ETV Bharat / sports

ಭಾರತ - ಲಂಕಾ ಪಂದ್ಯ: ಕ್ರಿಕೆಟಿಗ ಕುಸಲ್​ ಪೆರೆರಾ ಭಾಗಿಯಾಗುವುದು ಡೌಟ್​! - SCI

ಎಡಗೈ ಬ್ಯಾಟ್ಸ್​ಮ್ಯಾನ್​ ಕುಸಲ್​ ಪೆರೆರಾ ಮುಂಬರುವ ಭಾರತ ವಿರುದ್ಧದ ಪಂದ್ಯದಲ್ಲಿ ಭಾಗವಹಿಸುವುದು ಅನುಮಾನವಿದೆ. ಭುಜದ ಗಾಯದಿಂದ ಬಳಲುತ್ತಿರುವ ಅವರ ಚೇತರಿಕೆಗೆ 6 ರಿಂದ 8 ವಾರಗಳ ಅವಶ್ಯಕತೆಯಿದೆ ಎಂದು ತಂಡದ ವೈದ್ಯ ಮೂಲಗಳು ತಿಳಿಸಿದೆ.

Kusal Perera
ಕ್ರಿಕೆಟಿಗ ಕುಸಲ್​ ಪರೆರಾ
author img

By

Published : Jul 16, 2021, 12:07 PM IST

ಕೊಲೊಂಬೊ: ಶ್ರೀಲಂಕಾ ಕ್ರಿಕೆಟ್​ ಆಟಗಾರ ಕುಸಲ್​ ಪೆರೆರಾ ಮುಂಬರುವ ಭಾರತ ವಿರುದ್ಧದ ಪಂದ್ಯದಲ್ಲಿ ಭಾಗವಹಿಸುವುದು ಅನುಮಾನವಿದೆ. ಎಡಗೈ ಬ್ಯಾಟ್ಸ್​ಮನ್​ ಪೆರೆರಾ ಭುಜದ ಗಾಯದಿಂದ ಬಳಲುತ್ತಿದ್ದು, ಗುಣಮುಖರಾಗಲು 6 ರಿಂದ 8 ವಾರಗಳ ಅವಶ್ಯಕತೆಯಿದೆ ಎಂದು ತಂಡದ ವೈದ್ಯ ಮೂಲಗಳು ತಿಳಿಸಿದೆ.

ಇಂಗ್ಲೆಂಡ್​ನಲ್ಲಿ ಬಯೋ-ಬಬಲ್ ಅನ್ನು ಉಲ್ಲಂಘಿಸಿದಕ್ಕಾಗಿ ನಿರೋಷನ್ ಡಿಕ್ವೆಲ್ಲಾ ಅವರನ್ನು ಅಮಾನತುಗೊಳಿಸಲಾಗಿತ್ತು. ಅವರ ನಂತರ ವಿಕೆಟ್ ಕೀಪರ್ ಆಗಲು ಪೆರೆರಾ ಮುಖ್ಯ ಆಯ್ಕೆಯಾಗಿದ್ದರು. ಇದೀಗ ಅವರ ಉಪಸ್ಥಿತಿ ಬಹುತೇಕ ಅನುಮಾನವಾಗಿದೆ.

ಇತ್ತೀಚಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮುಂಬರುವ ಸೀಮಿತ ಓವರ್‌ಗಳ ಸರಣಿಯ ಪರಿಷ್ಕೃತ ವಿವರವನ್ನು ಪ್ರಕಟಿಸಿತ್ತು. 3 ಏಕದಿನ ಪಂದ್ಯಗಳು, ಟಿ 20ಗಳನ್ನು ಒಳಗೊಂಡಿರುವ ಪ್ರವಾಸವು ಜುಲೈ 18 ರಿಂದ ಪ್ರಾರಂಭವಾಗಲಿದೆ" ಎಂದು ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಮೂರು ಏಕದಿನ ಪಂದ್ಯಗಳು ಜುಲೈ 18, 20 ಮತ್ತು 23ರಂದು ನಡೆಯಲಿದ್ದು, ಮೂರು ಟಿ- 20 ಐಗಳು ಜುಲೈ 25, 27 ಮತ್ತು 29 ರಂದು ನಡೆಯಲಿವೆ.

ಮಂಗಳವಾರ ಆರಂಭವಾಗಲಿರುವ ಏಕದಿನ ಸರಣಿಗೆ ಶಿಖರ್ ಧವನ್ ನೇತೃತ್ವದ ಭಾರತದ ತಂಡವು ಭರ್ಜರಿ ತಯಾರಿ ನಡೆಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.