ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅಜೇಯ ಅರ್ಧಶತಕ ಬಾರಿಸಿರುವ ಶ್ರೇಯಸ್ ಅಯ್ಯರ್ ಬ್ಯಾಟ್ ಮಾಡುವಾಗ ಚೆಂಡು ಸ್ಟಂಪ್ಗೆ ಬಡಿದರೂ ಬೆಲ್ಸ್ ಹಾರದ ಕಾರಣ ಬಚಾವ್ ಆದ ಪ್ರಸಂಗ ನಡೆಯಿತು. ಇದರಿಂದ ವಿಕೆಟ್ ಪಡೆದ ಸಂಭ್ರಮದ ಅಂಚಿನಲ್ಲಿದ್ದ ಬಾಂಗ್ಲಾ ಆಟಗಾರರು ಕೆಲಕ್ಷಣ ದಿಗ್ಭ್ರಮೆಗೊಂಡರು.
-
An incredible sequence of play in the #BANvIND Test match as @ShreyasIyer15 is bowled by Ebadot Hossain but the 𝗯𝗮𝗶𝗹𝘀 𝗷𝘂𝘀𝘁 𝗿𝗲𝗳𝘂𝘀𝗲 𝘁𝗼 𝗳𝗮𝗹𝗹 🤯
— Sony Sports Network (@SonySportsNetwk) December 14, 2022 " class="align-text-top noRightClick twitterSection" data="
Your reaction on this close 'escape' ❓🤔#SonySportsNetwork #ShreyasIyer pic.twitter.com/q6BXBScVUz
">An incredible sequence of play in the #BANvIND Test match as @ShreyasIyer15 is bowled by Ebadot Hossain but the 𝗯𝗮𝗶𝗹𝘀 𝗷𝘂𝘀𝘁 𝗿𝗲𝗳𝘂𝘀𝗲 𝘁𝗼 𝗳𝗮𝗹𝗹 🤯
— Sony Sports Network (@SonySportsNetwk) December 14, 2022
Your reaction on this close 'escape' ❓🤔#SonySportsNetwork #ShreyasIyer pic.twitter.com/q6BXBScVUzAn incredible sequence of play in the #BANvIND Test match as @ShreyasIyer15 is bowled by Ebadot Hossain but the 𝗯𝗮𝗶𝗹𝘀 𝗷𝘂𝘀𝘁 𝗿𝗲𝗳𝘂𝘀𝗲 𝘁𝗼 𝗳𝗮𝗹𝗹 🤯
— Sony Sports Network (@SonySportsNetwk) December 14, 2022
Your reaction on this close 'escape' ❓🤔#SonySportsNetwork #ShreyasIyer pic.twitter.com/q6BXBScVUz
ಎಬಾಡೋಟ್ ಹೊಸೈನ್ ಅವರ ಎಸೆತವು ಇನ್ ಸ್ವಿಂಗ್ ಮೂಲಕ ಶ್ರೇಯಸ್ ಬ್ಯಾಟ್ ಮತ್ತು ಪ್ಯಾಡ್ ನಡುವೆ ನುಸಳಿ ಸ್ಟಂಪ್ಗೆ ತಗುಲಿತ್ತು. ಇದರಿಂದ ಹೊಸೈನ್ ಕೆಲಕ್ಷಣ ಸಂಭ್ರಮಪಟ್ಟರಾದರೂ, ಬಳಿಕ ಬೆಲ್ಸ್ ಹಾರದಿರುವುದನ್ನು ಕಂಡು ನಿರಾಸೆ ಹೊಂದಿದರು. ಅಲ್ಲದೇ, ಬ್ಯಾಟರ್ ಮತ್ತು ಬಾಂಗ್ಲಾದೇಶದ ಆಟಗಾರರೆಲ್ಲರೂ ಸಹ ಕೆಲಕಾಲ ಬೆರಗುಗೊಂಡರು.
ಅದೃಷ್ಟವಶಾತ್ ಬಚಾವ್ ಆದ ಅಯ್ಯರ್ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜೊತೆಗಾರ ಬ್ಯಾಟರ್ ಚೇತೇಶ್ವರ ಪೂಜಾರ ಜೊತೆ ಆಶ್ಚರ್ಯದಿಂದ ಮಾತನಾಡುತ್ತಿದ್ದರೆ, ಬಾಂಗ್ಲಾ ಫೀಲ್ಡರ್‌ಗಳು ಘಟನೆ ಬಗ್ಗೆ ಅಂಪೈರ್‌ಗಳೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 278 ರನ್ ಪೇರಿಸಿರುವ ಭಾರತಕ್ಕೆ ಶತಕವಂಚಿತ ಚೇತೇಶ್ಚರ ಪೂಜಾರ (90) ಹಾಗೂ ಅಜೇಯ ಅರ್ಧಶತಕ ಬಾರಿಸಿರುವ ಶ್ರೇಯಸ್ ಅಯ್ಯರ್ (82*) ಬೆನ್ನೆಲುಬಾಗಿ ನಿಂತರು. ವಿಕೆಟ್ ಕೀಪರ್ ರಿಷಬ್ ಪಂತ್ 46 ರನ್ ಕಾಣಿಕೆ ನೀಡಿದರು.
ಇದನ್ನೂ ಓದಿ: ತಂದೆಯ ಹಾದಿಯಲ್ಲೇ ಮಗ: ಸಚಿನ್ರಂತೆ ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಅರ್ಜುನ್