ETV Bharat / sports

ಯುವರಾಜ್​ ಸಿಂಗ್​ vs ಬ್ರಾಡ್​​ ಆಟ ನೆನಪಿದೆಯಾ?.. ಯುವಿ 6 ಬಾಲ್​ಗೆ 6 ಸಿಕ್ಸ್ ಗಳಿಸಿ ಇಂದಿಗೆ 16 ವರ್ಷ - ETV Bharath Kannada news

On This Day 16 Years Ago: 2007ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಯುವರಾಜ್​ ಸಿಂಗ್ ಅಬ್ಬರದ 6 ಸಿಕ್ಸ್​ಗಳನ್ನು ಗಳಿಸಿ ಇಂದಿಗೆ 16 ವರ್ಷ ಸಂದಿದೆ. ​

yuvraj singh
yuvraj singh
author img

By ETV Bharat Karnataka Team

Published : Sep 19, 2023, 5:16 PM IST

16 ವರ್ಷಗಳ ಹಿಂದೆ ಇದೇ ದಿನ ಭಾರತದ ಕ್ರಿಕೆಟ್​ ಮೈದಾನದಲ್ಲಿ ಒಂದು ಚಮತ್ಕಾರವೇ ನಡೆದಿತ್ತು. ಚೊಚ್ಚಲ ಟಿ20 ವಿಶ್ವಕಪ್ ಇಂಗ್ಲೆಂಡ್​ನಲ್ಲಿ ನಡೆಯುತ್ತಿತ್ತು. ಇಂಗ್ಲೆಂಡ್​ನ ಫ್ಲಿಂಟಾಫ್​ ಎಂಬ ಆಟಗಾರ ಭಾರತದ ಆಟಗಾರ ಒಬ್ಬನನ್ನು ಮೈದಾನದಲ್ಲಿ ಕೆಣಕ್ಕಿದ್ದರು. ಇದಕ್ಕೆ ಮೈದಾನದಲ್ಲಿ ಮಾತಿನ ಮೂಲಕ ಉತ್ತರ ಕೊಟ್ಟಿದ್ದಲ್ಲದೇ, ಬ್ಯಾಟ್​ನಿಂದಲೂ ಉತ್ತರಿಸಿದ್ದರು. ಆಂಡ್ರ್ಯೂ ಫ್ಲಿಂಟಾಫ್​​ ಮಾಡಿದ್ದ ತಪ್ಪಿಗೆ ಬೆಲೆ ತೆತ್ತಿದ್ದು ಮಾತ್ರ ಸ್ಟುವರ್ಟ್​ ಬ್ರಾಡ್​. ಕ್ರಿಕೆಟ್​ ಪ್ರಿಯರಿಗೆ ಈ ಘಟನೆ ನೆನಪಿಗೆ ಬಂದಿರಬಹುದು. ಅದೇ ಯುವರಾಜ್​ ಸಿಂಗ್​ ಬ್ರಾಡ್​ ಅವರ 6 ಬಾಲ್​ನ್ನು 6 ಸಿಕ್ಸ್​ ಆಗಿ ಪರಿವರ್ತಿಸಿದ ದಿನವದು.

ಯುವಿ ಅಂದು ಕೇವಲ 12 ಬಾಲ್​ನಲ್ಲಿ ದಾಖಲೆಯ ಅರ್ಧಶತಕ ಗಳಿಸಿದ್ದರು. ಅವರು ಅಂದಿನ ಪಂದ್ಯದಲ್ಲಿ 16 ಬಾಲ್​ ಆಡಿ 7 ಸಿಕ್ಸ್​, 3 ಬೌಂಡರಿಯ ಸಹಾಯದಿಂದ 58 ರನ್​ ಕಲೆ ಹಾಕಿದ್ದರು. ಯುವರಾಜ್​ ಸಿಂಗ್​ ಅವರ ಸ್ಟ್ರೈಕ್​ರೇಟ್​ 362.50 ಆಗಿತ್ತು. ಹತ್ತು ಬಾಲ್​ನಲ್ಲಿ ಬೌಂಡರಿ, ಸಿಕ್ಸ್​ ಬಾರಿಸಿದ್ದರೆ ನಾಲ್ಕು ಬಾಲ್​ನಲ್ಲಿ ಸಿಂಗಲ್​ ರನ್​ ಪಡೆದಿದ್ದರು, ಕೇವಲ ಎರಡು ಬಾಲ್​ ಡಾಟ್​ ಆಗಿತ್ತು. ಇಂಗ್ಲೆಂಡ್​ ನೆಲದಲ್ಲಿ ಅವರನ್ನೇ ಅಂದು ಭಾರತ 18 ರನ್​ನಿಂದ ಮಣಿಸಿತ್ತು. ಅಲ್ಲದೇ ಧೋನಿ ಅವರ ನಾಯಕತ್ವದಲ್ಲಿ ಪ್ರಶಸ್ತಿ ಮುಡಿಗೇರಿತ್ತು.

ಈ ಇನ್ನಿಂಗ್ಸ್​ನಿಂದ ಯುವರಾಜ್​ ಸಿಂಗ್​​ ಕೇವಲ ಕ್ರಿಕೆಟ್​ ಆಟಗಾರರಿಗೆ ಮಾತ್ರವಲ್ಲ, ಜಗತ್ತಿನಾದ್ಯಂತ ಪರಿಚಿತರಾದರು. ಅಲ್ಲದೇ ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ಬಾರಿಗೆ ಆರು ಬಾಲ್​ನ್ನು ಸಿಕ್ಸ್​ಗೆ ಅಟ್ಟಿದ ಸಾಧನೆ ಮಾಡಿದರು. ಇಂಗ್ಲೆಂಡ್​ನ ಡರ್ಬನ್ ಮೈದಾನದಲ್ಲಿ ಯುವಿ ಸಿಕ್ಸ್​​ನ ದಾಖಲೆ ಈಗಲು ನವಿರಾಗಿಯೇ ಇದೆ. ಇಂದಿಗೂ ಆಟ ಭಾರತೀಯರ ಸ್ಮೃತಿಯಿಂದ ಅಳಿಸಿ ಹೋಗಿಲ್ಲ.

16 ವರ್ಷದ ನೆನಪಿಗಾಗಿ ಯುವರಾಜ್​​ ಸಿಂಗ್​ ಇಂದು ಸ್ಯಾಂಡ್​ ಆರ್ಟ್​ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವಿಯ ಜನ್ಮದಿನಕ್ಕಾಗಿ ಕ್ರಿಸ್ಟಿ ವಲಿಯವೀಟ್ಟಿಲ್ ಎಂಬುವವರು ಸ್ಯಾಂಡ್​ ಆರ್ಟ್​ನ ವಿಡಿಯೋವನ್ನು ಮಾಡಿದ್ದರು. ಇದನ್ನು 16 ವರ್ಷದ ನೆನಪಿಗಾಗಿ ಇಂದು ಹಂಚಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಯುವರಾಜ್​ ಸಿಂಗ್​​ ಅವರ ಆರು ಸಿಕ್ಸ್​ನ್ನು ಬಿಸಿಸಿಐ ನೆನಪಿಸಿ ಕೊಂಡಿದೆ.

ಪಂದ್ಯದಲ್ಲಿ ಏನಾಯ್ತು?: 2007ರ ವಿಶ್ವಕಪ್​ನ ಲೀಗ್​ ಹಂತದ 21ನೇ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್​ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ ತಂಡ 218 ರನ್​ನ ಗುರಿಯನ್ನು ಆಂಗ್ಲರಿಗೆ ಕೊಟ್ಟಿತ್ತು. ಆರಂಭಿಕರಾದ ಗೌತಮ್​ ಗಂಭೀರ್​ (58) ಮತ್ತು ವಿರೇಂದ್ರ ಸೆಹ್ವಾಗ್​ (68) 136 ರನ್​ ಜೊತೆಯಾಟ ಮಾಡಿದ್ದರು. ಮೂರನೇ ವಿಕೆಟ್​ನಲ್ಲಿ ಉತ್ತಪ್ಪ ವೈಫಲ್ಯ ಕಂಡರೆ, ಕೊನೆಯಲ್ಲಿ ಧೋನಿ ಮತ್ತು ಯುವರಾಜ್​ ಸಿಂಗ್​ 61 ರನ್​ ಜೊತೆಯಾಟ ಮಾಡಿದ್ದರು. ಯುವಿಯ ಅಬ್ಬರ ಆಟ ಗೆಲುವಿಗೆ ಪ್ರಮುಖವಾಗಿತ್ತು. ಎರಡನೇ ಇನ್ನಿಂಗ್ಸ್​ ಆಡಲು ಬಂದ ಇಂಗ್ಲೆಂಡ್​ ತಂಡವನ್ನು 20 ಓವರ್​ಗೆ 200 ರನ್ ಭಾರತೀಯ ಬೌಲರ್​ಗಳು ​ಕಟ್ಟಿಹಾಕಿದ್ದರು. ಈ ಮೂಲಕ 18 ರನ್​ನಿಂದ ಭಾರತ ಗೆದ್ದಿತ್ತು.

ಇದನ್ನೂ ಓದಿ: ಆಸ್ಟ್ರೇಲಿಯಾ ಸರಣಿಗೆ ಎರಡು ತಂಡ ಪ್ರಕಟ: ಮೊದಲೆರಡು ಪಂದ್ಯಕ್ಕೆ ಕನ್ನಡಿಗ ರಾಹುಲ್ ನಾಯಕ.. ಆರ್​ ಅಶ್ವಿನ್​ಗೆ ಸ್ಥಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.