ಹೈದರಾಬಾದ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನಿಂದಲೂ ಹೊರಬೀಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಅಥವಾ ಐಪಿಎಲ್ ಫ್ರಾಂಚೈಸಿ ಯಾವುದೇ ಖಚಿತ ಮಾಹಿತಿ ನೀಡಿಲ್ಲ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಬೇಕಾಗಿದ್ದ ಗಿಲ್ ಮೊಣಕಾಲು ನೋವಿನಿಂದಾಗಿ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರವಾಲ್ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೆ ಈಗಾಗಲೇ ಅರ್ಧಕ್ಕೆ ಮೊಟಕುಗೊಂಡಿರುವ 2021ರ ಐಪಿಎಲ್, ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಯುಎಇನಲ್ಲಿ ಪುನಾರಂಭಗೊಳ್ಳಲಿದ್ದು, ಅದರಲ್ಲೂ ಗಿಲ್ ಭಾಗಿಯಾಗುತ್ತಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿರಿ: ಮಹಿಳಾ ಏಕದಿನ ಕ್ರಿಕೆಟ್‌ಗೆ ಮಿಥಾಲಿ 'ರಾಣಿ': ಐಸಿಸಿ ಶ್ರೇಯಾಂಕದಲ್ಲಿ 8ನೇ ಬಾರಿಗೆ ಅಗ್ರಸ್ಥಾನ
ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರನಾಗಿರುವ ಗಿಲ್ ಅವರ ಮೊಣಕಾಲು ನೋವು ಬಹಳ ಗಂಭೀರವಾಗಿರುವ ಕಾರಣ ಸಂಪೂರ್ಣವಾಗಿ ಚೇತರಿಕೆ ಕಾಣಲು ಮುಂದಿನ ನಾಲ್ಕೈದು ತಿಂಗಳ ಅವಶ್ಯಕತೆ ಇದೆ ಎನ್ನಲಾಗುತ್ತಿದೆ.