ETV Bharat / sports

ಪಾಕಿಸ್ತಾನ ಅಭಿಮಾನಿಯೊಂದಿಗೆ ಶೋಯಬ್​ ಅಖ್ತರ್ ಫನ್ನಿ​​ ಮಾತುಕತೆ ವೈರಲ್​​ - ಟಿ20 ವಿಶ್ವಕಪ್‌ನಲ್ಲಿ ನಾಲ್ಕು ತಂಡಗಳು

ಈ ವಿಡಿಯೋದಲ್ಲಿ ಅವರು ಶಾರುಖ್ ಖಾನ್ ಅವರನ್ನೂ ಟ್ಯಾಗ್ ಮಾಡಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ ಪಡೆಯುತ್ತಿದ್ದು, ಟ್ವಿಟರ್ ನಲ್ಲಿ ಇದುವರೆಗೆ 22 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಅವರು ಶಾರುಖ್ ಖಾನ್
ಈ ವಿಡಿಯೋದಲ್ಲಿ ಅವರು ಶಾರುಖ್ ಖಾನ್
author img

By

Published : Nov 8, 2022, 5:16 PM IST

ಹೈದರಾಬಾದ್​​: 2022ರ ಟಿ20 ವಿಶ್ವಕಪ್‌ನಲ್ಲಿ ನಾಲ್ಕು ತಂಡಗಳು ಆಡಲಿವೆ. ನ್ಯೂಜಿಲ್ಯಾಂಡ್​ ಮತ್ತು ಇಂಗ್ಲೆಂಡ್ ಗ್ರೂಪ್-1ರಿಂದ ಕೊನೆಯ ನಾಲ್ಕರ ಘಟ್ಟಕ್ಕೆ ಬಂದರೆ, ಗ್ರೂಪ್-2ರಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ.

ನವೆಂಬರ್ 9 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನವೆಂಬರ್ 10 ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿದ್ದು, ಇಂಗ್ಲೆಂಡ್ ತಂಡ ಭಾರತವನ್ನು ಎದುರಿಸಲಿದೆ.

ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ತಮ್ಮ ತಮ್ಮ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಮೆಲ್ಬೋರ್ನ್‌ನಲ್ಲಿ ಉಭಯ ತಂಡಗಳ ನಡುವೆ ಸೂಪರ್‌ಹಿಟ್ ಫೈನಲ್ ಪಂದ್ಯ ನಡೆಯಲಿದೆ. ಭಾರತ್​​ ಮತ್ತು ಪಾಕಿಸ್ತಾನ ಮುಖಾಮುಖಿ ನೋಡಲು ಅಭಿಮಾನಿಗಳು ಕಾತುರಾರಾಗಿದ್ದಾರೆ. ಪಾಕಿಸ್ತಾನದ ಅನುಭವಿ ಶೋಯೆಬ್ ಅಖ್ತರ್ ಕೂಡ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ಈ ವೇಳೆ ಅಖ್ತರ್ ಅವರು ತಮ್ಮ ಅಭಿಮಾನಿಗಳೊಂದಿಗೆ ಮೋಜಿನ ಸಂಭಾಷಣೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಕಾರಿನಲ್ಲಿ ಕೆಲವು ಅಭಿಮಾನಿಗಳನ್ನು ಭೇಟಿಯಾಗಿ ಮಾತನಾಡುತ್ತಿರುವ ಅವರು, ವಿಶ್ವಕಪ್ ಬಗ್ಗೆ ಪ್ರತಿಕ್ರಿಯಿಸುತ್ತಿರುವುದನ್ನುು ಕಾಣಬಹುದು.

ಈ ವೇಳೆ ಮಾತನಾಡಿದ ಅಭಿಮಾನಿಯೊಬ್ಬರು, ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಆರಂಭಿಕ ಜೋಡಿ ಬದಲಾಯಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಅಖ್ತರ್ ತನ್ನ ಅಭಿಮಾನಿಗಳೊಂದಿಗೆ ಸಾಕಷ್ಟು ತಮಾಷೆ ಮಾಡುತ್ತಿರುವುದು ಕಾಣಬಹುದು.

ಸುಮಾರು ಒಂದೂವರೆ ನಿಮಿಷಗಳ ಈ ವಿಡಿಯೋದಲ್ಲಿ ಗುಂಪಿನಲ್ಲಿ ನಿಂತ ಅಭಿಮಾನಿಯೊಬ್ಬರು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಸಿನಿಮಾದ ಡೈಲಾಗ್​ ಹೊಡೆದಿದ್ದಾನೆ. ಈ ಡೈಲಾಗ್​​ ಅನ್ನು ಆಲಿಸಿದ ಅಖ್ತರ್​​, 'ಜನತೆಯ (ನಮ್ಮ) ಧ್ವನಿ, ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಶುಭಾಶಯ ಮತ್ತು ಶಾರುಖ್ ಖಾನ್ ಬಗ್ಗೆ ಪ್ರೀತಿ ಎಂದಿದ್ದಾರೆ

ಅಷ್ಟೇ ಅಲ್ಲದೇ, ಈ ವಿಡಿಯೋದಲ್ಲಿ ಅವರು ಶಾರುಖ್ ಖಾನ್ ಅವರನ್ನೂ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ ಪಡೆಯುತ್ತಿದ್ದು, ಟ್ವಿಟ್ಟರ್ ನಲ್ಲಿ ಇದುವರೆಗೆ 22 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ನಿಂದ ಮುಂದಿನ ವಾರ ಟೀಂ ಇಂಡಿಯಾ ಕೂಡ ಹೊರಬರಲಿದೆ: ಶೋಯಬ್ ಅಖ್ತರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.