ಶಾರ್ಜಾ: ಬ್ಯಾಟರ್ಗಳ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟರ್ ರೈಡರ್ಸ್ ಪ್ಲೇ ಆಫ್ ಸ್ಥಾನವನ್ನು ನಿರ್ಧಿರಿಸುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ಗೆ 172 ರನ್ಗಳ ಬೃಹತ್ ಗುರಿಯನ್ನು ನೀಡಿದೆ. ಇದು ಶಾರ್ಜಾದಲ್ಲಿ ಈ ಆವೃತ್ತಿಯಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.
ನಿಧಾನಗತಿ ಪಿಚ್ ಎಂದೇ ಗುರುತಿಸಿಕೊಂಡಿರುವ ಶಾರ್ಜಾದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಬ್ಮನ್ ಗಿಲ್ 44 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 56 ರನ್ಗಳಿಸಿದರೆ, ಇವರ ಜೊತೆಗಾರ ವೆಂಕಟೇಶ್ ಅಯ್ಯರ್ 35 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 38 ರನ್ಗಳಿಸಿದರು.
-
INNINGS BREAK! @KKRiders post a formidable total on the board. 👍 👍
— IndianPremierLeague (@IPL) October 7, 2021 " class="align-text-top noRightClick twitterSection" data="
5⃣6⃣ for @ShubmanGill
3⃣8⃣ for Venkatesh Iyer
The @rajasthanroyals chase to begin soon. #VIVOIPL #KKRvRR
Scorecard 👉 https://t.co/oqG5Yj3afs pic.twitter.com/yx09mZWVTc
">INNINGS BREAK! @KKRiders post a formidable total on the board. 👍 👍
— IndianPremierLeague (@IPL) October 7, 2021
5⃣6⃣ for @ShubmanGill
3⃣8⃣ for Venkatesh Iyer
The @rajasthanroyals chase to begin soon. #VIVOIPL #KKRvRR
Scorecard 👉 https://t.co/oqG5Yj3afs pic.twitter.com/yx09mZWVTcINNINGS BREAK! @KKRiders post a formidable total on the board. 👍 👍
— IndianPremierLeague (@IPL) October 7, 2021
5⃣6⃣ for @ShubmanGill
3⃣8⃣ for Venkatesh Iyer
The @rajasthanroyals chase to begin soon. #VIVOIPL #KKRvRR
Scorecard 👉 https://t.co/oqG5Yj3afs pic.twitter.com/yx09mZWVTc
ನಿತೀಶ್ ರಾಣಾ 12, ರಾಹುಲ್ ತ್ರಿಪಾಠಿ 14 ಎಸೆತಗಳಲ್ಲಿ 21, ದಿನೇಶ್ ಕಾರ್ತಿಕ್ ಅಜೇಯ 14 ಮತ್ತು ಇಯಾನ್ ಮಾರ್ಗನ್ ಅಜೇಯ 13 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಚೇತನ್ ಸಕಾರಿಯಾ 23ರನ್ ನೀಡಿ 1 ವಿಕೆಟ್ ಪಡೆದರೆ, ಮೋರಿಸ್ 28ಕ್ಕೆ1, ತೆವಾಟಿಯಾ 11ಕ್ಕೆ1, ಗ್ಲೇನ್ ಫಿಲಿಫ್ಸ್ 17ಕ್ಕೆ1 ವಿಕೆಟ್ ಪಡೆದರು.