ETV Bharat / sports

IND vs SL 2nd T20: ಶಿಖರ್ ಧವನ್‌ ಫಿಟ್‌, ಕನ್ನಡಿಗ ಪಡಿಕ್ಕಲ್‌ ಸೇರಿ ನಾಲ್ವರು ಪದಾರ್ಪಣೆ

ಶ್ರೀಲಂಕಾ ವಿರುದ್ಧ ಇಂದು ನಡೆಯಲಿರುವ ಎರಡನೇ ಟಿ-20 ಪಂದ್ಯಕ್ಕಾಗಿ ಕ್ಯಾಪ್ಟನ್​ ಶಿಖರ್​ ಧವನ್ ಫಿಟ್​ ಆಗಿದ್ದು, ಉಳಿದಂತೆ ನಾಲ್ವರು ಪದಾರ್ಪಣೆ ಮಾಡಲಿದ್ದಾರೆ.

author img

By

Published : Jul 28, 2021, 7:34 PM IST

Updated : Jul 28, 2021, 8:14 PM IST

Shikar Dhawan
Shikar Dhawan

ಕೊಲಂಬೊ: ಲಂಕಾ ವಿರುದ್ಧ ಇಂದು ಎರಡನೇ ಟಿ-20 ನಡೆಯಲಿದೆ. ಕೊರೊನಾ ವೈರಸ್​ ಹಾವಳಿ ಮಧ್ಯೆ ಪಂದ್ಯ ನಡೆಯುತ್ತಿರುವ ಕಾರಣ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಇಂದಿನ ಪಂದ್ಯಕ್ಕೆ ದೇವದತ್ ಪಡಿಕ್ಕಲ್‌, ಋತುರಾಜ್ ಗಾಯಕ್ವಾಡ್, ನಿತೇಶ್ ರಾಣಾ ಹಾಗು ಚೇತನ್ ಸಕಾರಿಯಾ ಪದಾರ್ಪಣೆ ಮಾಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಿಖರ್​​ ಧವನ್​ ಫಿಟ್​ ಆಗಿದ್ದು, ತಂಡ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಆಲ್​ರೌಂಡರ್ ಕೃನಾಲ್ ಪಾಂಡ್ಯಾಗೆ ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರಿಗೂ ಆರ್​ಟಿ-ಪಿಸಿಆರ್​ ಟೆಸ್ಟ್​ ಮಾಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ಎರಡು ಪಂದ್ಯಗಳಿಂದ ಹಾರ್ದಿಕ್ ಪಾಂಡ್ಯಾ, ಸೂರ್ಯಕುಮಾರ್​ ಯಾದವ್​, ಪೃಥ್ವಿ ಶಾ, ದೀಪಕ್​ ಚಹರ್​, ಕೆ.ಗೌತಮ್​, ಇಶಾನ್​ ಕಿಶನ್​, ಯಜುವೇಂದ್ರ ಚಹಲ್​ ತಂಡದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕೃನಾಲ್​ ಪ್ರಾಥಮಿಕ ಸಂಪರ್ಕ: ಧವನ್​ ಸೇರಿ ಈ 8 ಪ್ಲೇಯರ್ಸ್ 2ನೇ​ T20 ಪಂದ್ಯದಿಂದ ಹೊರಕ್ಕೆ?

ಭುವನೇಶ್ವರ್ ಕುಮಾರ್ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಆರಂಭಿಕ ಸ್ಥಾನದಲ್ಲಿ ಋತುರಾಜ್ ಗಾಯಕ್ವಾಡ್‌ ಹಾಗೂ ದೇವದತ್​ ಪಡಿಕ್ಕಲ್​ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಇದರ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಯಾವುದೇ ರೀತಿಯ ಖಚಿತ ಮಾಹಿತಿ ಹಂಚಿಕೊಂಡಿಲ್ಲ.

ರಾಹುಲ್​ ದ್ರಾವಿಡ್ ಹೇಳಿದ್ದು..

ಇಂದಿನ ಪಂದ್ಯದಲ್ಲಿ ಕೃನಾಲ್ ಪಾಂಡ್ಯಾ ಆಡುತ್ತಿಲ್ಲ. ಆದರೆ 11ರ ಬಳಗದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತಿದೆ. ತಂಡ ಸಮತೋಲನದಿಂದ ಕೂಡಿದ್ದು, ಉತ್ತಮ ಪ್ರದರ್ಶನ ನೀಡಲಿದೆ. ದೀಪಕ್​ ಚಹರ್ ಹಾಗೂ ಮನೀಷ್ ಪಾಂಡೆ ಕೂಡ ಇಂದಿನ ಪಂದ್ಯಕ್ಕೆ ಲಭ್ಯರಿಲ್ಲ ಎಂದಿದ್ದಾರೆ.

Last Updated : Jul 28, 2021, 8:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.