ಮೆಲ್ಬೋರ್ನ್: ಹೃದಯಘಾತದಿಂದ ನಿಧನರಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅವರ ಪಾರ್ಥಿವ ಶರೀರ ಗುರುವಾರ ಬ್ಯಾಂಕಾಕ್ನಿಂದ ಮೆಲ್ಬೋರ್ನ್ ನಗರಕ್ಕೆ ತಲುಪಿದೆ.
ವಿಶ್ವಕಂಡ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾದ ವಾರ್ನ್ ರಜಾ ದಿನಗಳನ್ನು ಕಳೆಯಲು ಥಾಯ್ಲೆಂಡ್ನ ದಕ್ಷಿಣದಲ್ಲಿರುವ ಸಮುಯಿ ದ್ವೀಪಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕಳೆದ ಶುಕ್ರವಾರ ಹಠಾತ್ ಹೃದಯಾಘಾತ ಸಂಭವಿಸಿ ನಿಧನರಾಗಿದ್ದರು.
ಆಸ್ಟ್ರೇಲಿಯಾದ ರಾಷ್ಟ್ರೀಯ ಧ್ವಜದಿಂದ ಸುತ್ತಿರುವ ಶವಪೆಟ್ಟಿಗೆಯಲ್ಲಿ ಶೇನ್ ವಾರ್ನ್ ಅವರ ಪಾರ್ಥಿವ ಶರೀರ ಖಾಸಗಿ ವಿಮಾನದ ಮೂಲಕ ರಾತ್ರಿ 8:30ಕ್ಕೆ(ಆಸ್ಟ್ರೇಲಿಯಾ ಕಾಲಮಾನ) ಮೆಲ್ಬೋರ್ನ್ ನಗರ ತಲುಪಿದೆ ಎಂದು ತಿಳಿದುಬಂದಿದೆ.
"ವಾರ್ನ್ ಮೃತದೇಹ ಗುರುವಾರ ರಾತ್ರಿ 8:30ಕ್ಕೆ ಖಾಸಗಿ ವಿಮಾನದ ಮೂಲಕ ಮೆಲ್ಬೋರ್ನ್ನ ಎಸೆಂಡನ್ ಫೀಲ್ಡ್ಸ್ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ವಾರ್ನ್ ಪಿಎ ಹಾಗೂ ಸ್ನೇಹಿತ ಹೆಲೆನ್ ನೊಲಾನ್ ಸೇರಿದಂತೆ ಸಾಕಷ್ಟು ಅಭಿಮಾನಿಗಳು ಖಾಸಗಿ ವಿಮಾನವನ್ನು ಬರಮಾಡಿಕೊಂಡಿದ್ದಾರೆ" ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ.
ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳನ್ನಾಡಿದ್ದ ವಾರ್ನ್ 15 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ 708 ವಿಕೆಟ್, 194 ಏಕದಿನ ಪಂದ್ಯಗಳಿಂದ 293 ವಿಕೆಟ್ ಪಡೆದಿದ್ದರು. ಮಾರ್ಚ್ 30ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ:ಕ್ರಿಕೆಟ್ ದಂತಕತೆ ಶೇನ್ ವಾರ್ನ್ಗೆ ಮಾ.30ರಂದು ಎಂಸಿಜಿಯಲ್ಲಿ ಸ್ಮರಣಾ ಕಾರ್ಯಕ್ರಮ