ETV Bharat / sports

ಹುಟ್ಟೂರು ಮೆಲ್ಬೋರ್ನ್​​ನಲ್ಲಿ ದಿಗ್ಗಜ ಕ್ರಿಕೆಟಿಗ ಶೇನ್​ ವಾರ್ನ್​​ ಅಂತ್ಯಕ್ರಿಯೆ - ಮೆಲ್ಬೋರ್ನ್​​ನಲ್ಲಿ ಶೇನ್​ ವಾರ್ನ್​​ ಅಂತ್ಯಕ್ರಿಯೆ

ಮೆಲ್ಬೋನ್​ನಲ್ಲಿ ನಡೆದ ಶೇನ್​ ವಾರ್ನ್ ಅಂತ್ಯಕ್ರಿಯೆಯಲ್ಲಿ ಮೂವರು ಮಕ್ಕಳು ಮತ್ತು ತಂದೆ-ತಾಯಿ ಮತ್ತು ಹಿರಿಯ ಕ್ರಿಕೆಟಿಗರಾದ ಮಾರ್ಕ್ ಟೇಲರ್, ಅಲನ್ ಬಾರ್ಡರ್ ಮತ್ತು ಮೈಕೆಲ್ ವಾನ್​ ಸೇರಿ 80ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

shane warne
shane warne
author img

By

Published : Mar 20, 2022, 12:41 PM IST

ಮೆಲ್ಬೋರ್ನ್​​ (ಆಸ್ಟ್ರೇಲಿಯಾ): ವಿಶ್ವದ ದಿಗ್ಗಜ ಕ್ರಿಕೆಟಿಗ, ಆಸ್ಟ್ರೇಲಿಯಾದ ಆಟಗಾರ ಶೇನ್​ ವಾರ್ನ್​​ ಅವರ ಅಂತ್ಯಕ್ರಿಯೆ ತಮ್ಮ ಹುಟ್ಟೂರು ಮೆಲ್ಬೋರ್ನ್​​ನಲ್ಲಿ ನಡೆದಿದೆ.

ಶ್ರೇಷ್ಠ ಸ್ಪೀನರ್​​ ಆಗಿದ್ದ 52 ವರ್ಷದ ವಾರ್ನ್ ಥಾಯ್ಲೆಂಡ್‌ನಲ್ಲಿ ಮಾ.4ರಂದು ನಿಧನರಾಗಿದ್ದರು. ಕಳೆದ ವಾರ ಅವರ ಪಾರ್ಥಿವ ಶರೀರವನ್ನು ಮೆಲ್ಬೋನ್​ಗೆ ತರಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಮೂವರು ಮಕ್ಕಳು ಮತ್ತು ತಂದೆ-ತಾಯಿ ಮತ್ತು ಆಪ್ತರು ಪಾಲ್ಗೊಂಡಿದ್ದರು. ಹಿರಿಯ ಕ್ರಿಕೆಟಿಗರಾದ ಮಾರ್ಕ್ ಟೇಲರ್, ಅಲನ್ ಬಾರ್ಡರ್ ಮತ್ತು ಮೈಕೆಲ್ ವಾನ್​ ಸೇರಿ 80ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.

ಮಾ.30ರಂದು ಮೆಲ್ಬೋರ್ನ್​​ ಕ್ರಿಕೆಟ್​ ಮೈದಾನದಲ್ಲಿ ದಿಗ್ಗಜ ಕ್ರಿಕೆಟಿಗನ ನೆನಪಿನಲ್ಲಿ ಸ್ಮರಣಾರ್ಥ ಸಂತಾಪ ಸಭೆ ನಡೆಯಲಿದ್ದು, ಅಂದು ಸಾರ್ವಜನಿಕರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿದೆ. ಅಲ್ಲದೇ, ಮೈದಾನದ ದಕ್ಷಿಣ ಗ್ಯಾಲರಿಗೆ ಗೌರವಾರ್ಥವಾಗಿ ವಾರ್ನ್ ಹೆಸರು ಮರುನಾಮಕರಣ ಮಾಡಲಾಗುತ್ತದೆ.

ಇದನ್ನೂ ಓದಿ: ವನಿತೆಯರ ವಿಶ್ವಕಪ್: ಕಿವೀಸ್ ವಿರುದ್ಧ 1 ವಿಕೆಟ್​ನಿಂದ​ ರೋಚಕ ಗೆಲುವಿನ ನಗೆ ಬೀರಿದ ಇಂಗ್ಲೆಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.