ದುಬೈ: ಶ್ರೀಲಂಕಾ ವಿರುದ್ಧದ ಟಿ20 ಸರಣಿಯ 3 ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿದ್ದ ಭಾರತ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ನೂತನ ಟಿ20 ರ‍್ಯಾಂಕಿಂಗ್‌ನಲ್ಲಿ 27 ಸ್ಥಾನ ಜಿಗಿತ ಕಂಡಿದ್ದಾರೆ.
ಶ್ರೇಯಸ್ ಅಯ್ಯರ್ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳಲ್ಲಿ ಅಜೇಯರಾಗಿ 57, 74 ಮತ್ತು 73 ರನ್ಗಳಿಸಿ ಸರಣಿಯನ್ನು 3-0ಯಲ್ಲಿ ಗೆಲ್ಲುವುದಕ್ಕೆ ನೆರವಾಗಿದ್ದರು. ಅವರು ಇದೀಗ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ 45ನೇ ಸ್ಥಾನದಿಂದ 18ಕ್ಕೆ ಬಡ್ತಿ ಪಡೆದಿದ್ದಾರೆ. 27 ವರ್ಷದ ಬ್ಯಾಟರ್ 174ರ ಸ್ಟ್ರೈಕ್ರೇಟ್ನಲ್ಲಿ 204 ರನ್ಗಳಿಸಿ, ಮೂರು ಪಂದ್ಯಗಳ ಸರಣಿಯಲ್ಲಿ ಗರಿಷ್ಠ ರನ್ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು.
-
🔹 Rashid Khan breaks into top 10 ODI bowlers
— ICC (@ICC) March 2, 2022 " class="align-text-top noRightClick twitterSection" data="
🔹 Pathum Nissanka moves to No.9 in T20I batters’ list
Full rankings ➡️ https://t.co/saWOSRZ2py pic.twitter.com/UUXbK8RDme
">🔹 Rashid Khan breaks into top 10 ODI bowlers
— ICC (@ICC) March 2, 2022
🔹 Pathum Nissanka moves to No.9 in T20I batters’ list
Full rankings ➡️ https://t.co/saWOSRZ2py pic.twitter.com/UUXbK8RDme🔹 Rashid Khan breaks into top 10 ODI bowlers
— ICC (@ICC) March 2, 2022
🔹 Pathum Nissanka moves to No.9 in T20I batters’ list
Full rankings ➡️ https://t.co/saWOSRZ2py pic.twitter.com/UUXbK8RDme
ಆದರೆ ಸರಣಿ ತಪ್ಪಿಸಿಕೊಂಡಿದ್ದ ವಿರಾಟ್ ಕೊಹ್ಲಿ(15) ಅಗ್ರ 10 ಸ್ಥಾನಗಳಿಂದ ಹೊರಬಿದ್ದಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್(10) ಟಾಪ್ 10 ರಲ್ಲಿರುವ ಏಕೈಕ ಬ್ಯಾಟರ್ ಆಗಿದ್ದಾರೆ. ರೋಹಿತ್ ಶರ್ಮಾ 13ನೇ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನದ ಆರಂಭಿಕರಾದ ಬಾಬರ್ ಅಜಮ್ (805) ಮತ್ತು ಮೊಹಮ್ಮದ್ ರಿಜ್ವಾನ್ (798) ಅಗ್ರ 2 ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಭಾರತದ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ 3 ಸ್ಥಾನ ಮೇಲೇರಿ 17ರಲ್ಲಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಇವರು ಭಾರತದ ಟಾಪರ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಸ್ಥಾನದಲ್ಲಿ ಆಡಿದ್ದಲ್ಲದೇ ಅವರ ಹೆಸರಲ್ಲಿದ್ದ ದಾಖಲೆ ಪುಡಿಗಟ್ಟಿದ ಶ್ರೇಯಸ್ ಅಯ್ಯರ್!