ಹರಾರೆ(ಜಿಂಬಾಬ್ವೆ): ಆತಿಥೇಯ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಮುತ್ತಿಕ್ಕಿರುವ ಟೀಂ ಇಂಡಿಯಾ ಯಂಗ್ ಪ್ಲೇಯರ್ ಶುಭಮನ್ ಗಿಲ್ ಅಲ್ಲಿನ ಆಟಗಾರನಿಗೆ ಜರ್ಸಿ ಗಿಫ್ಟ್ ನೀಡುವ ಮೂಲಕ ಹೃದಯ ಗೆದ್ದಿದ್ದಾರೆ. ಹರಾರೆ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ, ಜಿಂಬಾಬ್ವೆ ನೆಲದಲ್ಲಿ ಹೊಸ ದಾಖಲೆ ಬರೆದಿರುವ ಶುಭಮನ್ ಗಿಲ್ ಕ್ಷೇತ್ರರಕ್ಷಣೆ ವೇಳೆ ಸಿಕಂದರ್ ರಾಜಾ(115) ಅವರು ಹೊಡೆದ ಬಾಲ್ಅನ್ನು ಅದ್ಭುತ ಹಿಡಿಯುವ ಮೂಲಕ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಜಿಂಬಾಬ್ವೆ ಆಲ್ರೌಂಡರ್ ಇವಾನ್ಸ್ಗೆ ತಮ್ಮ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರುವ ಇವಾನ್ಸ್ 10 ಓವರ್ಗಳಲ್ಲಿ 54ರನ್ ನೀಡಿ, ಪ್ರಮುಖ 5 ವಿಕೆಟ್ ಪಡೆದುಕೊಂಡಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಕೆಎಲ್ ರಾಹುಲ್, ಶಿಖರ್ ಧವನ್, ದೀಪಕ್ ಹೂಡಾ, ಶುಭಮನ್ ಗಿಲ್ ಸೇರಿದಂತೆ ಐದು ವಿಕೆಟ್ ಪಡೆದರು.
-
First with the bat and then with a diving catch, this man won our hearts more than once today 😍
— Sony Sports Network (@SonySportsNetwk) August 22, 2022 " class="align-text-top noRightClick twitterSection" data="
How good was this effort from @ShubmanGill to dismiss the dangerous Sikandar Raza? 🤩💯#ShubmanGill #ZIMvIND #TeamIndia #SirfSonyPeDikhega pic.twitter.com/u5snCqECBw
">First with the bat and then with a diving catch, this man won our hearts more than once today 😍
— Sony Sports Network (@SonySportsNetwk) August 22, 2022
How good was this effort from @ShubmanGill to dismiss the dangerous Sikandar Raza? 🤩💯#ShubmanGill #ZIMvIND #TeamIndia #SirfSonyPeDikhega pic.twitter.com/u5snCqECBwFirst with the bat and then with a diving catch, this man won our hearts more than once today 😍
— Sony Sports Network (@SonySportsNetwk) August 22, 2022
How good was this effort from @ShubmanGill to dismiss the dangerous Sikandar Raza? 🤩💯#ShubmanGill #ZIMvIND #TeamIndia #SirfSonyPeDikhega pic.twitter.com/u5snCqECBw
ಟೀಂ ಇಂಡಿಯಾ ಬಲಗೈ ಬ್ಯಾಟರ್ ಶುಭಮನ್ ಗಿಲ್ ಅವರ ದೊಡ್ಡ ಅಭಿಮಾನಿಯಾಗಿರುವ ಇವಾನ್ಸ್, ಮಾಧ್ಯಮಗೋಷ್ಟಿ ವೇಳೆ ಕೈಯಲ್ಲಿ ಗಿಲ್ ಅವರ ಜರ್ಸಿ ಹಿಡಿದು ಮಾತನಾಡಿದರು. ನಾನು ಗಿಲ್ ಅವರ ದೊಡ್ಡ ಅಭಿಮಾನಿ. ಐಪಿಎಲ್ನಲ್ಲಿ, ಆಸ್ಟ್ರೇಲಿಯಾ ನೆಲದಲ್ಲಿ ಗಿಲ್ ಬ್ಯಾಟ್ ಮಾಡ್ತಿದ್ದುದನ್ನು ನಾನು ಟಿವಿಯಲ್ಲಿ ನೋಡಿದ್ದೇನೆ. ಅವರ ಬ್ಯಾಟಿಂಗ್ ಶೈಲಿ ನಿಜಕ್ಕೂ ವಿಭಿನ್ನವಾಗಿದೆ. ಹೀಗಾಗಿ, ಅವರ ಅಭಿಮಾನಿಯಾಗಿದ್ದೇನೆ ಎಂದು ಬಣ್ಣಿಸಿದರು.
ಐಪಿಎಲ್ನಲ್ಲಿ ಆಡಬೇಕೆಂಬ ಬಯಕೆ ಇದೆ. ಆದರೆ, ಗೊತ್ತಿಲ್ಲ ಅದು ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತದೆ ಎಂಬುದು ಎಂದು ಇದೇ ವೇಳೆ ತಿಳಿಸಿದರು. ಜಿಂಬಾಬ್ವೆ ವಿರುದ್ಧ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ 3-0 ಅಂತರದಿಂದ ಗೆಲುವು ದಾಖಲಿಸುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಜೊತೆಗೆ ಜಿಂಬಾಬ್ವೆ ವಿರುದ್ಧ ಸೋಲಿಲ್ಲದ ಸರದಾರ ಎಂಬ ದಾಖಲೆ ಮುಂದುವರೆಸಿದೆ.
ಸಿಕಂದರ್ ರಾಜಾಗೆ ಅಭಿನಂದಿಸಿದ ಟೀಂ ಇಂಡಿಯಾ ಪ್ಲೇಯರ್ಸ್: ಟೀಂ ಇಂಡಿಯಾ ನೀಡಿದ್ದ 290ರನ್ಗಳ ಬೃಹತ್ ಗುರಿ ಬೆನ್ನತ್ತಿದ್ದ ಜಿಂಬಾಬ್ವೆ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟ್ ಬೀಸಿದ ಸಿಕಂದರ್ ರಾಜಾ ತಂಡವನ್ನು ಗೆಲುವಿನ ದಡಕ್ಕೆ ತೆಗೆದುಕೊಂಡು ಬಂದಿದ್ದರು. ಆಕರ್ಷಕ 115ರನ್ ಸಿಡಿಸಿ, ವಿಕೆಟ್ ಒಪ್ಪಿಸಿದರು. ಇವರ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಟೀಂ ಇಂಡಿಯಾ ಪ್ಲೇಯರ್ಸ್ ಮೈದಾನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಅವರ ಬೆನ್ನುತಟ್ಟಿ ಶಹಬ್ಬಾಸ್ಗಿರಿ ನೀಡಿದರು.