ETV Bharat / sports

ಭಾರತೀಯ ಅಭಿಮಾನಿಗಳಿಗೆ ಸೈಮನ್ ಡೌಲ್ ಹೃದಯಸ್ಪರ್ಶಿ ಸಂದೇಶ - ಸೈಮನ್ ಡೌಲ್ ಟ್ವೀಟ್

ಐಪಿಎಲ್ ಪಂದ್ಯಾವಳಿ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ಮರಳುತ್ತಿದ್ದು, ನ್ಯೂಜಿಲೆಂಡ್ ಆಟಗಾರ ಸೈಮನ್ ಡೌಲ್ ದೇಶಕ್ಕೆ ತೆರಳುವ ಮುನ್ನ ಭಾರತೀಯ ಅಭಿಮಾನಗಳಿಗೆ ಹೃದಯಸ್ಪರ್ಶಿ ಸಂದೇಶವೊಂದನ್ನು ನೀಡಿದ್ದಾರೆ.

Simon Doull says sorry to fans as he leaves India
ಸ್ವದೇಶಕ್ಕೆ ಮರಳಿದ ಸೈಮನ್ ಡೌಲ್
author img

By

Published : May 6, 2021, 11:23 AM IST

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದೂಡಲ್ಪಟ್ಟಿದ್ದು ಭಾರತದಿಂದ ನಿರ್ಗಮಿಸುತ್ತಿರುವ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಮತ್ತು ಕಮೆಂಟರ್ ಸೈಮನ್ ಡೌಲ್ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಹೃದಯಸ್ಪರ್ಶಿ ಸಂದೇಶ ನೀಡಿದ್ದಾರೆ.

"ಭಾರತ, ನೀವು ಇಷ್ಟು ವರ್ಷಗಳಲ್ಲಿ ನನಗೆ ತುಂಬಾ ಕೊಟ್ಟಿದ್ದೀರಿ. ಇಂತಹ ಸಂದಿಗ್ಧ ಸಮಯದಲ್ಲಿ ನಿಮ್ಮನ್ನು ಬಿಟ್ಟು ಹೋಗುತ್ತಿರುವ ಬಗ್ಗೆ ನನಗೆ ಬೇಸರವಿದೆ. ಯಾರೆಲ್ಲ ಸಮಸ್ಯೆಯಿಂದ ಬಳಲುತ್ತಿದ್ದೀರೋ ಅವರೊಂದಿಗೆ ನನ್ನ ಹೃದಯವಿದೆ. ನೀವು ಏನು ಮಾಡಲು ಬಯಸುತ್ತೀರೋ, ಅದನ್ನು ಸುರಕ್ಷತೆಯಿಂದ ಮಾಡಿ. ಮುಂದಿನ ಅವಧಿಯವರಿಗೆ ಕಾಳಜಿಯಿಂದ ಇರಿ" ಎಂದು ಡೌಲ್ ಟ್ವೀಟ್ ಮಾಡಿದ್ದಾರೆ.

  • Dear India, You have given me so much over so many years and I am sorry to be leaving you in such trying times. To those who are suffering my heart go’s out to you and your families. Please do what you can to stay safe. Until next time take care. #india #cricket #love

    — Simon Doull (@Sdoull) May 5, 2021 " class="align-text-top noRightClick twitterSection" data=" ">

ಐಪಿಎಲ್‌ನಲ್ಲಿ ಭಾಗವಹಿಸಿದ ಅನೇಕ ನ್ಯೂಜಿಲೆಂಡ್ ಆಟಗಾರರಲ್ಲಿ ಡೌಲ್ ಕೂಡ ಒಬ್ಬರು. ಕೇನ್ ವಿಲಿಯಮ್ಸನ್, ಕೈಲ್ ಜೇಮಿಸನ್ ಮತ್ತು ಟ್ರೆಂಟ್ ಬೌಲ್ಟ್ ಐಪಿಎಲ್​ನಲ್ಲಿರುವ ಕೆಲ ಪ್ರಮುಖ ಕಿವೀಸ್ ಆಟಗಾರರಾಗಿದ್ದಾರೆ.

ಇದನ್ನೂ ಓದಿ : 'ಅತ್ಯಂತ ಸುರಕ್ಷಿತ ಜಾಗಕ್ಕೆ ಮರಳಿದ್ದೇನೆ': ಭಾವನಾತ್ಮಕ ಫೋಟೋ ಶೇರ್ ಮಾಡಿದ ಜಡೇಜಾ

ಕಿವೀಸ್, ಆಸೀಸ್ ಮತ್ತು ವೆಸ್ಟ್ ಇಂಡೀಸ್ ಆಟಗಾರರು ಇನ್ನೂ ಭಾರತದಿಂದ ನಿರ್ಗಮಿಸಿಲ್ಲ. ಇಂಗ್ಲೆಂಡ್‌ನ 11 ಆಟಗಾರರ ಪೈಕಿ 8 ಮಂದಿ ತಮ್ಮ ದೇಶ ತಲುಪಿದ್ದಾರೆ. ದಕ್ಷಿಣ ಆಫ್ರಿಕಾದ ಕೆಲ ಆಟಗಾರರು ಕೂಡ ಬುಧವಾರ ಮಧ್ಯಾಹ್ನ ತಮ್ಮ ದೇಶಕ್ಕೆ ತೆರಳಿದ್ದಾರೆ.

ಮೇ 15 ರವರೆಗೆ ಭಾರತದಿಂದ ತೆರಳುವ ಎಲ್ಲಾ ವಿಮಾನಗಳಿಗೂ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ಹೇರಿದೆ. ಹಾಗಾಗಿ, ಅಲ್ಲಿನ ಆಟಗಾರರನ್ನು ಊರಿಗೆ ಕಳುಹಿಸಲು ಬಿಸಿಸಿಐ ಪರ್ಯಾಯ ದಾರಿ ಹುಡುಕುತ್ತಿದೆ. ಕೆಲ ಆಟಗಾರರಲ್ಲಿ ಕೋವಿಡ್ ಸೋಂಕು ಕಂಡು ಬಂದ ಹಿನ್ನೆಲೆ ಐಪಿಎಲ್​ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಬಿಸಿಸಿ ಮುಂದೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.