ETV Bharat / sports

Shreyas Iyer.. ಕಠಿಣ ಪರಿಶ್ರಮ ಎಂದಿಗೂ ಫಲ ನೀಡುತ್ತೆ: ಶ್ರೇಯಸ್ - ETV Bharat kannada News

ಶ್ರೇಯಸ್​ ಅರ್ಧಶತಕ ಸಿಡಿಸಿ ತಂಡಕ್ಕೆ ಬಲ- ವೆಸ್ಟ್​ ಇಂಡೀಸ್​ ವಿರುದ್ಧದ 2ನೇ ಪಂದ್ಯ ಗೆದ್ದ ಭಾರತ- ಪಂದ್ಯದ ಒತ್ತಡ ನಿಭಾಯಿಸಿದ ಬಗೆಯನ್ನು ಹಂಚಿಕೊಂಡ ಅಯ್ಯರ್​

shreyas-iyer
ಶ್ರೇಯಸ್ ಅಯ್ಯರ್
author img

By

Published : Jul 25, 2022, 12:27 PM IST

ವೆಸ್ಟ್​ ಇಂಡೀಸ್​ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ 311 ರನ್​ಗಳ ಬೃಹತ್​ ಮೊತ್ತ ಬೆನ್ನಟ್ಟಿದ್ದನ್ನು ಶ್ರೇಯಸ್​ ಅಯ್ಯರ್​ ತಮಾಷೆಯಾಗಿ ವಿವರಿಸಿದ್ದಾರೆ. ದೊಡ್ಡ ಮೊತ್ತವನ್ನು ಮೀರಿ ಗೆಲುವು ಸಾಧಿಸಿರುವುದು ಅಷ್ಟೇನೂ ವಿಶೇಷ ಅನ್ನಿಸಲಿಲ್ಲ. ಇದು ಎಲ್ಲ ಪಂದ್ಯಗಳಂತೇಯೇ ಒಂದಾಗಿತ್ತು ಎಂದು ಹೇಳಿದ್ದಾರೆ.

ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 311 ರನ್​ ಕಲೆಹಾಕಿದಾಗ ಕೋಚ್​ ರಾಹುಲ್​ ದ್ರಾವಿಡ್​ ಸ್ವಲ್ಪ ಗಂಭೀರವಾಗಿದ್ದರು. ಪ್ರತಿಬಾರಿಯೂ ಅವರು ಈ ಬಗ್ಗೆ ಎಚ್ಚರಿಕೆ ಸಂದೇಶ ನೀಡುತ್ತಿದ್ದರು. ಆದರೆ, ತಂಡದ ಆಟಗಾರರು ಒತ್ತಡವನ್ನು ಮೀರಿ ಆಟವಾಡುವ ಮೂಲಕ ಜಯ ಸಲೀಸಾಗಿ ಒಲಿಯುವಂತೆ ಮಾಡಿದರು ಎಂದರು.

79 ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೈದಾನಕ್ಕೆ ಬಂದ ಶ್ರೇಯಸ್​ 71 ಎಸೆತಗಳಲ್ಲಿ 63 ರನ್​ ಬಾರಿಸಿದರು. ಅಲ್ಲದೇ, ಸಂಜು ಸ್ಯಾಮ್ಸನ್​ ಜೊತೆಗೂಡಿ 99 ರನ್​ಗಳ ಜೊತೆಯಾಟ ನೀಡಿದರು.

ಈ ರೀತಿಯ ಒತ್ತಡವನ್ನು ನಾವು ಮೊದಲೂ ಎದುರಿಸಿದ್ದರಿಂದ ಯಾವುದೇ ಸಮಸ್ಯೆಯಾಗಲಿಲ್ಲ. ಇದು ನಮ್ಮ ಪಾಲಿಗೆ ಮತ್ತೊಂದು ಆಟವಾಗಿತ್ತು ಅಷ್ಟೇ. ತಂಡದ ಪ್ರತಿಯೊಬ್ಬರೂ ಉತ್ತಮವಾಗಿ ಒತ್ತಡವನ್ನು ನಿಭಾಯಿಸಿಕೊಂಡು ಆಟವಾಡಿದರು. ಅದರಲ್ಲೂ ಅಕ್ಷರ್ ಪಟೇಲ್​ ಆಟ ಮಾತ್ರ ವಾಹ್​ ಎನ್ನುವಂತಿತ್ತು. ಅಕ್ಷರ್​​ ಪಂದ್ಯವನ್ನು ಮುಕ್ತಾಯಗೊಳಿಸಿದ್ದು, ಅದ್ಭುತವಾಗಿತ್ತು ಎಂದು ಹೊಗಳಿದರು.

ಶ್ರೇಯಸ್​​ಗೆ ಬೇಜಾರಂತೆ: ಪಂದ್ಯದಲ್ಲಿ ಉತ್ತಮವಾಗಿ ಆಡಿದ ಶ್ರೇಯಸ್​ಗೆ ತಮ್ಮ ಬಗ್ಗೆ ಈಗಲೂ ಬೇಜಾರಿದೆಯಂತೆ. ಕಾರಣ ಅವರು, ಸಲೀಸಾಗಿ ರನ್​ ಕಲೆಹಾಕುತ್ತಿದ್ದರೂ ಶತಕ ಬಾರಿಸಲಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಸತತ 2 ಅರ್ಧಶತಕ ಗಳಿಸಿದಾಗ್ಯೂ ನಾನು ಅದನ್ನು ಶತಕವಾಗಿ ಮಾರ್ಪಡಿಸಲು ಸೋತಿದ್ದೇನೆ. ಈ ಬಗ್ಗೆ ನನಗೆ ಬೇಜಾರಿದೆ. ಉತ್ತಮ ಆರಂಭ ಪಡೆದಾಗ ಅದನ್ನು ಬಳಸಿಕೊಳ್ಳಬೇಕು. ಇದು ನನ್ನಿಂದ ಸಾಧ್ಯವಾಗಿಲ್ಲ ಎಂದರು. ಶ್ರೇಯಸ್​ 26 ಇನ್ನಿಂಗ್ಸ್‌ಗಳಲ್ಲಿ 11 ಅರ್ಧಶತಕ ಮತ್ತು 1 ಶತಕ ಗಳಿಸಿದ್ದಾರೆ.

ಮೂರನೇ ಕ್ರಮಾಂಕ ಇಷ್ಟ: ದೇಶೀಯ ಮತ್ತು ಐಪಿಎಲ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಶ್ರೇಯಸ್​ ಭಾರತ ತಂಡದಲ್ಲಿ ಆ ಸ್ಥಾನವನ್ನು ವಿರಾಟ್​ ಕೊಹ್ಲಿ ಅವರಿಗೆ ಬಿಟ್ಟುಕೊಡಬೇಕಿದೆ. ಈ ಸ್ಥಾನ ಅವರ ಫೇವರೇಟ್​ ಅಂತೆ. ಬ್ಯಾಟಿಂಗ್​ ಅನ್ನು ನಿಜವಾಗಿಯೂ ಆನಂದಿಸುವ ಸ್ಥಾನವೆಂದರೆ ಅದು ಮೂರನೇ ಕ್ರಮಾಂಕ ಎಂದು ಶ್ರೇಯಸ್​ ಹೇಳಿದರು.

"ಬ್ಯಾಟಿಂಗ್​ಗೆ ಹೇಳಿ ಮಾಡಿಸಿದ ಕ್ರಮಾಂಕವಾಗಿದೆ. ಏಕೆಂದರೆ ಆರಂಭಿಕರ ವಿಕೆಟ್ ಬಿದ್ದಾಗ ನೀವು ಆ ಕಠಿಣ ಸವಾಲನ್ನು ಮೆಟ್ಟಿ ನಿಂತು ಇನ್ನಿಂಗ್ಸ್​ ಕಟ್ಟಬೇಕು. ಹೊಸದಾಗಿ ಯೋಚಿಸಿ ತಂತ್ರ ರೂಪಿಸಬೇಕು. ಓಪನರ್‌ಗಳು ಉತ್ತಮ ಜೊತೆಯಾಟ ನೀಡಿದಾಗ, ಅದೇ ವೇಗದಲ್ಲಿ ನಾವು ಬ್ಯಾಟ್​ ಬೀಸಬೇಕಾಗುತ್ತದೆ. ಈ ಎರಡೂ ವೈರುಧ್ಯದಲ್ಲಿ ಬ್ಯಾಟ್​ ಮಾಡುವುದು ನಿಜಕ್ಕೂ ಸವಾಲಾಗಿರುತ್ತದೆ ಎಂದರು.

ಓದಿ: IND vs WI ODI: ಸಂಘಟಿತ ಹೋರಾಟಕ್ಕೆ ಸಂದ ಫಲ; ಕೆರಿಬಿಯನ್ನರ ವಿರುದ್ಧ ಸರಣಿ ಗೆದ್ದ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.