ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ಗಳಿಕೆ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಡೆಬ್ಯು ಮ್ಯಾನ್ ಋತುರಾಜ್ ಗಾಯ್ಕವಾಡ ತಂಡಕ್ಕೆ ಬದ್ರ ಬುನಾದಿ ಹಾಕಿದರು.
ಮೊದಲ ವಿಕೆಟ್ ನಷ್ಟಕ್ಕೆ ಈ ಜೋಡಿ 7 ಓವರ್ಗಳಲ್ಲಿ 49ರನ್ ಗಳಿಕೆ ಮಾಡಿತು. ಈ ವೇಳೆ 21ರನ್ಗಳಿಕೆ ಮಾಡಿದ್ದ ಋತುರಾಜ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಒಂದಾದ ಕನ್ನಡಿಗ ಪಡಿಕ್ಕಲ್ ಹಾಗೂ ಧವನ್ ತಂಡಕ್ಕೆ ಆಸರೆಯಾದರು. ಆದರೆ 40ರನ್ಗಳಿಕೆ ಮಾಡಿದ್ದ ಶಿಖರ್ ಧನಂಜಯ್ ಓವರ್ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಕೂಡ 7 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಪಡಿಕ್ಕಲ್ 29ರನ್ಗಳಿಸಿದಾಗ ಬೌಲ್ಡ್ ಆಗಿ ನಿರಾಸೆ ಅನುಭವಿಸಿದರು. ಕೊನೆಯದಾಗಿ ನಿತೀಶ್ ರಾಣಾ 9ರನ್ಗಳಿಸಿದರು. ಉಳಿದಂತೆ ಭುವನೇಶ್ವರ್ ಕುಮಾರ್ 13ರನ್ ಹಾಗೂ ಸೈನಿ ಅಜೇಯ 1ರನ್ಗಳಿಕೆ ಮಾಡಿದರು. ತಂಡ ನಿಗದಿತ 20 ಓವರ್ಗಳಲ್ಲಿ 5ವಿಕೆಟ್ ನಷ್ಟಕ್ಕೆ 132 ರನ್ಗಳಿಕೆ ಮಾಡಿತು.
ಲಂಕಾ ಪರ ಧನಂಜಯ 2 ವಿಕೆಟ್ ಪಡೆದುಕೊಂಡರೆ, ಚಮೀರಾ, ಹಸರಂಗ ಹಾಗೂ ಶನಕ ತಲಾ 1ವಿಕೆಟ್ ಪಡೆದುಕೊಂಡರು.