ETV Bharat / sports

SL vs WI 2nd Test: ಎರಡನೇ ಟೆಸ್ಟ್​​ ಗೆದ್ದು ಸರಣಿ ಕ್ಲೀನ್​ ಸ್ವೀಪ್ ಮಾಡಿದ ಶ್ರೀಲಂಕಾ - ವೆಸ್ಟ್​​ ಇಂಡೀಸ್​ ವಿರುದ್ಧ ಗೆದ್ದ ಶ್ರೀಲಂಕಾ

ವೆಸ್ಟ್​​​ ಇಂಡೀಸ್​​ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಆತಿಥೇಯ ಶ್ರೀಲಂಕಾ ತಂಡ ಎರಡು ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ ಕ್ಲೀನ್​​ ಸ್ವೀಪ್​ ಸಾಧನೆ ಮಾಡಿದೆ.

SL vs WI 2nd Test
SL vs WI 2nd Test
author img

By

Published : Dec 3, 2021, 7:33 PM IST

ಗಾಲೆ(ಶ್ರೀಲಂಕಾ): ಪ್ರವಾಸಿ ವೆಸ್ಟ್​​ ಇಂಡೀಸ್​ ವಿರುದ್ಧ ನಡೆದ ಎರಡನೇ ಟೆಸ್ಟ್​​​ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ 164ರನ್​​ಗಳ ಅಂತರದ ಗೆಲುವು ದಾಖಲು ಮಾಡಿದೆ. ಈ ಮೂಲಕ ಎರಡು ಟೆಸ್ಟ್​​​ ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಗೆಲುವು ದಾಖಲು ಮಾಡುವ ಮೂಲಕ ಕ್ಲೀನ್​​ ಸ್ವೀಪ್​​ ಸಾಧನೆ ಮಾಡಿದೆ.

ಮೊದಲ ಟೆಸ್ಟ್​​​ ಪಂದ್ಯದಲ್ಲಿ 187ರನ್​​ಗಳ ಅಂತರದ ಭರ್ಜರಿ ಜಯ ಸಾಧಿಸಿದ್ದ ಸಿಂಹಳೀಯರ ತಂಡ, ಎರಡನೇ ಪಂದ್ಯದಲ್ಲೂ ಕೆರಿಬಿಯನ್​ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿ, ಐಸಿಸಿ ಟೆಸ್ಟ್​​ ಚಾಂಪಿಯನ್​​ಶಿಪ್​ ಪಾಯಿಂಟ್​ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಎರಡನೇ ಟೆಸ್ಟ್​​​ ಪಂದ್ಯದಲ್ಲಿ ಗೆಲುವಿಗೆ 297ರನ್​​ಗಳ ಗುರಿ ಪಡೆದುಕೊಂಡಿದ್ದ ವೆಸ್ಟ್​ ಇಂಡೀಸ್​​​​ ಕೇವಲ 132ರನ್​​​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಸೋಲು ಒಪ್ಪಿಕೊಂಡಿದೆ. 65 ರನ್​​ಗಳಿಸುವಷ್ಟರಲ್ಲಿ ಎರಡು ವಿಕೆಟ್​ ಕಳೆದುಕೊಂಡಿದ್ದ ಕೆರಿಬಿಯನ್​ ಪಡೆ ಕೊನೆಯದಾಗಿ 40ರನ್​​ಗಳಿಕೆ ಮಾಡುವಷ್ಟರಲ್ಲಿ ಉಳಿದ ಎಂಟು ವಿಕೆಟ್​ ಕಳೆದುಕೊಂಡು ಸೋಲು ಒಪ್ಪಿಕೊಂಡಿತು. ಶ್ರೀಲಂಕಾ ಪರ ರಮೇಶ್​ ಮೆಂಡಿಸ್​​ ಹಾಗೂ ಲಸಿತ್​​​ ತಲಾ 5 ವಿಕೆಟ್​ ಪಡೆದುಕೊಂಡು ವೆಸ್ಟ್​ ಇಂಡೀಸ್ ತಂಡಕ್ಕೆ ಮಾರಕವಾದರು.

ಐದು ವಿಕೆಟ್​ ಪಡೆದು ಸಂಭ್ರಮಿಸಿದ ರಮೇಶ್ ಮೆಂಡೀಸ್​​​

ಇದನ್ನೂ ಓದಿರಿ: ಭಾರತ-ನ್ಯೂಜಿಲ್ಯಾಂಡ್​ 2ನೇ ಟೆಸ್ಟ್​​: ಮಯಾಂಕ್​ ಶತಕ, ಮೊದಲ ದಿನ 221ರನ್ ​​ಗಳಿಸಿದ ಭಾರತ

ಮೊದಲ ಇನ್ನಿಂಗ್ಸ್​​​​ನಲ್ಲಿ 204ರನ್​​ಗಳಿಗೆ ಆಲೌಟ್​​ ಆಗಿದ್ದ ಶ್ರೀಲಂಕಾಗೆ ಪ್ರತಿಯಾಗಿ ವೆಸ್ಟ್​ ಇಂಡೀಸ್​​​​ 253ರನ್ ​​ಗಳಿಕೆ ಮಾಡಿತ್ತು. 49 ರನ್​​​ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​​​ನಲ್ಲಿ ಬ್ಯಾಟಿಂಗ್​ ಆರಂಭಿಸಿದ್ದ ಶ್ರೀಲಂಕಾ ತಂಡ ಧನಂಜಯ ಸಿಲ್ವಾ ಅವರ 155 ರನ್​​ಗಳ ಸಹಾಯದಿಂದ 9 ವಿಕೆಟ್​​ನಷ್ಟಕ್ಕೆ 345ರನ್​ಗಳಿಕೆ ಮಾಡಿ ಎದುರಾಳಿ ತಂಡಕ್ಕೆ 297ರನ್​​ಗಳ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಎದುರಾಳಿ ವೆಸ್ಟ್​​ ಇಂಡೀಸ್​​ ಕೇವಲ 132ರನ್​​ಗಳಿಗೆ ಔಟಾಗುವ ಮೂಲಕ ಸೋಲಿನ ಮುಖಭಂಗಕ್ಕೊಳಗಾಗಿದೆ.

ಸಂಕ್ಷಿಪ್ತ ಸ್ಕೋರ್ ವಿವರ

ಶ್ರೀಲಂಕಾ ಇನ್ನಿಂಗ್ಸ್​​: 204 & 345/9 ಡಿಕ್ಲೇರ್​

ವೆಸ್ಟ್​​ ಇಂಡೀಸ್​​: 253 & 132

ಶ್ರೀಲಂಕಾ ತಂಡಕ್ಕೆ 164ರನ್​ಗಳ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.