ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ಟೆಸ್ಟ್ ಕ್ರಿಕೆಟ್ನ ಎರಡನೇ ಪ್ರವಾಸದಲ್ಲಿ ಶುಭಮನ್ ಗಿಲ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿದ್ದಾರೆ. ಏಕದಿನ ಮತ್ತು ಟಿ20ಯಲ್ಲಿ ಆರಂಭಿಕರಾಗಿ ಕಾಣಿಸಿಕೊಳ್ಳುವ ಅವರು ಕೆಂಪು ಚೆಂಡಿನ ವಿರುದ್ಧ ಚೇತೇಶ್ವರ ಪೂಜಾರ ಅವರ ಸ್ಥಾನದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈ ವರ್ಷ ಏಕದಿನ ಮತ್ತು ಟಿ20ಯಲ್ಲಿ ಉತ್ತಮ ಅಂಕಿ-ಅಂಶ ಹೊಂದಿರುವ 'ಪ್ರಿನ್ಸ್' ಟೆಸ್ಟ್ನಲ್ಲಿ ಗಮನಾರ್ಹವಾಗಿಲ್ಲ.
ಸೆಂಚುರಿಯನ್ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲೂ ಗಿಲ್ ವೈಫಲ್ಯತೆ ಎದುರಿಸಿದರು. ಅವರ ಬ್ಯಾಟಿಂಗ್ ಬಗ್ಗೆ ವಿಶ್ಲೇಷಿಸಿರುವ ದಿಗ್ಗಜ ಆರಂಭಿಕ ಆಟಗಾರ ಸುನಿಲ್ ಗವಾಸ್ಕರ್ 'ಶುಭಮನ್ ಗಿಲ್ ಅವರು ಟೆಸ್ಟ್ ಕ್ರಿಕೆಟ್ ಆಡುವಾಗ ಸ್ವಲ್ಪ ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
-
'𝘛𝘳𝘺 & 𝘱𝘭𝘢𝘺 𝘢𝘴 𝘭𝘢𝘵𝘦 𝘢𝘴 𝘱𝘰𝘴𝘴𝘪𝘣𝘭𝘦'#SunilGavaskar & @IrfanPathan shares guru mantra for #TeamIndia batsmen ahead of the Cape Town Test! 👍🏻
— Star Sports (@StarSportsIndia) December 31, 2023 " class="align-text-top noRightClick twitterSection" data="
Tune-in to #SAvIND 2nd Test
WED, JAN 3, 12:30 PM | Star Sports Network pic.twitter.com/9rOqGxb9lV
">'𝘛𝘳𝘺 & 𝘱𝘭𝘢𝘺 𝘢𝘴 𝘭𝘢𝘵𝘦 𝘢𝘴 𝘱𝘰𝘴𝘴𝘪𝘣𝘭𝘦'#SunilGavaskar & @IrfanPathan shares guru mantra for #TeamIndia batsmen ahead of the Cape Town Test! 👍🏻
— Star Sports (@StarSportsIndia) December 31, 2023
Tune-in to #SAvIND 2nd Test
WED, JAN 3, 12:30 PM | Star Sports Network pic.twitter.com/9rOqGxb9lV'𝘛𝘳𝘺 & 𝘱𝘭𝘢𝘺 𝘢𝘴 𝘭𝘢𝘵𝘦 𝘢𝘴 𝘱𝘰𝘴𝘴𝘪𝘣𝘭𝘦'#SunilGavaskar & @IrfanPathan shares guru mantra for #TeamIndia batsmen ahead of the Cape Town Test! 👍🏻
— Star Sports (@StarSportsIndia) December 31, 2023
Tune-in to #SAvIND 2nd Test
WED, JAN 3, 12:30 PM | Star Sports Network pic.twitter.com/9rOqGxb9lV
ದಕ್ಷಿಣ ಆಫ್ರಿಕಾ ಪ್ರವಾಸ ಮೊದಲ ಟೆಸ್ಟ್ನಲ್ಲಿ ಗಿಲ್ ಮೂರನೇ ಆಟಗಾರನಾಗಿ ಮೈದಾನಕ್ಕಿಳಿದು, ಎರಡು ಇನ್ನಿಂಗ್ಸ್ನಲ್ಲಿ ಕ್ರಮವಾಗಿ 2 ಮತ್ತು 26 ರನ್ ಗಳಿಸಿದ್ದಾರೆ. ಎರಡನೇ ಇನ್ನಿಂಗ್ಸ್ ವಿರಾಟ್ ನಂತರ ಎರಡನೇ ಹೆಚ್ಚಿನ ರನ್ ಗಳಿಸಿ ಬ್ಯಾಟರ್ ಗಿಲ್ ಆಗಿದ್ದರೂ ಉತ್ತಮ ಪ್ರದರ್ಶನ ಕಂಡುಬಂದಿಲ್ಲ. ಎರಡೂ ಇನ್ನಿಂಗ್ಸ್ನಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಆಡುತ್ತಿರುವ ನಾಂದ್ರೆ ಬರ್ಗರ್ ಅವರಿಗೆ ವಿಕೆಟ್ ಕೊಟ್ಟರು. ಮೊದಲ ಇನ್ನಿಂಗ್ಸ್ನಲ್ಲಿ ಟಿಪ್ ಕ್ಯಾಚ್ಗೆ ಬಲಿಯಾದರೆ, ಎರಡನೇ ಇನ್ನಿಂಗ್ಸ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಆಕ್ರಮಣಕಾರಿ ಆಟ: "ನನ್ನ ಪ್ರಕಾರ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ವಲ್ಪ ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ. ಟಿ20 ಮತ್ತು ಏಕದಿನ ಕ್ರಿಕೆಟ್‌ಗೆ ಹೋಲಿಸಿದರೆ ಟೆಸ್ಟ್ ಕ್ರಿಕೆಟ್ ಆಡುವಾಗ ಸ್ವಲ್ಪ ವ್ಯತ್ಯಾಸವಿದೆ. ವ್ಯತ್ಯಾಸವು ಚೆಂಡಿನಲ್ಲಿದೆ. ಕೆಂಪು ಚೆಂಡು ಬಿಳಿ ಚೆಂಡುಗಿಂತ ಸ್ವಲ್ಪ ಹೆಚ್ಚು ಚಲಿಸುತ್ತದೆ. ಗಾಳಿಯಲ್ಲಿ ಮತ್ತು ಪಿಚ್‌ನ ಹೊರಗೆ ಕೂಡ ಅದು ಸ್ವಲ್ಪ ಹೆಚ್ಚು ಪುಟಿದೇಳುತ್ತದೆ. ಅವರು ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.
2023ರಲ್ಲಿ ಗಿಲ್: 2023ರಲ್ಲಿ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು 63.36 ಸರಾಸರಿ ಮತ್ತು 105.45 ಸ್ಟ್ರೈಕ್ ರೇಟ್‌ನಲ್ಲಿ 1584 ಏಕದಿನ ರನ್‌ಗಳನ್ನು ಗಳಿಸಿದರೆ, ಐಪಿಎಲ್ 2023ರಲ್ಲಿ ಟಾಪ್ ರನ್ನರ್ ಆದರು. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 13 ಇನ್ನಿಂಗ್ಸ್‌ಗಳಲ್ಲಿ 26ರ ಸರಾಸರಿ ಮತ್ತು 145.11 ಸ್ಟ್ರೈಕ್-ರೇಟ್‌ನಲ್ಲಿ 312 ರನ್ ಗಳಿಸಿದ್ದಾರೆ.
ಸಾಧಾರಣ ಟೆಸ್ಟ್ ಪ್ರದರ್ಶನ: ಆದರೆ ಗಿಲ್ ಅವರ ಟೆಸ್ಟ್ ಪ್ರದರ್ಶನ ಅಷ್ಟು ಉತ್ತಮವಾಗಿಲ್ಲ. ಆರು ಟೆಸ್ಟ್‌ಗಳಲ್ಲಿ 28.66 ರ ಸರಾಸರಿಯಲ್ಲಿ 258 ರನ್ ಗಳಿಸಿದರು. ಈ ವರ್ಷ ಅವರ ಏಕೈಕ ಟೆಸ್ಟ್ ಶತಕವು ಮಾರ್ಚ್‌ನಲ್ಲಿ ಅಹಮದಾಬಾದ್ ಪಿಚ್‌ನ ನಾಲ್ಕನೇ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಂದಿತು, ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು. ಅಲ್ಲದೇ, ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಚೇತೇಶ್ವರ ಪೂಜಾರ ಅವರ ಬದಲಾಗಿ ಗಿಲ್ ಮೂರನೇ ಸ್ಥಾನದಲ್ಲಿ ಆಡಲು ಪ್ರಾರಂಭಿಸಿದರು.
"ಶುಭಮನ್ ಗಿಲ್ ತಮ್ಮ ವೃತ್ತಿಜೀವನವನ್ನು ತುಂಬಾ ಚೆನ್ನಾಗಿ ಪ್ರಾರಂಭಿಸಿದರು ಮತ್ತು ನಾವು ಅವರ ಆಟವನ್ನು ಪ್ರಶಂಸಿಸಿದ್ದೇವೆ. ಅವರು ತಮ್ಮ ಫಾರ್ಮ್‌ಗೆ ಮರಳುತ್ತಾರೆ. ಅವರಿಗೆ ಕಠಿಣ ತರಬೇತಿ ನೀಡಲಾಗುತ್ತಿದೆ ಮತ್ತು ಭವಿಷ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಭಾವಿಸುತ್ತೇನೆ" ಎಂದು ಗವಾಸ್ಕರ್ ಹೇಳಿದರು.
3ರಿಂದ 2ನೇ ಟೆಸ್ಟ್: ದಕ್ಷಿಣ ಆಫ್ರಿಕಾದ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 0-1 ರಿಂದ ಹಿನ್ನಡೆಯಲ್ಲಿದೆ. ಎರಡನೇ ಟೆಸ್ಟ್ 2024ರ ಜನವರಿ 3 ರಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಆರಂಭವಾಗಲಿದೆ. ವರ್ಷದ ಮೊದಲ ಪಂದ್ಯವನ್ನು ತಂಡ ಜಯದಿಂದ ಆರಂಭಿಸುವ ಹುರುಪಿನಲ್ಲಿದೆ.
ಇದನ್ನೂ ಓದಿ: "ಕ್ರೀಡೆಯಿಂದ ದೇಶದ ಕೀರ್ತಿ ಹೆಚ್ಚಿದೆ": ಮೋದಿ 'ಮನ್ ಕಿ ಬಾತ್'