆ.

ಹಿರಿಯ ಸ್ಟಾರ್​ ಆಟಗಾರರಿಂದ ನಿವೃತ್ತಿ ನಿರೀಕ್ಷೆ: ಗವಾಸ್ಕರ್​
ಸುನೀಲ್ ಗವಾಸ್ಕರ್
author img

By

Published : Nov 11, 2022, 3:51 PM IST

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಈ ಸೋಲು ಭಾರತ ತಂಡದಲ್ಲಿ ಪ್ರಮುಖ ಪರಿವರ್ತನೆಗೆ ಕಾರಣವಾಗಬಹುದೆಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಒಂದು ಮೂಲಗಳ ಪ್ರಕಾರ, ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಮತ್ತು ರವಿಚಂದ್ರನ್ ಅಶ್ವಿನ್ ಹೊಡಿ - ಬಡಿ ಪಂದ್ಯಗಳಿಂದ ವಿಮುಖರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಮುಂದಿನ ಟಿ20 ವಿಶ್ವಕಪ್‌ಗೆ ಇನ್ನೂ ಎರಡು ವರ್ಷ ಬಾಕಿ ಇದ್ದು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಹೊಸ ತಂಡವನ್ನು ಆಯ್ಕೆ ಮಾಡುವ ಲಕ್ಷಣಗಳು ಹೆಚ್ಚಾಗಿವೆ ಎಂಬ ಸುದ್ದಿ ಹೊರ ಬಿದ್ದಿದೆ. ತಂಡದ ಸೋಲಿನ ಬಳಿಕ ಮಾತನಾಡಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಸದ್ಯದಲ್ಲಿಯೇ ಪ್ರಸ್ತುತ ತಂಡದಿಂದ ಕೆಲವು ನಿವೃತ್ತಿಗಳು ಘೋಷಣೆ ಆಗಹುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ತಂಡದಲ್ಲಿ ಹಲವಾರು ಬದಲಾವಣೆಗಳನ್ನು ನಿರೀಕ್ಷಿಸುವುದಾಗಿ ಹೇಳಿರುವ ಭಾರತ ತಂಡದ ಮಾಜಿ ನಾಯಕ, ವಿಶ್ವಕಪ್ ಬಳಿಕ ಪಾಂಡ್ಯ ಭಾರತ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದ್ದಿದ್ದಾರೆ.

ಐಪಿಎಲ್​​ ನಾಯಕನಾಗಿ ತಮ್ಮ ಮೊದಲ ಪ್ರಯತ್ನದಲ್ಲೇ ಪಾಂಡ್ಯ ಗೆದ್ದಿದ್ದು ಅವರ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರು ಭವಿಷ್ಯದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಖಂಡಿತವಾಗಿಯೂ ಭವಿಷ್ಯದಲ್ಲಿ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ಸುನಿಲ್​ ಗವಾಸ್ಕರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇದು ರೋಹಿತ್​, ಕೊಹ್ಲಿ ನಿವೃತ್ತಿಯ ಬಗ್ಗೆ ಮಾತನಾಡುವ ಸಮಯವಲ್ಲ: ದ್ರಾವಿಡ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.