ETV Bharat / sports

ಜಿಂಬಾಬ್ವೆ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ: ODI ಶ್ರೇಯಾಂಕದಲ್ಲಿ 45 ಸ್ಥಾನ ಜಿಗಿತ ಕಂಡ ಗಿಲ್​ - Etv bharat kannada

ಅಮೋಘ ಫಾರ್ಮ್​​ನಲ್ಲಿರುವ ಟೀಂ ಇಂಡಿಯಾ ಬ್ಯಾಟರ್​​​​ ಶುಭಮನ್​ ಗಿಲ್​​​ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.

Shubman Gill ODI Rank
Shubman Gill ODI Rank
author img

By

Published : Aug 24, 2022, 7:12 PM IST

ದುಬೈ: ವೆಸ್ಟ್​ ಇಂಡೀಸ್​, ಜಿಂಬಾಬ್ವೆ ವಿರುದ್ಧದ ಕ್ರಿಕೆಟ್‌ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಯುವ ಆಟಗಾರ​ ಶುಭಮನ್ ಗಿಲ್​ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 45 ಸ್ಥಾನ ಮೇಲಕ್ಕೇರಿದ್ದಾರೆ. ಈ ಮೂಲಕ ಅವರಿಗೆ ರ‍್ಯಾಂಕಿಂಗ್​​ನಲ್ಲಿ 38ನೇ ಸ್ಥಾನ ದೊರೆತಿದೆ. ವಿಂಡೀಸ್​, ಜಿಂಬಾಬ್ವೆ ವಿರುದ್ಧದ ಸರಣಿಗಿಂತಲೂ ಮೊದಲು ಇವರು​​ 93ನೇ ಸ್ಥಾನದಲ್ಲಿದ್ದರು.

ಇದನ್ನೂ ಓದಿ: ಚೊಚ್ಚಲ ಶತಕ ತಂದೆಗೆ ಅರ್ಪಿಸಿದ ಗಿಲ್​​.. ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ಯುವಿ ಭೇಟಿಯಾಗಿದ್ದರಂತೆ ಶುಭಮನ್

ವೆಸ್ಟ್​ ಇಂಡೀಸ್ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಶುಭಮನ್ ಗಿಲ್​​, ಜಿಂಬಾಬ್ವೆ ವಿರುದ್ಧ ಶತಕ ಸೇರಿದಂತೆ 245 ರನ್​​​ಗಳಿಸಿದ್ದರು. ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ 82 ರನ್​​​ಗಳಿಸಿದ್ದ ಇವರು ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು.

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಿಖರ್ ಧವನ್​ಗೆ ಅದೃಷ್ಟ ಕೈಕೊಟ್ಟಿದ್ದು, ಒಂದು ಸ್ಥಾನ ಕಳೆದುಕೊಂಡಿದ್ದಾರೆ. ಉಳಿದಂತೆ, ಪಾಕಿಸ್ತಾನ ತಂಡದ ಕ್ಯಾಪ್ಟನ್ ಬಾಬರ್ ಆಜಂ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇನ್ನುಳಿದಂತೆ, ದಕ್ಷಿಣ ಆಫ್ರಿಕಾದ ಡಸ್ಸೆನ್​ 2ನೇ ಸ್ಥಾನದಲ್ಲಿದ್ದು, ಕ್ವಿಂಟನ್ ಡಿಕಾಕ್ 3​, ಇಮಾಮ್​ ಉಲ್​ ಹಕ್ 4​ ಹಾಗೂ 5ನೇ ಸ್ಥಾನದಲ್ಲಿ ವಿರಾಟ್​ ಕೊಹ್ಲಿ ಇದ್ದಾರೆ.

ಕುಸಿದ ಬುಮ್ರಾ: ಬೌಲಿಂಗ್​ ವಿಭಾಗದಲ್ಲಿ ನ್ಯೂಜಿಲ್ಯಾಂಡ್​​​ ಟ್ರೆಂಟ್​ ಬೌಲ್ಟ್​ ಮೊದಲ ಸ್ಥಾನದಲ್ಲಿದ್ದು, ಜೋಶ್ ಹ್ಯಾಜಲ್​​​ವುಡ್​ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ಮುಜೀಬ್​ ಉರ್ ರೆಹಮಾನ್​ ಇದ್ದಾರೆ. ಎರಡನೇ ಸ್ಥಾನದಲ್ಲಿದ್ದ ಬುಮ್ರಾ ಕೆಲ ಸರಣಿಗಳಿಂದ ಹೊರಗುಳಿದಿರುವ ಕಾರಣಕ್ಕೆ 4ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.